ಮಮತಾ ಬ್ಯಾನರ್ಜಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ – ತಲೆಗೆ ಪೆಟ್ಟು

Public TV
1 Min Read

ಕೋಲ್ಕತ್ತಾ: ಬುಧವಾರ ಬುರ್ದ್ವಾನ್‌ನಲ್ಲಿ (Burdwan) ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ (Mamata Banerjee) ಅವರ ಬೆಂಗಾವಲು ವಾಹನದ ಎದುರು ಏಕಾಏಕಿ ಕಾರೊಂದು ಬಂದ ಪರಿಣಾಮ ಚಾಲಕ ಹಠಾತ್ ಬ್ರೇಕ್ ಹಾಕಿದ್ದು, ಕಾರಿನ ಹಿಂಬದಿ ಕುಳಿತಿದ್ದ ಮಮತಾ ಬ್ಯಾನರ್ಜಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಹವಾಮಾನ ವೈಪರಿತ್ಯದಿಂದಾಗಿ ರಸ್ತೆ ಮೂಲಕ ಕೋಲ್ಕತ್ತಾಗೆ ಹಿಂತಿರುಗುತ್ತಿದ್ದಾಗ ಬುರ್ದ್ವಾನ್‌ನಲ್ಲಿ ಅಪಘಾತ ಸಂಭವಿಸಿದೆ. ಘಟನೆಯ ಪರಿಣಾಮ ಮುಖ್ಯಮಂತ್ರಿಯ ತಲೆಗೆ ಸಣ್ಣಪುಟ್ಟ ಗಾಯವಾಗಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಇದನ್ನೂ ಓದಿ: ಮೇಲುಕೋಟೆ ಶಿಕ್ಷಕಿ ಕೊಲೆ ಪ್ರಕರಣ – ಆರೋಪಿ ಅರೆಸ್ಟ್

ಇಂದು ಮಧ್ಯಾಹ್ನ ಪೂರ್ವ ಬುರ್ದ್ವಾನ್ ಜಿಲ್ಲೆಯಲ್ಲಿ ಆಡಳಿತಾತ್ಮಕ ಸಭೆಯಿಂದ ಹೊರಟಿದ್ದ ಸಂದರ್ಭ ಮಮತಾ ಬ್ಯಾನರ್ಜಿ ಅವರ ವಾಹನ ಹಠಾತ್ ಬ್ರೇಕ್ ಹಾಕಿದ್ದರಿಂದ ಅವರ ಹಣೆ ಮತ್ತು ತೋಳಿನ ಮೇಲೆ ಸಣ್ಣ ಗಾಯವಾಗಿದೆ. ಬ್ಯಾನರ್ಜಿ ಅವರು ಚಾಲಕನ ಪಕ್ಕದಲ್ಲಿ ಮುಂಭಾಗದ ಸೀಟಿನಲ್ಲಿ ಕುಳಿತಿದ್ದರು. ಇದನ್ನೂ ಓದಿ: ಜಾತ್ರೆ ವೇಳೆ ಕುಡಿದು ರಂಪಾಟ – ಮೂವರಿಗೆ ಸ್ಟೀಲ್ ಕಟರ್‌ನಿಂದ ಇರಿತ 

ಕಳೆದ ವರ್ಷ ಜೂನ್‌ನಲ್ಲಿ ಸಿಲಿಗುರಿಯ ಸೆವೋಕ್ ಏರ್ ಬೇಸ್‌ನಲ್ಲಿ ತನ್ನ ಹೆಲಿಕಾಪ್ಟರ್‌ನ ತುರ್ತು ಲ್ಯಾಂಡಿಂಗ್ ಸಂದರ್ಭದಲ್ಲಿ ಉಂಟಾದ ಗಾಯದ ನಂತರ ಬ್ಯಾನರ್ಜಿ ಪ್ರಸ್ತುತ ಅವರ ಎಡ ಮೊಣಕಾಲಿನ ಮೇಲೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಸಹೋದ್ಯೋಗಿಗಳ ಮೇಲೆ ಗುಂಡಿನ ದಾಳಿ ನಡೆಸಿ ಆತ್ಮಹತ್ಯೆಗೆ ಶರಣಾದ ಯೋಧ

Share This Article