ಜಗನ್ ಪೋಸ್ಟರ್ ಹರಿದ ಶ್ವಾನದ ವಿರುದ್ಧ ಕೇಸ್ ದಾಖಲು

Public TV
1 Min Read

ಅಮರಾವತಿ: ಆಂಧ್ರಪ್ರದೇಶ (Andhrapradesh) ದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ (Jagan Mohan Reddy) ಪೋಸ್ಟರ್ ಕಿತ್ತ ಶ್ವಾದ ವಿರುದ್ಧ ಕೆಸ್ ದಾಖಲಿಸಿದ ಅಚ್ಚರಿಯ ಘಟನೆಯೊಂದು ವಿಜಯವಾಡದಲ್ಲಿ ನಡೆದಿದೆ.

ವಿಜಯವಾಡದ ಶ್ರೀಕಾಕುಳಂ ಜಿಲ್ಲೆಯ ಪುಟ್ಟ ಹಳ್ಳಿಯೊಂದರ ಮನೆಯ ಗೋಡೆಯ ಮೇಲೆ ‘ಜಗನಣ್ಣ ನಮ್ಮ ಭವಿಷ್ಯ’ ಎಂಬ ಸಣ್ಣ ಪೋಸ್ಟರ್ ಅಂಟಿಸಲಾಗಿತ್ತು. ಇದನ್ನು ರಾತ್ರಿ ಹೊತ್ತಲ್ಲಿ ಶ್ವಾನ (Dog) ಕಿತ್ತು ಹಾಕಿದೆ. ಇದಕ್ಕೆ ಪಕ್ಷದ ಕಾರ್ಯಕರ್ತೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗೋಡೆಗೆ ಅಂಟಿಸಿದ ಪೋಸ್ಟರ್ ಅನ್ನು ಶ್ವಾನ ಕಿತ್ತು ಹಾಕುತ್ತಿರುವ ದೃಶ್ಯವನ್ನು ಅಲ್ಲೇ ಇದ್ದವರು ವೀಡಿಯೋ ಮಾಡಿದ್ದು, ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ: ಬಿಜೆಪಿಯಿಂದ ಟಿಕೆಟ್‌ ಸಿಗ್ಲಿಲ್ಲ ಅಂತಾ ಬೆಂಬಲಿಗರ ಸಭೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ಟಿಕೆಟ್‌ ವಂಚಿತೆ ನಾಗಶ್ರೀ

ಟಿಡಿಪಿ ನಾಯಕ ದಸರಿ ಶ್ರೀ ಅವರು ಪಾಯಕರಾವ್ಪೇಟೆ ಪೊಲೀಸ್ ಠಾಣೆಯಲ್ಲಿ ಶ್ವಾನದ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಅಲ್ಲದೆ ಕೂಡಲೇ ಶ್ವಾನವನ್ನು ಬಂಧಿಸಿ, ತಕ್ಕ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

Share This Article