ಪಾಕಿಸ್ತಾನಕ್ಕೆ ಸಾಲ ನೀಡಿದ ಚೀನಾ – ಅಮೆರಿಕ ಕಳವಳ

Public TV
1 Min Read

ಇಸ್ಲಾಮಾಬಾದ್: ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪಾಕಿಸ್ತಾನಕ್ಕೆ (Pakistan) ಆಪತ್ಭಾಂದವ, ಮಿತ್ರನೇ ಆಗಿರುವ ಚೀನಾ (China) 5,804 ಕೋಟಿ ರೂ. (700 ಮಿಲಿಯನ್‌ ಡಾಲರ್‌) ಸಾಲ ನೀಡಿದೆ.

ಈ ವಾರದ ಆರಂಭದಲ್ಲಿ ಪಾಕಿಸ್ತಾನವು ಚೀನಾದಿಂದ ಸಹಾಯ ಪಡೆಯಲಿದೆ ಎಂದು ಹಣಕಾಸು ಸಚಿವ ಇಶಾಕ್ ದಾರ್ ಎಂದು ಹೇಳಿದ್ದರು. ಅದರಂತೆ ಹಣವನ್ನು ಪಡೆಯಲಾಗಿದೆ ಎಂದು ಖಚಿತಪಡಿಸಿದ್ದಾರೆ. ಇದನ್ನೂ ಓದಿ: ಬ್ರಿಟನ್‌ನಲ್ಲಿ ಹಣ್ಣು-ತರಕಾರಿಗಳಿಗೆ ಹಾಹಾಕಾರ ಸಾಧ್ಯತೆ

“ಚೀನಾ ಡೆವಲಪ್‌ಮೆಂಟ್ ಬ್ಯಾಂಕ್‌ನಿಂದ ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ್ (SBP) 700 ಮಿಲಿಯನ್ ಡಾಲರ್‌ ಹಣವನ್ನು ಸ್ವೀಕರಿಸಿದೆ” ಎಂದು ಟ್ವೀಟ್‌ ಮಾಡಿ ತಿಳಿಸಿದ್ದಾರೆ.

ಪಾಕಿಸ್ತಾನವು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯಿಂದ (IMF) ನೆರವು ಕೇಳಿತ್ತು. ಇದೇ ಸಂದರ್ಭದಲ್ಲಿ ಚೀನಾ ಆರ್ಥಿಕ ಸಹಾಯ ನೀಡಿದೆ. ಚೀನಾದ ಸಹಾಯವನ್ನು ಎಂದಿಗೂ ಮರೆಯುವುದಿಲ್ಲ ಎಂದು ಪಾಕ್‌ ಸರ್ಕಾರ ಕೃತಜ್ಞತೆ ಸಲ್ಲಿಸಿದೆ. ಇದನ್ನೂ ಓದಿ: ಸಚಿವರು ವಿಮಾನದ ಬ್ಯುಸಿನೆಸ್‌ ಕ್ಲಾಸ್‌ನಲ್ಲಿ ಪ್ರಯಾಣಿಸುವಂತಿಲ್ಲ, 5 ಸ್ಟಾರ್‌ ಹೋಟೆಲ್‌ನಲ್ಲಿ ಉಳಿಯುವಂತಿಲ್ಲ – ಪಾಕ್‌ ಸರ್ಕಾರ

ಹಣಕಾಸು ನೆರವಿನ ವಿಚಾರವಾಗಿ ಐಎಂಎಫ್‌ನೊಂದಿಗೆ ಪಾಕಿಸ್ತಾನ ಸರ್ಕಾರ ನಿರಂತರ ಮಾತುಕತೆ ನಡೆಸುತ್ತಿದೆ. ಆದರೆ ಇದುವರೆಗೂ ನೆರವು ಸಿಕ್ಕಿಲ್ಲ. ಇಂತಹ ಸನ್ನಿವೇಶದಲ್ಲಿ ಚೀನಾ ಸಾಲ ನೀಡಿರುವುದು ಅಮೆರಿಕ ಆತಂಕಕ್ಕೆ ಕಾರಣವಾಗಿದೆ.

“ಭಾರತದ (India) ನೆರೆ ರಾಷ್ಟ್ರಗಳಾದ ಪಾಕಿಸ್ತಾನ, ಶ್ರೀಲಂಕಾ ಹಾಗೂ ನೇಪಾಳಕ್ಕೆ ಚೀನಾ ನೀಡಿದೆ. ಇದು ನಿಜಕ್ಕೂ ಕಳವಳಕಾರಿಯಾದದ್ದು. ಸಾಲ ನೀಡುವ ಮೂಲಕ ಈ ರಾಷ್ಟ್ರಗಳನ್ನು ಬಲವಂತವಾಗಿ ಹತೋಟಿಗೆ ತರುವ ಸಾಧ್ಯತೆ ಇದೆ” ಎಂದು ದಕ್ಷಿಣ ಹಾಗೂ ಮಧ್ಯ ಏಷ್ಯಾಗೆ ಸಹ ಕಾರ್ಯದರ್ಶಿಯಾಗಿರುವ ಡೊನಾಲ್ಡ್‌ ಲು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *