ಬೆಂಗಳೂರು: ಕುರುಬರ ಎಸ್ಟಿ ಮೀಸಲಾತಿಯ ಬಗ್ಗೆ ಮಾತನಾಡಿದ್ದ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಮತ್ತು ಮೈಸೂರಿನ ಕೆ.ಆರ್ ಕ್ಷೇತ್ರದ ಶಾಸಕ ಶ್ರೀವತ್ಸ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಬೆಂಗಳೂರಿನ (Bengaluru) ವಿಧಾನಸೌಧ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದೆ. ಪರಿಶಿಷ್ಟ ಪಂಗಡ ಮತ್ತು ವಾಲ್ಮೀಕಿ ಸಮುದಾಯದವರು ಕುರುಬ ಸಮುದಾಯದ ಬಗ್ಗೆ ದಂಗೆ ಏಳಬೇಕು ಅಂತ ಎಂಎಲ್‌ಸಿ ಹಾಗೂ ಶಾಸಕರು ಹೇಳಿಕೆ ಕೊಟ್ಟಿದ್ರು. ಈ ಸಂಬಂಧ ಕುರುಬ ಸಮುದಾಯದ ಮುಖಂಡ ಸಿದ್ದಣ್ಣ ತೇಜಿ, ಡಿಜಿ & ಐಜಿಪಿಗೆ ದೂರು ನೀಡಿದ್ದರು. ಇದನ್ನೂ ಓದಿ: ಸೆ.22 ರಿಂದ ಜಾತಿ ಜನಗಣತಿ ಆರಂಭ – ಸರ್ಕಾರದಿಂದ ಅಧಿಕೃತ ಆದೇಶ ಜಾರಿ
ದೂರಿನ ಅನ್ವಯ ಬಿಎನ್‌ಎಸ್ 353(2) (ಎರಡು ಸಮುದಾಯಗಳ ನಡುವೆ ದ್ವೇಷ ಬಿತ್ತುವ ಹೇಳಿಕೆ) ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ವರ್ಷದ ಹಿಂದೆಯೇ ತಿಮರೋಡಿ ಜೊತೆ ಚಿನ್ನಯ್ಯ ಮಾತುಕತೆ – ಸ್ಫೋಟಕ ವಿಡಿಯೋ ರಿಲೀಸ್