ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೈವೇಯಲ್ಲಿ ಅಪಘಾತ – ಕ್ಯಾಂಟರ್‌ನಲ್ಲಿ ಸಿಲುಕಿ ನರಳಾಡಿದ ಚಾಲಕ

Public TV
1 Min Read

ಮಂಡ್ಯ: ಹೆದ್ದಾರಿಗೆ ವೈಟ್ ಟ್ಯಾಪಿಂಗ್ ಹಾಕುವ ಲಾರಿಗೆ (Lorry) ಕ್ಯಾಂಟರ್ (Canter Truck) ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದ ಪರಿಣಾಮ ಕ್ಯಾಂಟರ್ ನಜ್ಜುಗುಜ್ಜಾಗಿ ಕ್ಯಾಂಟರ್ ಒಳಭಾಗದಲ್ಲಿ ಚಾಲಕ ಸಿಲುಕಿ ನರಳಾಡಿರುವ ಘಟನೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೈವೇಯಲ್ಲಿ (Bengaluru-Mysuru Express Highway) ನಡೆದಿದೆ.

ಕಳೆದ ರಾತ್ರಿ ಮಂಡ್ಯದ ಗೆಜ್ಜಲುಗೆರೆಯ ಬಳಿಯ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೈವೇಗೆ ಕಾರ್ಮಿಕರು ವೈಟ್ ಟ್ಯಾಪಿಂಗ್‍ನ್ನು ಹಾಕುತ್ತಿದ್ದರು. ಈ ವೇಳೆ ಕ್ಯಾಂಟರ್ ಟ್ಯಾಂಪಿಗ್ ತುಂಬಿದ್ದ ಲಾರಿಗೆ ಹಿಂದೆಯಿಂದ ಬಂದು ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಪರಿಣಾಮ ಕ್ಯಾಂಟರ್ ನಜ್ಜುಗುಜ್ಜಾಗಿದ್ದು, ಕ್ಯಾಂಟರ್ ಒಳಭಾಗದಲ್ಲಿ ಚಾಲಕ ಸಿಲುಕಿ ನರಳಾಡಿದ್ದಾನೆ. ಈ ವೇಳೆ ವೈಟ್ ಟ್ಯಾಪಿಂಗ್ ಹಾಕುತ್ತಿದ್ದ ಕಾರ್ಮಿಕನಿಗೂ ಗಂಭೀರ ಗಾಯಗಳಾಗಿವೆ. ಇದನ್ನೂ ಓದಿ: ತಮಿಳುನಾಡಿನ ದೇವಾಲಯಗಳಲ್ಲಿ ಮೊಬೈಲ್ ಬಳಸುವಂತಿಲ್ಲ – ಮದ್ರಾಸ್ ಹೈಕೋರ್ಟ್ ಆದೇಶ

ಬಳಿಕ ಸ್ಥಳದಲ್ಲಿ ಇದ್ದ ಸ್ಥಳೀಯರು ಕ್ಯಾಂಟರ್ ಒಳಭಾಗದಲ್ಲಿ ಸಿಲುಕಿದ್ದ ಚಾಲಕನನ್ನು ಹೊರತೆಗೆದು ಬಳಿಕ ಚಾಲಕ ಹಾಗೂ ಕಾರ್ಮಿಕನನ್ನು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಕಾಮಗಾರಿಯ ವೇಳೆ ಸೂಚನ ಫಲಕವನ್ನು ಅಳವಡಿಕೆ ಮಾಡದೇ ಇರುವುದು ಈ ಅಪಘಾತಕ್ಕೆ ಕಾರಣವಾಗಿದೆ. ಹೆದ್ದಾರಿ ಕಾಮಗಾರಿ ಆರಂಭವಾದ ದಿನದಿಂದಲು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳದ ಕಾರಣ ಈ ರೀತಿಯ ಘಟನೆಗಳು ಪದೇ ಪದೇ ಜರುಗುತ್ತಿವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನನ್ನ ಹತ್ಯೆಗೆ ಸ್ಕೆಚ್ – ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ಮುಖಂಡ ಗಂಭೀರ ಆರೋಪ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *