ಕಾರು ಪಲ್ಟಿಯಾಗಿ ಅವಘಡ – ಶ್ರೀಶೈಲಕ್ಕೆ ಹೋಗ್ತಿದ್ದ ಇಬ್ಬರು ದುರ್ಮರಣ

1 Min Read

ವಿಜಯಪುರ: ಕಾರು ಪಲ್ಟಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಳಿಕೋಟೆ ಹೆದ್ದಾರಿಯ ಬಸವನಹಟ್ಟಿ ಕ್ರಾಸ್ ಬಳಿ ಘಟನೆ ನಡೆದಿದೆ.

ಮೃತರನ್ನು ಬೆಳಗಾವಿ ಜಿಲ್ಲೆಯ ಕಾಗವಾಡ ಪಟ್ಟಣದ ಚಂದ್ರವ್ವ ಟಕ್ಕೆನ್ನವರ (70) ಹಾಗೂ ಕಾಮಪ್ಪ ಅವರಾದಿ (65) ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಕ್ರಾಸ್‌ ವೋಟ್‌ ಭೀತಿ – ಒಡಿಶಾ ಕೈ ಶಾಸಕರು ಬಿಡದಿ ರೆಸಾರ್ಟ್‌ಗೆ ಶಿಫ್ಟ್‌

ಸ್ವಿಫ್ಟ್‌ ಡಿಜೈರ್ ಕಾರಿನಲ್ಲಿ ನಾಲ್ವರು ಕಾಗವಾಡದಿಂದ ಶ್ರೀಶೈಲಕ್ಕೆ ಪ್ರಯಾಣಿಸುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ನಾಲ್ವರ ಪೈಕಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನಿಬ್ಬರಿಗೆ ಗಂಭೀರ ಗಾಯಗಳಾಗಿವೆ.

ಈ ಸಂಬಂಧ ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ತೈಲ ಬೆಲೆ ಏರಿಕೆಯಾದರೆ ಅಮೆರಿಕ ಭಾರೀ ಹಣ ಗಳಿಸಲಿದೆ: ಡೊನಾಲ್ಡ್‌ ಟ್ರಂಪ್‌

Share This Article