ಬೆಂಗಳೂರು – ಚೆನ್ನೈ ಎಕ್ಸ್‌ಪ್ರೆಸ್‌ವೇಯಲ್ಲಿ ಬ್ರಿಡ್ಜ್‌ನಿಂದ ಕೆಳಗುರುಳಿದ ಕಾರು; ನಾಲ್ವರು ಸಾವು

1 Min Read

ಕೋಲಾರ: ಬೆಂಗಳೂರು – ಚೆನ್ನೈ ಎಕ್ಸ್‌ಪ್ರೆಸ್ ಹೈವೇಯಲ್ಲಿ (Bengaluru-Chennai Expressway) ಕಾರು ಡಿವೈಡರ್‌ಗೆ ಡಿಕ್ಕಿಯಾಗಿ (Accident) ಸೇತುವೆಯಿಂದ ಕೆಳಗೆ ಬಿದ್ದ ಪರಿಣಾಮ ನಾಲ್ವರು ಸಾವನ್ನಪ್ಪಿದ ಘಟನೆ ಮಾಲೂರು (Maluru) ತಾಲೂಕಿನ ಅಬ್ಬೇನಹಳ್ಳಿ ಬಳಿ ನಡೆದಿದೆ.

ಮೃತರನ್ನು ಚನೈ ಮೂಲದ ಗೋಪಿ (38), ಗೌತಮ್ ರಮೇಶ್ (28), ಹರಿಹರನ್ (27), ಜಯಂಕರ್ (30) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಯುವಕರನ್ನು ಕೋಲಾರದ ಅರ್ ಎಲ್ ಜಾಲಪ್ಪ ಆಸ್ಪತ್ರೆಗೆ ಚಿಕಿತ್ಸೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಯುವಕರು ಸಾವನ್ನಪ್ಪಿದ್ದಾರೆ.‌ ಇದನ್ನೂ ಓದಿ: ಎರಡು ಬೈಕ್‌ಗಳು ಮುಖಾಮುಖಿ ಡಿಕ್ಕಿ – ಇಬ್ಬರು ದುರ್ಮರಣ, ಮೂವರ ಸ್ಥಿತಿ ಚಿಂತಾಜನಕ

ಈ ಸಂಬಂಧ ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಏಕಾಏಕಿ ಶಾರ್ಟ್‌ಸರ್ಕ್ಯೂಟ್ – ಸಾಲ ತೀರಿಸೋಕೆ ಕೂಡಿಟ್ಟಿದ್ದ 60 ಸಾವಿರ ನಗದು ಬೆಂಕಿಗಾಹುತಿ

Share This Article