ಕಾರು ಅಪಘಾತ: ಖ್ಯಾತನಟ ಪ್ರವೀಣ್ ಗೆ ಐಸಿಯುವಿನಲ್ಲಿ ಚಿಕಿತ್ಸೆ

Public TV
1 Min Read

ಖ್ಯಾತ ನಟ ಪ್ರವೀಣ್ (Praveen) ಕಾರು ಅಪಘಾತದಲ್ಲಿ (Accident) ತೀವ್ರ ಗಾಯಗೊಂಡಿದ್ದಾರೆ. ಶನಿವಾರ ಬೆಳಗ್ಗೆ ಈ ಅಪಘಾತ ನಡೆದಿದ್ದು, ಕೂಡಲೇ ಪ್ರವೀಣ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರ ಗಾಯಗೊಂಡಿದ್ದರಿಂದ ಐಸಿಯುವಿಗೆ ಶಿಫ್ಟ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎನ್ನಲಾಗ್ತಿದೆ.

ಬಾಂದ್ರ ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಪತ್ನಿ ಸೇರಿದಂತೆ ಕುಟುಂಬಸ್ಥರು ಆಸ್ಪತ್ರೆಗೆ ಧಾವಿಸಿದ್ದಾರೆ. ಸದ್ಯಕ್ಕೆ ಆ ಕುರಿತು ಏನೂ ಹೇಳೋಕೆ ಆಗ್ತಿಲ್ಲ. ನಮ್ಮ ಕುಟುಂಬಕ್ಕೆ ತೀವ್ರ ಆಘಾತವಾಗಿದೆ ಎಂದು ಪತ್ನಿ ಹೇಳಿದ್ದಾರೆ.

 

ಬಾಲಿವುಡ್ ನ ದಿಲ್ಲಿಗಿ ಸಿನಿಮಾದ ಮೂಲಕ ಸಿನಿಮಾ ರಂಗಕ್ಕೆ ಆಗಮಿಸಿದ್ದ ಪ್ರವೀಣ್. ಆ ನಂತರ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ವೆಬ್ ಸಿರೀಸ್ ನಲ್ಲೂ ಕಾಣಿಸಿಕೊಂಡಿದ್ದಾರೆ. ರಾಗಿಣಿ ಎಂಎಂಎಸ್ ಸಿನಿಮಾ ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತ್ತು. ಸದ್ಯ ತೀವ್ರನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ಮುಂದುವರೆದಿದೆ.

Share This Article