15 ಭಾರತೀಯರಿದ್ದ ಸರಕು ಸಾಗಣೆ ಹಡಗು ಅಪಹರಣ

Public TV
1 Min Read

ನವದೆಹಲಿ: 15 ಮಂದಿ ಭಾರತೀಯರಿದ್ದ ಸರಕು ಹಡಗನ್ನು (Cargo Ship) ಸೊಮಾಲಿಯಾ ಬಳಿ ಅಪಹರಣ ಮಾಡಲಾಗಿದ್ದು, ಭಾರತೀಯ ನೌಕಾಪಡೆ (Indian Navy) ತೀವ್ರ ನಿಗಾ ಇರಿಸಿದೆ.

ಸೋಮಾಲಿಯಾ ಕರಾವಳಿಯ ಬಳಿ ಗುರುವಾರ ಸಂಜೆ ‘MV LILA NORFOLK’ ಎಂಬ ಸರಕು ಸಾಗಣೆ ಹಡಗನ್ನು ಅಪಹರಿಸಲಾಗಿದ್ದು, ಭಾರತೀಯ ನೌಕಾಪಡೆಯು ಅದರತ್ತ ಯುದ್ಧನೌಕೆಯನ್ನು ಕಳುಹಿಸಿ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ನಾವು ಮಸೀದಿಗಳ ಮೇಲೆ ದೇವಾಲಯಗಳನ್ನ ನಿರ್ಮಿಸಲು ಬಯಸುವುದಿಲ್ಲ: ಓವೈಸಿಗೆ ಧೀರೇಂದ್ರ ಶಾಸ್ತ್ರಿ ಟಾಂಗ್

ಅಪಹರಿಸಿದ ಹಡಗಿನಲ್ಲಿ 15 ಭಾರತೀಯರಿದ್ದಾರೆ. ಸಿಬ್ಬಂದಿಯೊಂದಿಗೆ ಸಂವಹನವನ್ನು ಸ್ಥಾಪಿಸಲಾಗಿದೆ. ಸೇನಾ ಅಧಿಕಾರಿಗಳ ಪ್ರಕಾರ, ಸೊಮಾಲಿಯಾ ಕರಾವಳಿಯಲ್ಲಿ ಹಡಗನ್ನು ಅಪಹರಿಸಿರುವ ಬಗ್ಗೆ ಗುರುವಾರ ಸಂಜೆ ಮಾಹಿತಿ ಲಭಿಸಿದೆ. ಅಲ್ಲದೇ ಭಾರತೀಯ ನೌಕಾಪಡೆಯ ವಿಮಾನವು ಹಡಗಿನ ಮೇಲೆ ನಿಗಾ ಇರಿಸಿದೆ.

ಭಾರತೀಯ ನೌಕಾಪಡೆಯ ಯುದ್ಧನೌಕೆ INS ಚೆನ್ನೈ ಪರಿಸ್ಥಿತಿಯನ್ನು ನಿಭಾಯಿಸಲು ಅಪಹರಣಕ್ಕೊಳಗಾದ ಹಡಗಿನ ಕಡೆಗೆ ಚಲಿಸುತ್ತಿದೆ. ಇದನ್ನೂ ಓದಿ: ಅಹಮದಾಬಾದ್‌ನಲ್ಲಿ ಯುಎಇ ಅಧ್ಯಕ್ಷರೊಂದಿಗೆ ಮೋದಿ ರೋಡ್ ಶೋ

Share This Article