ಎರಡು ತಿಂಗಳಲ್ಲಿ ಶಿವಮೊಗ್ಗ ಏರ್‌ಪೋರ್ಟ್‌ನಿಂದ ಕಾರ್ಗೋ ವಿಮಾನಗಳ ಹಾರಾಟ : ಬಿ.ವೈ ರಾಘವೇಂದ್ರ

Public TV
1 Min Read

ಶಿವಮೊಗ್ಗ: ಎರಡು ತಿಂಗಳಲ್ಲಿ ಶಿವಮೊಗ್ಗದ (Shivamogga) ಸೋಗಾನೆ ವಿಮಾನ ನಿಲ್ದಾಣದಿಂದ ಕಾರ್ಗೋ ವಿಮಾನಗಳು (Cargo flight) ಹಾರಾಟ ಆರಂಭಿಸಲಿವೆ ಎಂದು ಸಂಸದ ಬಿ.ವೈ ರಾಘವೇಂದ್ರ (B.Y.Raghavendra) ತಿಳಿಸಿದ್ದಾರೆ.

ನಗರದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ಕಾರ್ಗೋ ವಿಮಾನ ಹಾರಾಟಕ್ಕೆ ಅಗತ್ಯವಿರುವ ಸೌಲಭ್ಯ ಕಲ್ಪಿಸಲು 50 ಕೋಟಿ ರೂ. ಹಣ ಬಿಡುಗಡೆಯಾಗಿದೆ. ಇನ್ನೂ ಒಂದೆರಡು ತಿಂಗಳಲ್ಲಿ ವಿಮಾನಗಳು ಹಾರಾಟ ನಡೆಸಲಿವೆ ಎಂದಿದ್ದಾರೆ.

ಒಂದೂವರೆ ಎರಡು ತಿಂಗಳಲ್ಲಿ ನೈಟ್‌ ಲ್ಯಾಂಡಿಂಗ್‌ ಸೌಲಭ್ಯ ಲಭ್ಯವಾಗಲಿದೆ. ವಿಸಿಬಲಿಟಿ ಸಮಸ್ಯೆ ಈಗ ಪರಿಹಾರವಾಗಿದೆ. ಅದರ ಬೆನ್ನಿಗೆ ಕಾರ್ಗೋ ವಿಮಾನಗಳ ಹಾರಾಟಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಇದರಿಂದ ರೈತರು ಬೆಳೆದ ಬೆಳೆ ಮತ್ತು ಇತರೆ ವಸ್ತುಗಳ ರಫ್ತು ಮಾಡಲು ಅನುಕೂಲ ಆಗಲಿದೆ ಎಂದು ಅವರು ತಿಳಿಸಿದ್ದಾರೆ.

Share This Article