ಪತ್ನಿ ಕೊಂದು ಮನೆಯಲ್ಲೇ ಹೂತಿದ್ದ ಕೇಸ್ – ಕೊಲೆ ಬಳಿಕ ನಾಪತ್ತೆಯಾಗಿರುವ ನಾಟಕವಾಡಿ ದೂರು ನೀಡಿದ್ದ ಹಂತಕ

1 Min Read

ವಿಜಯಪುರ: ಪತ್ನಿ ಕೊಂದು ಮನೆಯಲ್ಲೇ ಹೂತು ಹಾಕಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಕೊಲೆ ಬಳಿಕ ನಾಪತ್ತೆಯಾಗಿರುವ ನಾಟಕವಾಡಿ ಪೊಲೀಸರಿಗೆ ಪತ್ನಿಯನ್ನು ಹುಡುಕಿಕೊಡುವಂತೆ ದೂರು ನೀಡಿದ್ದ ಎಂದು ತಿಳಿದುಬಂದಿದೆ.

ಹಂತಕ ಪತಿಯನ್ನು ಪ್ರಭು ರತ್ನಾಕರ್ (46) ಹಾಗೂ ಮೃತ ಪತ್ನಿಯನ್ನು ಸರೋಜಿನಿ ರತ್ನಾಕರ (45) ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಸಾಲದ ವಿಷಯಕ್ಕೆ ದಂಪತಿ ಮಧ್ಯೆ ಜಗಳ – ರಾಡ್‌ನಿಂದ ಪತ್ನಿಯ ಹತ್ಯೆಗೈದು ಮನೆಯಲ್ಲೇ ಹೂತುಹಾಕಿದ್ದ ಹಂತಕ ಪತಿ

ಪತ್ನಿ ಸರೋಜಿನಿ ಹೆಸರಲ್ಲಿ ಪ್ರಭು ಸಿಕ್ಕಾಪಟ್ಟೆ ಸಾಲ ಮಾಡಿದ್ದ. ಸಾಲದ ವಿಷಯವಾಗಿ ಇಬ್ಬರ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು. ಅದೇ ರೀತಿ ಜ.23ರಂದು ರಾತ್ರಿ ಇಬ್ಬರ ಮಧ್ಯೆ ಜಗಳವಾಗಿತ್ತು. ಜ.24ರಂದು ಸರೋಜಿನಿ ತಲೆಗೆ ಪತಿ ಹಾರಿಯಿಂದ ಹೊಡೆದು ಕೊಲೆ ಕೊಲೆ ಮಾಡಿದ ಬಳಿಕ ಶವವನ್ನು ಮನೆಯ ಆವರಣದಲ್ಲಿ ಗಿಡ ನೆಡುವ ಜಾಗದಲ್ಲಿ ಹೂತುಹಾಕಿದ್ದ. ಬಳಿಕ ಮಾರುಕಟ್ಟೆಗೆ ಹೋದ ನನ್ನ ಹೆಂಡತಿ ಮರಳು ಮನೆಗೆ ಬಂದಿಲ್ಲ ಎಂದು ತಿಳಿಸಿ, ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ನಾಪತ್ತೆಯಾಗಿರುವುದಾಗಿ ದೂರು ದಾಖಲಿಸಿದ್ದ. ಸರೋಜಿನಿ ಕುಟುಂಬಸ್ಥರ ಜೊತೆಗೆ ಪತ್ನಿಯನ್ನ ಹುಡುಕುವ ನಾಟಕವಾಡಿದ್ದ ಎಂದು ತನಿಖೆ ವೇಳೆ ತಿಳಿದುಬಂದಿದೆ.

24 ದಿನಗಳ ನಂತರ ಪೊಲೀಸರ ತನಿಖೆಯಲ್ಲಿ ಪಾಪಿ ಪತಿಯ ನಾಟಕ ಬಯಲಾಗಿದೆ. ಸದ್ಯ ಆರೋಪಿ ಕಸ್ಟಡಿಯಲ್ಲಿದ್ದು, ಕಾನೂನು ಪ್ರಕಾರ ಪೊಲೀಸರು ಶವ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿ, ಬಳಿಕ ಸಂಬಂಧಿಕರಿಗೆ ಶವ ಹಸ್ತಾಂತರಿಸಲಿದ್ದಾರೆ. ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಎಪ್‌ಸ್ಟೈನ್‌ ವಿವಾದ; ಇಂಡಿಯಾ AI ಇಂಪ್ಯಾಕ್ಟ್ ಶೃಂಗಸಭೆಗೆ ಬಿಲ್ ಗೇಟ್ಸ್ ಗೈರು

Share This Article