ಕಾರು-ಬಸ್ ನಡ್ವೆ ಭೀಕರ ಅಪಘಾತ; ತಂದೆ-ಮಗ ಸ್ಥಳದಲ್ಲೇ ಸಾವು

Public TV
1 Min Read

ಕಲಬುರಗಿ: ಬಸ್ ಹಾಗೂ ಕಾರಿನ ನಡುವೆ ಭೀಕರ ಅಪಘಾತ (Road Accident) ಸಂಭವಿಸಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ಗೊಬ್ಬುರ ಕೆ ಗ್ರಾಮದ ಬಳಿ ಇಂದು ಸಂಜೆ ನಡೆದಿದೆ.

ಸೋಮಶೇಖರ್ (55), ಪ್ರಕಾಶ್ (28) ಮೃತ ದುರ್ದೈವಿಗಳಾಗಿದ್ದು, ಮೃತರು ಬಾಗಲಕೋಟೆ (Bagalakote) ಜಿಲ್ಲೆಯವರಾಗಿದ್ದು, ಕಾರಿನಲ್ಲಿದ್ದ ತಂದೆ ಮತ್ತು ಮಗ ಸ್ಥಳದಲ್ಲೇ ಸಾವನ್ನಪ್ಪಿದಾರೆ. ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಟ್ರಾಫಿಕ್‌ ಜಾಮ್‌ – ಆಸ್ಪತ್ರೆಗೆ ಸಾಗಿಸಲಾಗದೇ ಅಂಬುಲೆನ್ಸ್‌ನಲ್ಲೇ ಮಹಿಳೆ ಸಾವು

ಕಲಬುರಗಿ (Kalaburagi) ಕಡೆಯಿಂದ ಬಾಗಲಕೋಟೆಯ ಬಿಳಗಿ ಕಡೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಎದುರಿಗೆ ಬಂದ ಎನ್‌ಇಕೆಆರ್‌ಟಿಸಿ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಅವಘಡ ಸಂಭವಿಸಿದೆ. ಇದನ್ನೂ ಓದಿ: ಮತಗಳ್ಳತನ ಆರೋಪ: ದಾಖಲೆ ಕೊಡುವಂತೆ ರಾಹುಲ್ ಗಾಂಧಿಗೆ ಚುನಾವಣಾ ಆಯೋಗ ನೋಟಿಸ್

ಇನ್ನೂ ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಮುಂಭಾಗ ಕುಳಿತಿದ್ದ ತಂದೆ ಮಗ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತ ಸೋಮಶೇಖರ್ ಪತ್ನಿ ಗಾಯಗೊಂಡಿದ್ದು, ಕಲಬುರಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಗಾಣಗಾಪುರ ಠಾಣೆಯ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ʻಎಲ್ಲರ ಬಾಸ್‌ ನಾವೇʼ ಅನ್ನೋರು ಭಾರತದ ಬೆಳವಣಿಗೆ ಸಹಿಸುತ್ತಿಲ್ಲ – ಟ್ರಂಪ್‌ಗೆ ರಾಜನಾಥ್‌ ಸಿಂಗ್‌ ಗುದ್ದು

Share This Article