Cannes 2023: ಸ್ಟನ್ನಿಂಗ್‌ ಲುಕ್‌ನಲ್ಲಿ ಕಾಣಿಸಿಕೊಂಡ ಬಾಲಿವುಡ್ ಬೆಡಗಿಯರು

Public TV
1 Min Read

2023ನೇ ಸಾಲಿನ ಕಾನ್ ಚಿತ್ರೋತ್ಸವ (Cannes Festival) ಆರಂಭ ಆಗಿದೆ. ದೇಶ-ವಿದೇಶದ ಸೆಲೆಬ್ರಿಟಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಸೆಲೆಬ್ರಿಟಿಗಳು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿರೋದು ಕಾನ್ ಚಿತ್ರೋತ್ಸವದ ಒಂದು ವಿಶೇಷ ಆಕರ್ಷಣೆ. ಸುಂದರ ಉಡುಗೆಗಳನ್ನು ತೊಟ್ಟು ನಟಿಮಣಿಯರು ಪೋಸ್ ನೀಡಿದ್ದಾರೆ.

 

View this post on Instagram

 

A post shared by Urvashi Rautela (@urvashirautela)

76ನೇ ಕಾನ್ ಚಿತ್ರೋತ್ಸವ ಕಾರ್ಯಕ್ರಮವು ಫ್ರಾನ್ಸ್ನಲ್ಲಿ ನಡೆಯುತ್ತಿದೆ. ವಿವಿಧ ದೇಶದವರು ಕಾನ್ ಫೆಸ್ಟಿವಲ್‌ನಲ್ಲಿ ಭಾಗಿಯಾಗುತ್ತಿದ್ದಾರೆ. ಮೇ 16ರಿಂದ ಶುರುವಾಗಿದ್ದು, ಮೇ 27ರವರೆಗೆ ಈ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಬಾಲಿವುಡ್ (Bollywood) ನಟಿಯರಾದ ಊರ್ವಶಿ ರೌಟೇಲಾ (Urvashi Rautela), ಸಾರಾ ಅಲಿ ಖಾನ್ (Sara Ali Khan), ಇಶಾ ಗುಪ್ತಾ, ಸೀತಾ ರಾಮಂ ಸುಂದರಿ ಮೃಣಾಲ್ ಠಾಕೂಲ್ ಅವರು ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕಿದ್ದಾರೆ. ಈ ಕುರಿತ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

ಕಾನ್ ಫೆಸ್ಟಿವಲ್‌ನಲ್ಲಿ ‘ಐರಾವತ’ ಬೆಡಗಿ ಊರ್ವಶಿ ರೌಟೇಲಾ ಕೇಸರಿ ಬಣ್ಣದ ಗೌನ್‌ನಲ್ಲಿ ಮಿಂಚಿದ್ದಾರೆ. ಸಾರಾ ಅಲಿ ಖಾನ್ ಅವರು ಬಿಳಿ ಬಣ್ಣದ ಸೀರೆಯುಟ್ಟು ಸ್ಟನ್ನಿಂಗ್ ಲುಕ್‌ನಲ್ಲಿ ಗಮನ ಸೆಳೆದಿದ್ದಾರೆ. ಇದನ್ನೂ ಓದಿ:‘ಬಿಗ್ ಬಾಸ್’ ಸ್ನೇಹಾ ಆಚಾರ್ಯ ಬೇಬಿ ಬಂಪ್ ಫೋಟೋಸ್

ನಟಿ ಮೃಣಾಲ್ ಠಾಕೂರ್ (Mrunal Thakur) ಅವರು ಲೈಟ್ ಡ್ರೆಸ್‌ನಲ್ಲಿ ಸಖತ್ ಹಾಟ್ ಪೋಸ್ ನೀಡಿದ್ದಾರೆ. ಇಶಾ ಗುಪ್ತಾ (Esha Gupta) ಅವರು ಬಳಿ ಬಣ್ಣದ ಮಾಡ್ರನ್ ಡ್ರೆಸ್‌ನಲ್ಲಿ ಕಂಗೊಳಿಸಿದ್ದಾರೆ. ಒಟ್ನಲ್ಲಿ ಬಾಲಿವುಡ್ ಬೆಡಗಿಯರು ಕಾನ್ ಫೆಸ್ಟಿವಲ್‌ನಲ್ಲಿ ತಮ್ಮ ಹಾಟ್ & ಬೋಲ್ಡ್ ಲುಕ್‌ನಿಂದ ಮಿಂಚಿದ್ದಾರೆ.

Share This Article