ಕಾರು, ಪಿಕಪ್ ವಾಹನ ಮುಖಾಮುಖಿ ಡಿಕ್ಕಿ- ಇಬ್ಬರು ಸಾವು

Public TV
1 Min Read

ಕಲಬುರಗಿ: ಮಹಿಂದ್ರಾ ಪಿಕಪ್ ಹಾಗೂ ಕಾರಿನ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, 25ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಕಲಬುರಗಿ (Kalaburagi) ಜಿಲ್ಲೆಯ ನಗರದ ಹೊರವಲಯದ ಹಾರುತಿ ಹಡಗಿಲ್ ಬಳಿ ಸಂಭವಿಸಿದೆ.

ರಟಕಲ್ ಗ್ರಾಮ ಕಲಬುರಗಿಯ ಜನತಾ ಲೇಔಟ್ ನಿವಾಸಿ ಮುರಗೇಶ್ ಚಂದ್ರಶೇಖರ ಉಪ್ಪಿನ್ (42) ಹಾಗೂ ಶಹಾಬಾದ್ ನಿವಾಸಿ ಧೂಳಮ್ಮ ಯಮುನಪ್ಪ (60) ಮೃತ ದುರ್ದೈವಿಗಳು. ಇದನ್ನೂ ಓದಿ: Hassan| ಶಾಲೆಗೆಂದು ಮೀಸಲಿಟ್ಟಿದ್ದ ಜಾಗ ವಕ್ಫ್ ಹೆಸರಿಗೆ – ಹೆಚ್‌ಕೆ ಸುರೇಶ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಗೆ ಕರೆ

ಮರುಗೇಶ್ ಕಲಬುರಗಿಯ ಎಚ್‌ಡಿಎಫ್‌ಸಿ ಗೋಲ್ಡ್ ಬ್ಯಾಂಕ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಮಂಗಳವಾರ ಮಧ್ಯರಾತ್ರಿ ಕಾರಿನಲ್ಲಿ ಮುರುಗೇಶ್ ಹಾಗೂ ಇನ್ನೋರ್ವ ವ್ಯಕ್ತಿ ಕಲಬುರಗಿ ಕಡೆಗೆ ಹೊರಟಿದ್ದರು. ಈ ವೇಳೆ ಕಲಬುರಗಿ ಕಡೆಯಿಂದ ಬರುತ್ತಿದ್ದ ಪಿಕಪ್ ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ. ಅಪಘಾತದ ತೀವ್ರತೆಗೆ ಪಿಕಪ್ ಜೀಪಿನಲ್ಲಿದ್ದ ಧೂಳಮ್ಮ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ. ಇದನ್ನೂ ಓದಿ: Gujarat| ನಿರ್ಮಾಣ ಹಂತದಲ್ಲಿದ್ದ ಬುಲೆಟ್ ರೈಲು ಸೇತುವೆ ಕುಸಿತ- ಮೂವರು ಕಾರ್ಮಿಕರು ಸಾವು

ದುರ್ಘಟನೆಯಲ್ಲಿ ಪಿಕಪ್ ಜೀಪಿನ ಹಿಂಬದಿ ಕುಳಿತಿದ್ದ 25 ಮಂದಿ ಗಾಯಗೊಂಡಿದ್ದಾರೆ. ಸಂಚಾರಿ ಪೊಲೀಸ್ ಠಾಣೆ-1ರಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಗುರು ರಾಯರ ದರ್ಶನ ಪಡೆದ ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಾಕ್

Share This Article