ಕಲಬುರಗಿ ಸೆಂಟ್ರಲ್ ಜೈಲಲ್ಲಿ ಇಸ್ಪೀಟ್‌ ಆಟ – ನಾಲ್ವರ ವಿರುದ್ಧ ಎಫ್‌ಐಆರ್‌

1 Min Read

ಕಲಬುರಗಿ: ಇಲ್ಲಿನ ಸೆಂಟ್ರಲ್ ಜೈಲ್‌ನಲ್ಲಿ (Kalaburagi Central Jail) ಕೈದಿಗಳ ಬಿಂದಾಸ್ ಲೈಫ್ ಪ್ರಕರಣ ಸಂಬಂಧ ನಾಲ್ವರು ಕೈದಿಗಳ ವಿರುದ್ಧ ಎಫ್ಐಆರ್ (FIR) ದಾಖಲಿಸಲಾಗಿದೆ.

ಜೈಲಲ್ಲಿ ಇಸ್ಪೀಟ್ ಆಟ ಆಡಿದ ಆಕಾಶ್, ರಾಕೇಶ್, ಪ್ರಜ್ವಲ್ ಸೇರಿ ನಾಲ್ವರ ವಿರುದ್ಧ ಜೈಲು ಅಧೀಕ್ಷಕಿ ಅನೀತಾ ಫರ್ತಾಬಾದ್ ಎಫ್ಐಆರ್ ದಾಖಲಿಸಿದ್ದಾರೆ. ಜೈಲಿನಲ್ಲಿ ಜೂಜಾಟ ಆಡುತ್ತಾ ಸಿಗರೆಟ್ ಎಣ್ಣೆ ಹೊಡೆಯುತ್ತಿರುವ ವಿಡಿಯೋ ವೈರಲ್ ಆಗಿತ್ತು. ಅಲ್ಲದೇ ಜೈಲಿನಲ್ಲಿ ಕೈದಿಗಳು ಇಸ್ಪಿಟ್, ಡ್ರಿಂಕ್ಸ್ ಮಾಡುವ, ಸಿಗರೇಟ್ ಸೇದುವ ವಿಡಿಯೋ ವೈರಲ್ ಆಗಿತ್ತು. ಇದನ್ನೂ ಓದಿ: ಕೈಯಲ್ಲಿ ಎಣ್ಣೆ, ಸಿಗರೇಟ್.. ಇಸ್ಪೀಟ್ ಆಟ; ಕಲಬುರಗಿ ಜೈಲಲ್ಲಿ ಕೈದಿಗಳ ಮೋಜು-ಮಸ್ತಿ

ಈ ಹಿನ್ನೆಲೆ ಕಾರಾಗೃಹ ಇಲಾಖೆಯ ಹೆಚ್ಚುವರಿ ಮಹಾನೀರಿಕ್ಷಕ ಆನಂದ್ ರೆಡ್ಡಿ ನೇತೃತ್ವದಲ್ಲಿ ತನಿಖೆ ಆರಂಭವಾಗಿದೆ. ಬೆಂಗಳೂರಿನಿಂದ ಕಲಬುರಗಿ ಸೆಂಟ್ರಲ್ ಜೈಲಿಗೆ ಆಗಮಿಸಿದ ಆನಂದ್ ರೆಡ್ಡಿ ಈ ಸಂಬಂಧ ತನಿಖೆ ನಡೆಸುತ್ತಿದ್ದಾರೆ.‌

ಜ.3 ರಂದು ಡಿಜಿಪಿ ಅಲೋಕ್ ಕುಮಾರ್ ಕೂಡ ಕಲಬುರಗಿ ಜೈಲಿಗೆ ಭೇಟಿ ನೀಡಿ ವಿಚಾರಣೆ ನಡೆಸಲಿದ್ದಾರೆ. ಇದನ್ನೂ ಓದಿ: ಹೊಸ ವರ್ಷಕ್ಕೆ ಸ್ವೀಟ್‌ ಕೊಡ್ತೀನಿ ಅಂತ ಕರೆಸಿ ಪ್ರಿಯಕರನ ಖಾಸಗಿ ಅಂಗವನ್ನೇ ಕತ್ತರಿಸಿದ ಮಹಿಳೆ!

Share This Article