BJPಯಿಂದ ಟಿಪ್ಪು ಪರಂಪರೆ ಅಳಿಸಲು ಸಾಧ್ಯವೇ ಇಲ್ಲ: ಓವೈಸಿ

Public TV
1 Min Read

ನವದೆಹಲಿ: ಬಿಜೆಪಿಯಿಂದ (BJP) ಟಿಪ್ಪು ಪರಂಪರೆಯನ್ನು ಅಳಿಸಲು ಸಾಧ್ಯವೇ ಇಲ್ಲ ಎಂದು ಹೈದರಾಬಾದ್ ಸಂಸದ ಹಾಗೂ ಎಐಎಂಐಎಂ (AIMIM) ಮುಖ್ಯಸ್ಥ ಅಸಾದುದ್ದೀನ್ ಓವೈಸಿ (Asaduddin Owaisi) ಎಚ್ಚರಿಸಿದ್ದಾರೆ.

ಬೆಂಗಳೂರು – ಮೈಸೂರು ಸಂಪರ್ಕ ಕಲ್ಪಿಸುವ ರೈಲಿಗೆ ಟಿಪ್ಪು ಎಕ್ಸ್‌ಪ್ರೆಸ್‌ (Tippu Express) ಹೆಸರಿಗೆ ಬದಲಾಗಿ ಒಡೆಯರ್ ಎಕ್ಸ್‌ಪ್ರೆಸ್‌ (Wodeyar Express) ಎಂದು ಮರುನಾಮಕರಣ ಮಾಡಿರುವ ವಿಚಾರಕ್ಕೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪವನ್ ಕುಮಾರ್-ಫಾಸಿಲ್ ಕಾಂಬಿನೇಷನ್‌ನ ‘ಧೂಮ್ʼ ಚಿತ್ರದ ಅದ್ಧೂರಿ ಮುಹೂರ್ತ

ಈ ಕುರಿತು ಟ್ವೀಟ್ ಮಾಡಿರುವ ಓವೈಸಿ, ಬ್ರಿಟಿಷರ ವಿರುದ್ಧ ಟಿಪ್ಪು ಮಾಡಿದ್ದ ಮೂರು ಯುದ್ಧಗಳು (War) ಬಿಜೆಪಿಯನ್ನು ಕೆರಳಿಸಿದೆ. ಅವರು ಬೇಕಿದ್ದರೆ ಇನ್ನೊಂದು ರೈಲಿಗೆ ಒಡೆಯರ್ ಹೆಸರಿಡಬಹುದಿತ್ತು. ಏನೇ ಮಾಡಿದರೂ ಟಿಪ್ಪು ಪರಂಪರೆಯನ್ನು (Tippu Legancy) ಅಳಿಸಲು ಬಿಜೆಪಿಯಿಂದ ಸಾಧ್ಯವಿಲ್ಲ. ಟಿಪ್ಪು ಬದುಕಿದ್ದಾಗ ಬ್ರಿಟಿಷರನ್ನು ಹೆದರಿಸಿದ್ದರು. ಈಗ ಬ್ರಿಟಿಷ್ ಗುಲಾಮರನ್ನು ಎದುರಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಸ್ವಚ್ಛ ನಗರ ಪಟ್ಟಿಯಲ್ಲಿ ಬೆಂಗಳೂರು ಲಾಸ್ಟ್ – ಷರತ್ತಿನೊಂದಿಗೆ ನೂತನ ಕಸದ ಟೆಂಡರ್‌ಗೆ BBMP ಸಿದ್ಧತೆ

ಓವೈಸಿ ಟೀಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ಐಟಿ ವಿಭಾಗದ ಉಸ್ತುವಾರಿ ಅಮಿತ್ ಮಾಳವಿಯಾ (Amit Malviya), ಟಿಪ್ಪು ಪರಂಪರೆ ಅಳಿಸುವುದು ಬಿಜೆಪಿ ಉದ್ದೇಶವಲ್ಲ. ಟಿಪ್ಪು ಒಬ್ಬ ಅನಾಗರಿಕ, ಕೂರ್ಗ್‌ನಲ್ಲಿ ಕೊಡವರಿಗೆ, ಮಂಗಳೂರಿನಲ್ಲಿ ಸಿರಿಯನ್ ಕ್ರಿಶ್ಚಿಯನ್ನರಿಗೆ, ಕ್ಯಾಥೋಲಿಕರಿಗೆ, ಕೊಂಕಣಿಗಳಿಗೆ, ಮಲಬಾರ್‌ನ ನಾಯರ್‌ಗಳಿಗೆ ಅನೇಕ ರೀತಿಯಲ್ಲಿ ಕಷ್ಟ ಕೊಟ್ಟಿದ್ದಾನೆ. ಟಿಪ್ಪುವಿನ ನಿಜವಾದ ಪರಂಪರೆಯ ಬಗ್ಗೆ ಜನರಿಗೆ ತಿಳಿಸಲು ನಾವು ಬಯಸುತ್ತೇವೆ ಎಂದು ಉತ್ತರಿಸಿದ್ದಾರೆ.

1980ರಲ್ಲಿ ಮೈಸೂರು -ಬೆಂಗಳೂರು ನಡುವೆ ಸಂಪರ್ಕ ಕಲ್ಪಿಸುವ ಸೂಪರ್ ಫಾಸ್ಟ್ ರೈಲು ಎಂದು ಪರಿಚಯಿಸಲಾದ ಟಿಪ್ಪು ಎಕ್ಸ್‌ಪ್ರೆಸ್‌ಗೆ ಈಚೆಗಷ್ಟೇ ಒಡೆಯರ್ ಎಕ್ಸ್‌ಪ್ರೆಸ್‌ ಎಂದು ಮರುನಾಮಕರಣ ಮಾಡಲಾಯಿತು. ಈ ಕುರಿತು ಮೈಸೂರು – ಕೊಡಗು ಸಂಸದ ಪ್ರತಾಪ್ ಸಿಂಹ (Pratap Simha) ಅವರು ಕಳೆದ ಜುಲೈ ತಿಂಗಳಿನಲ್ಲೇ ಕೇಂದ್ರ ರೈಲ್ವೆ ಸಚಿವರಿಗೆ ಪತ್ರ ಬರೆದಿದ್ದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *