ಇಡಿ ಅಧಿಕಾರಿಗಳಿಂದ ಸಚಿವ ಸೇಂಥಿಲ್ ಸಹೋದರನಿಗೂ ಸಮನ್ಸ್ ಜಾರಿ

Public TV
1 Min Read

ಚೆನ್ನೈ: ಅಬಕಾರಿ ಸಚಿವ ಸೇಂಥಿಲ್ ಬಾಲಾಜಿ (Senthil Balaji) ಬಂಧನದ ಬೆನ್ನಲ್ಲೇ ಇದೀಗ ಸಹೋದರ ಅಶೋಕ್ ಕುಮಾರ್ (Ashok Kumar) ಗೆ ಕೂಡ ಜಾರಿ ನಿರ್ದೇಶನಾಲಯ (ED) ಸಮನ್ಸ್ ಜಾರಿ ಮಾಡಿದೆ.

ಹೌದು. ಉದ್ಯೋಗ ಹಗರಣದ ಆರೋಪದ ಮೇಲೆ ಅಧಿಕಾರಿಗಳು ಈ ಸಮನ್ಸ್ ಜಾರಿ ಮಾಡಲಾಗಿದೆ. ಮೂಲಗಳ ಪ್ರಕಾರ, ಉದ್ಯೋಗ ನೀಡುವುದಾಗಿ ಹೇಳಿ ಅಶೋಕ್ ಕುಮಾರ್ ಸಾಕಷ್ಟು ಹಣ ಪಡೆದಿದ್ದಾರೆ ಎಂದು ಈ ಹಿಂದೆ ಹಲವು ದೂರುಗಳು ಬಂದಿದ್ದವು. ಇದನ್ನೂ ಓದಿ: ಸಚಿವ ಸೆಂಥಿಲ್‌ ಬಾಲಾಜಿಗೆ ಶೀಘ್ರವೇ ಬೈಪಾಸ್‌ ಸರ್ಜರಿ ಅಗತ್ಯ – ಇಡಿ ಅರೆಸ್ಟ್‌ ಬೆನ್ನಲ್ಲೇ ವೈದ್ಯರ ಸಲಹೆ

ಮಂಗಳವಾರ ಬೆಳಗ್ಗೆ ಅಬಕಾರಿ ಮತ್ತು ಇಂಧನ ಸಚಿವರಾಗಿದ್ದ ಸೇಂಥಿಲ್ ಬಾಲಾಜಿ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದರು. ಬಂಧನವಾಗಿ ಕಾರಿನಲ್ಲಿ ಹೋಗುತ್ತಿದ್ದಾಗ ಹೈಡ್ರಾಮವೇ ಸೃಷ್ಟಿಯಾಗಿತ್ತು. ಎದೆಯ ಮೇಲೆ ಕೈಯನ್ನು ಇಟ್ಟು ಸೇಂಥಿಲ್ ಬಾಲಾಜಿ ಕಣ್ಣೀರು ಹಾಕಿ ಗೋಳಾಡಿದ್ದರು. ನಂತರ ಅವರನ್ನು ಚೆನ್ನೈನಲ್ಲಿರುವ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಸೇಂಥಿಲ್ ಅವರನ್ನು ಪರೀಕ್ಷಿಸಿದ ಬಳಿಕ ಮಲ್ಟಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ದೇಶಕರು ಮೆಡಿಕಲ್ ಬುಲೆಟಿನ್ ಪ್ರಕಟಿಸಿದ್ದಾರೆ. ಬೆಳಗ್ಗೆ 10:40ಕ್ಕೆ ಕೊರೊನರಿ ಆಂಜಿಯೋಗ್ರಾಮ್ ನಡೆಯಿತು. ಈ ವೇಳೆ ಹೃದಯದಲ್ಲಿ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೂಡಲೇ ಬೈಪಾಸ್ ಶಸ್ತ್ರಚಿಕಿತ್ಸೆ ಮಾಡಬೇಕೆಂದು ಸಲಹೆ ನೀಡಲಾಗಿತ್ತು.

Share This Article