ಜಿಎಸ್‌ಟಿ ಸ್ಲ್ಯಾಬ್‌ನಲ್ಲಿ ಬದಲಾವಣೆ; ಕಾರು, ಮೊಬೈಲ್, ಕಂಪ್ಯೂಟರ್ – ಯಾವ್ಯಾವುದರ ಬೆಲೆ ಇಳಿಕೆ?

Public TV
1 Min Read

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಸ್ವಾತಂತ್ರ‍್ಯ ದಿನಾಚರಣೆ ದಿನ ದೇಶದ ಜನತೆಗೆ ಜಿಎಸ್‌ಟಿ (GST) ಕಡಿತದ ಬಗ್ಗೆ ಗುಡ್ ನ್ಯೂಸ್ ನೀಡಿದ್ದರು. ಅದರಂತೆ ದೇಶದ ಜನತೆಗೆ ಕೇಂದ್ರ ಸರ್ಕಾರದಿಂದ ದೀಪಾವಳಿ ಗಿಫ್ಟ್ ನೀಡೋಕೆ ಮುಂದಾಗಿದೆ. ಜಿಎಸ್‌ಟಿ ಸ್ಲ್ಯಾಬ್‌ನಲ್ಲಿ (GST Slab) ಬದಲಾವಣೆಗಳಾಗಲಿದ್ದು, ಹಲವು ವಸ್ತುಗಳ ಮೇಲಿನ ಬೆಲೆ ಕಡಿತಗೊಳ್ಳಲಿದೆ.

ದಿನ ನಿತ್ಯ ಬಳಕೆ ವಸ್ತುಗಳ ಮೇಲಿನ ಜಿಎಸ್‌ಟಿ ಶೇಕಡಾ 90ರಷ್ಟು ಇಳಿಕೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಶೇಕಡಾ 28ರಷ್ಟಿದ್ದ ಜಿಎಸ್‌ಟಿಯನ್ನು ಶೇಕಡಾ 18ಕ್ಕೆ, ಶೇಕಡಾ 12ರಷ್ಟಿದ್ದ ಜಿಎಸ್‌ಟಿ ಶೇಕಡಾ 5ಕ್ಕೆ ಇಳಿಕೆಯಾಗಲಿದೆ. ಪ್ರತಿ ನಿತ್ಯ ಬಳಕೆ ಮಾಡುವ ವಸ್ತುಗಳ ಮೇಲಿನ ಜಿಎಸ್‌ಟಿ ಶೇಕಡಾ 5ಕ್ಕೆ ಇಳಿಕೆ ಮಾಡಲಾಗುತ್ತದೆ. ಈ ಕುರಿತು ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಮಹತ್ವದ ಚರ್ಚೆ ನಡೆದಿದೆ. ಇದನ್ನೂ ಓದಿ: ಧರ್ಮಸ್ಥಳ ಹೆಸರಿಗೆ ಕೆಸರು ಎರಚುವ ಹುನ್ನಾರದಲ್ಲಿ ಸರ್ಕಾರವೂ ಶಾಮೀಲು: ಸುನಿಲ್ ಕುಮಾರ್

ಕಾರು, ಬೈಕ್, ಬೈಸಿಕಲ್, ಕಂಪ್ಯೂಟರ್, ಮೊಬೈಲ್, ಟೂತ್‌ಪೇಸ್ಟ್, ಛತ್ರಿ, ಕುಕ್ಕರ್, ವಾಶಿಂಗ್ ಮಶಿನ್, ಬೈಸಿಕಲ್, ರೆಡಿಮೇಡ್ ಗಾರ್ಮೆಂಟ್ಸ್, ಚಪ್ಪಲಿ, ಲಸಿಕೆ, ಸೆರಾಮಿಕ್ ಟೈಲ್ಸ್, ಕೃಷಿ ಸಲಕರಣೆ ಸೇರಿ ಹಲವು ದಿನಬಳಕೆ ವಸ್ತುಗಳ ಮೇಲಿನ ಜಿಎಸ್‌ಟಿ ಇಳಿಕೆಯಾಗಲಿದೆ. ಇದ್ರಿಂದ 50 ಸಾವಿರ ಕೋಟಿ ಆದಾಯ ಖೋತಾ ಆಗಲಿದೆ ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ: ಪ್ರಧಾನಿ ಮೋದಿ ಭೇಟಿಯಾದ ಶುಭಾಂಶು ಶುಕ್ಲಾ

Share This Article