ಬಾಂಗ್ಲಾದೇಶದಲ್ಲಿ ಹಿಂದೂಗಳ ಹತ್ಯೆಗೆ ಖಂಡನೆ – ಯೂನಸ್ ಸರ್ಕಾರದಿಂದ 2,900 ದೌರ್ಜನ್ಯ; ಭಾರತದಿಂದ ಕಠಿಣ ಸಂದೇಶ

2 Min Read

ಢಾಕಾ: ಬಾಂಗ್ಲಾದೇಶದಲ್ಲಿ (Bangladesh) ಇಬ್ಬರು ಹಿಂದೂ ಯುವಕರ ಹತ್ಯೆ ಸೇರಿ 2,900 ಹಿಂದೂಗಳ ಮೇಲೆ ದೌರ್ಜನ್ಯದ ಬಳಿಕ ಕೊನೆಗೂ ಭಾರತ ಸರ್ಕಾರ (Indian Government) ಎಚ್ಚೆತ್ತುಕೊಂಡಿದ್ದು, ಉಗ್ರವಾಗಿ ಖಂಡಿಸಿದೆ.

ನೆರೆ ದೇಶದಲ್ಲಿ ಹಿಂದೂಗಳ (Hindus) ನರಮೇಧ ನಡೆಯುತ್ತಿದ್ದರೂ ಭಾರತ ಸರ್ಕಾರ ಮೌನ ವಹಿಸಿದೆ ಅನ್ನೋ ಟೀಕೆಗಳಿ ಕೇಳಿ ಬಂದಿತ್ತು. ಈ ಬೆನ್ನಲ್ಲೇ, ವಿದೇಶಾಂಗ ಇಲಾಖೆ ವಕ್ತಾರ ರಣಧೀರ್ ಜೈಸ್ವಾಲ್ (Randhir Jaiswal) ಸುದ್ದಿಗೋಷ್ಠಿ ನಡೆಸಿ, ಹಿಂದೂಗಳ ಮೇಲೆ 2,900 ದೌರ್ಜನ್ಯಗಳು ಆಗಿವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅರುಣಾಚಲ ಪ್ರದೇಶದ ಮೇಲೆ ಚೀನಾ ಕಣ್ಣು – ಅಮೆರಿಕಾ ವರದಿ ತಿರಸ್ಕರಿಸಿದ ಡ್ರ‍್ಯಾಗನ್

ಹಿಂದೂಗಳು, ಕ್ರೈಸ್ತರು, ಬೌದ್ಧರು ಸೇರಿದಂತೆ ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ಉಗ್ರಗಾಮಿಗಳು ನಡೆಸುತ್ತಿರುವ ನಿರಂತರ ಹಗೆತನ ಖಂಡನೀಯವಾದದ್ದು. ಹಿಂದೂಗಳ ಮೇಲಿನ ದೌರ್ಜನ್ಯವನ್ನ ಸಹಿಸೋಕೆ ಆಗಲ್ಲ. ಭಾರತವು ಸೂಕ್ಷ್ಮ ನಿಗಾ ಇರಿಸಿದೆ. ಬಾಂಗ್ಲಾದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಯಬೇಕು ಅಂತ ಭಾರತವೂ ಬಯಸುತ್ತದೆ. ಹಿಂದೂ ಯುವಕನ ಭೀಕರ ಹತ್ಯೆಯನ್ನ ನಾವು ಖಂಡಿಸುತ್ತೇವೆ. ಅಪರಾಧಿಗಳನ್ನ ನ್ಯಾಯಾಲಯದ ಕಟಕಟೆಗೆ ತಂದು ನಿಲ್ಲಿಸುತ್ತಾರೆ ಎಂದು ನಿರೀಕ್ಷಿಸುತ್ತೇವೆ ಅಂದಿದ್ದಾರೆ.

ಬಾಂಗ್ಲಾದೇಶದಲ್ಲಿ ಹಿಂದೂಗಳು, ಕ್ರಿಶ್ಚಿಯನ್ನರು ಮತ್ತು ಬೌದ್ಧರು ಸೇರಿದಂತೆ ಅಲ್ಪಸಂಖ್ಯಾತರ ವಿರುದ್ಧ ನಿರಂತರ ಹಗೆತನವು ಗಂಭೀರ ಕಳವಳಕಾರಿಯಾಗಿದೆ ಎಂದು ಹೇಳಿದರು. ಇದನ್ನೂ ಓದಿ: Toronto: ಟೊರೊಂಟೊ ವಿವಿ ಬಳಿ 20 ವರ್ಷದ ಭಾರತೀಯ ವಿದ್ಯಾರ್ಥಿಗೆ ಗುಂಡಿಕ್ಕಿ ಹತ್ಯೆ; ಆರೋಪಿ ಬಂಧನ

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ಹಿಂಸಾಚಾರದ ಘಟನೆಗಳನ್ನ ಮಾಧ್ಯಮ ಉತ್ಪ್ರೇಕ್ಷೆ ಅಥವಾ ರಾಜಕೀಯ ಹಿಂಸಾಚಾರ ಎಂದು ತಳ್ಳಿಹಾಕಲಾಗುವುದಿಲ್ಲ. ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರದ ಅವಧಿಯಲ್ಲಿ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ 2,900ಕ್ಕೂ ಹೆಚ್ಚು ಹಿಂಸಾಚಾರದ ಘಟನೆಗಳನ್ನ ಸ್ವತಂತ್ರ ಮೂಲಗಳು ದಾಖಲಿಸಿವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನೈಜೀರಿಯಾದಲ್ಲಿ ಕ್ರೈಸ್ತರ ನರಮೇಧ – ಉಗ್ರರ ಮೇಲೆ ಅಮೆರಿಕ ಬಾಂಬ್‌ ದಾಳಿ

Share This Article