ಅಂಪೈರ್ ವಿರುದ್ಧ ಸಿಟ್ಟು – ಹೆಲ್ಮೆಟ್‌ನಲ್ಲಿ ಸಿಕ್ಸ್‌ ಹೊಡೆದ ಬ್ರಾಥ್‌ವೈಟ್!

By
1 Min Read

ಜಾರ್ಜ್ ಟೌನ್: ಅಂಪೈರ್ ನಿರ್ಧಾರಕ್ಕೆ ಅಕ್ರೋಶಗೊಂಡ ವಿಂಡೀಸ್ ಆಲ್‌ರೌಂಡರ್ ಕಾರ್ಲೋಸ್ ಬ್ರಾಥ್‌ವೈಟ್ (Carlos Brathwaite) ಹೆಲ್ಮೆಟ್ ಅನ್ನು ಬ್ಯಾಟಿನಿಂದ ಸಿಕ್ಸ್‌ಗೆ (Six) ಅಟ್ಟಿದ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಜಾರ್ಜ್‌ ಟೌಟ್‌ನಲ್ಲಿ ನಡೆಯುತ್ತಿರುವ 2024ರ ಮ್ಯಾಕ್ಸ್60 ಕ್ಯಾರೇಬಿಯನ್ ಕ್ವಾಲಿಫೈಯರ್ 1ನೇ ಪಂದ್ಯದ ವೇಳೆ ಈ ಘಟನೆ ನಡೆದಿದೆ.

ನ್ಯೂಯಾರ್ಕ್ ಸ್ಟ್ರೈಕರ್ಸ್‌ ಮತ್ತು ಗ್ರ್ಯಾಂಡ್‌ ಕೇಮನ್ ಜಾಗ್ವರ‍್ಸ್ ನಡುವೆ ಪಂದ್ಯ ನಡೆದಿತ್ತು. ನ್ಯೂಯಾರ್ಕ್ ಸ್ಟ್ರೈಕರ್ಸ್‌ ಪರ ಆಡುತ್ತಿದ್ದ ಬ್ರಾಥ್‌ವೈಟ್ 7 ರನ್ ಗಳಿಸಿದ್ದಾಗ ವಿಕೆಟ್ ಕೀಪರ್ ಹಿಡಿದ ಕ್ಯಾಚ್‌ಗೆ ಬಲಿಯಾದರು. ನಿಜವಾಗಿ ಚೆಂಡು ಬ್ಯಾಟ್‌ಗೆ ಬಡಿಯದೇ ಭುಜಕ್ಕೆ ತಾಗಿ ಕೀಪರ್ ಕೈ ಸೇರಿತ್ತು. ಇದನ್ನೂ ಓದಿ: ದ.ಕೊರಿಯಾ ಆಟಗಾರರ ಜೊತೆ ಸೆಲ್ಫಿ – ಕ್ರೀಡಾಪಟುಗಳ ವಿರುದ್ಧ ಕ್ರಮಕ್ಕೆ ಮುಂದಾದ ಉ.ಕೊರಿಯಾ

ಅಂಪೈರ್ (Umpire) ಔಟ್ ತೀರ್ಪು ನೀಡುತ್ತಿದ್ದಂತೆ ಸಿಟ್ಟಾದ ಬ್ರಾಥ್‌ವೈಟ್ ಪೆವಿಲಿಯನ್‌ನತ್ತ ಮರಳುವ ಸಮಯದಲ್ಲಿ ಬ್ಯಾಟಿನಿಂದ ತಮ್ಮ ಹೆಲ್ಮೆಟ್‌ಗೆ ಸಿಕ್ಸ್ ಸಿಡಿಸುವಂತೆ ಹೊಡೆದಿದ್ದಾರೆ. ಹೆಲ್ಮೆಟ್ ಬೌಂಡರಿ ಗೆರೆಯಿಂದ ಹೊರಗಡೆ ಹೋಗಿದೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಟೆಸ್ಟ್‌ ಕ್ರಿಕೆಟ್‌ ಉತ್ತೇಜಕ್ಕೆ 125 ಕೋಟಿ ಮೊತ್ತದ ನಿಧಿ ಸ್ಥಾಪನೆಗೆ ಐಸಿಸಿ ನಿರ್ಧಾರ – ಭಾರತ, ಆಸೀಸ್‌ಗಿಲ್ಲ ಲಾಭ ಏಕೆ?

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ನ್ಯೂಯಾರ್ಕ್ ಸ್ಟ್ರೈಕರ್ಸ್‌ ತಂಡ 10 ಓವರ್‌ಗಳಲ್ಲಿ ಒಟ್ಟು 104 ರನ್ ಗಳಿಸಿತ್ತು. ಚೇಸಿಂಗ್ ಆರಂಭಿಸಿದ ಗ್ರ್ಯಾಂಡ್‌ ಕೇಮನ್ ಜಾಗ್ವಾರ್ ತಂಡ 96 ರನ್ ಗಳಿಸಿ ಸೋಲನುಭವಿಸಿತು.

 

Share This Article