21 ಚರ್ಚ್‌ಗಳನ್ನು ಧ್ವಂಸಗೊಳಿಸಿದ 600 ಜನರ ಮೇಲೆ ಕೇಸ್ – 135 ಆರೋಪಿಗಳನ್ನು ಬಂಧಿಸಿದ ಪಾಕ್ ಪೊಲೀಸರು

Public TV
1 Min Read

ಇಸ್ಲಾಮಾಬಾದ್: ಕ್ರಿಶ್ಚಿಯನ್ (Christian) ಕುಟುಂಬವೊಂದು ಧರ್ಮನಿಂದನೆ ಮಾಡಿದ ಆರೋಪದ ಮೇಲೆ ಉದ್ರಿಕ್ತ ಗುಂಪು ಪಾಕಿಸ್ತಾನದ (Pakistan) ಪಂಜಾಬ್ (Punjab) ಪ್ರಾಂತ್ಯದಲ್ಲಿ 21 ಚರ್ಚ್‌ಗಳನ್ನು (Church) ಧ್ವಂಸಗೊಳಿಸಿತ್ತು. ದಾಳಿಗೆ ಸಂಬಂಧಿಸಿಂತೆ 600 ಜನರ ಮೇಲೆ ಕೇಸ್ ದಾಖಲಾಗಿದ್ದು, ಪಾಕಿಸ್ತಾನದ ಅಧಿಕಾರಿಗಳು ಇಲ್ಲಿಯವರೆಗೆ 135 ಆರೋಪಿಗಳನ್ನು ಬಂಧಿಸಿದ್ದಾರೆ.

ಪಂಜಾಬ್‌ನ ರಾಜಧಾನಿ ಲಾಹೋರ್‌ನಿಂದ (Lahore) ಸುಮಾರು 130 ಕಿ.ಮೀ ದೂರದಲ್ಲಿರುವ ಫೈಸಲಾಬಾದ್ ಜಿಲ್ಲೆಯ ಜರನ್‌ವಾಲಾ ಪಟ್ಟಣದಲ್ಲಿ ಧರ್ಮನಿಂದನೆಯ ಆರೋಪದ ಮೇಲೆ ಕೆರಳಿದ ಗುಂಪೊಂದು ಬುಧವಾರ 21 ಚರ್ಚ್ಗಳು ಹಾಗೂ ಹಲವಾರು ಕ್ರಿಶ್ಚಿಯನ್ನರ ಮನೆಗಳನ್ನು ಸುಟ್ಟುಹಾಕಿದೆ. ಕ್ರಿಶ್ಚಿಯನ್ ಸ್ಮಶಾನ ಮತ್ತು ಸ್ಥಳೀಯ ಸಹಾಯಕ ಆಯುಕ್ತರ ಕಚೇರಿಯನ್ನೂ ಧ್ವಂಸಗೊಳಿಸಿದೆ.

ಘಟನೆಗೆ ಸಂಬಂಧಿಸಿದಂತೆ ಸರ್ಕಾರ ಗುರುವಾರ ಗಲಭೆಯ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಿದೆ. ಹಾಗೂ ಹಾನಿಗೊಳಗಾದ ಎಲ್ಲಾ ಚರ್ಚ್‌ಗಳು ಹಾಗೂ ಅಲ್ಪಸಂಖ್ಯಾತರ ಮನೆಗಳನ್ನು ಮರು ನಿರ್ಮಾಣ ಮಾಡುವ ಭರವಸೆ ನೀಡಿದೆ. ಇದನ್ನೂ ಓದಿ: ಶಾಲಾ ಮಕ್ಕಳಿಗೆ ಗುಡ್‌ನ್ಯೂಸ್ – ಇಂದಿನಿಂದ ವಾರದಲ್ಲಿ 2 ದಿನ ಮೊಟ್ಟೆ ವಿತರಣೆ

ಭಯೋತ್ಪಾದನೆ ಹಾಗೂ ಧರ್ಮನಿಂದನೆ ಆರೋಪದಡಿಯಲ್ಲಿ 600 ಶಂಕಿತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪಂಜಾಬ್ ಉಸ್ತುವಾರಿ ಮಾಹಿತಿ ಸಚಿವ ಅಮೀರ್ ಮಿರ್ ತಿಳಿಸಿದ್ದಾರೆ. ಜರನ್‌ವಾಲಾದಲ್ಲಿ ಅಲ್ಪಸಂಖ್ಯಾತ ಸಮುದಾಯದ ಚರ್ಚ್‌ಗಳು ಹಾಗೂ ಮನೆಗಳ ಮೇಲೆ ದಾಳಿ ನಡೆಸಿದ 135 ದುಷ್ಕರ್ಮಿಗಳನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ತೆಹ್ರೀಕ್-ಇ-ಲಬ್ಬೈಕ್ ಪಾಕಿಸ್ತಾನ್ ಎಂಬ ಉಗ್ರಗಾಮಿ ಗುಂಪಿನ ಸದಸ್ಯರು ಕೂಡಾ ಸೇರಿದ್ದಾರೆ ಎಂದು ಪಂಜಾಬ್ ಪೊಲೀಸರು ತಿಳಿಸಿದ್ದಾರೆ.

ಸದ್ಯ ಪ್ರದೇಶದಲ್ಲಿ ಪರಿಸ್ಥಿತಿಯನ್ನು ತಿಳಿಗೊಳಿಸಲಾಗಿದೆ. ಅಲ್ಪಸಂಖ್ಯಾತ ಕ್ರಿಶ್ಚಿಯನ್ ಸಮುದಾಯದ ಚರ್ಚ್‌ಗಳು ಮತ್ತು ಮನೆಗಳ ಹೊರಗೆ ಪೊಲೀಸ್ ಮತ್ತು ರೇಂಜರ್‌ಗಳ ಭಾರೀ ತುಕಡಿಯನ್ನು ನಿಯೋಜಿಸಲಾಗಿದೆ ಎಂದು ಮಿರ್ ಹೇಳಿದ್ದಾರೆ. ಹಲವು ಕಟ್ಟಡಗಳನ್ನು ಧ್ವಂಸಗೊಳಿಸುವ ದುಷ್ಕರ್ಮಿಗಳ ಪ್ರಯತ್ನವನ್ನು ವಿಫಲಗೊಳಿಸಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಾನ್‌ವೆಜ್ ಪ್ರಿಯರಿಗೆ ಬ್ಯಾಡ್ ನ್ಯೂಸ್- ಚಿಕನ್ ಬೆಲೆಯಲ್ಲಿಯೂ ಏರಿಕೆ!

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್