ಆಕ್ಸಿಜನ್ ಕೊರತೆಯಿಂದ ಕ್ಯಾನ್ಸರ್ ರೋಗಿ ಸಾವು- ಕಾರಣ ಅದಲ್ಲ ಅಂತ ವೈದ್ಯರ ವಾದ

By
1 Min Read

ಕಲಬುರಗಿ: ಲಿಕ್ವಿಡ್ ಆಕ್ಸಿಜನ್ (Liquid Oxygen) ಕೊರತೆಯಿಂದ ಕ್ಯಾನ್ಸರ್ ರೋಗಿಯೊಬ್ಬರು ಸಾವನ್ನಪ್ಪಿರುವಂತಹ ಘಟನೆ ಕಲಬುರಗಿಯ ಕಿದ್ವಾಯಿ ಆಸ್ಪತ್ರೆಯಲ್ಲಿ ನಡೆದಿದೆ.

ಝಕೀರಾ ಬೇಗಂ ಮೃತ ಮಹಿಳೆ. ಬೀದರ್ ಜಿಲ್ಲೆಯ ಝಕೀರಾ ಬೇಗಂ ಕ್ಯಾನ್ಸರ್ ರೋಗ (Cancer Patient) ದಿಂದ ಬಳಲುತ್ತಿರುವ ಹಿನ್ನೆಲೆ ಕಲಬುರಗಿಯ ಕಿದ್ವಾಯಿ ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡೋದಕ್ಕೆ ಮುಂದಾಗಿದ್ದರು. ಆದರೆ ಬೆಳಗ್ಗೆ ಕಿದ್ವಾಯಿ ಆಸ್ಪತ್ರೆ (Kidwai Hospital) ಯ ಐಸಿಯುನಲ್ಲಿನ ಆಕ್ಸಿಜನ್ ಖಾಲಿಯಾಗಿದ್ದರಿಂದ ಝಕೀರಾ ಬೇಗಂ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಪಿಎಸ್‌ಐ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಯುವಕ ಆತ್ಮಹತ್ಯೆ

ಮತ್ತೊಂದೆಡೆ ಐಸಿಯುನಲ್ಲಿದ್ದ ಕನ್ಯಾಕುಮಾರಿ ಅನ್ನೋ ಮಹಿಳೆಯನ್ನ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೋಡಿಸೋದಕ್ಕೆ ಮುಂದಾಗಿದ್ದಾರೆ. ಇನ್ನೂ ಆಕ್ಸಿಜನ್ ಕೊರತೆಯಿಂದ ಮಹಿಳೆ ಸಾವನ್ನಪ್ಪಿರೋದನ್ನ ಅಲ್ಲಗಳೆದ ಆಸ್ಪತ್ರೆಯ ವೈದ್ಯರು, ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಹಿನ್ನೆಲೆ ಸಾವನ್ನಪ್ಪಿದ್ದಾರೆ. ಇನ್ನೂ ಜಸ್ಟ್ 15 ರಿಂದ 20 ನಿಮಿಷದಲ್ಲಿ ಆಕ್ಸಿಜನ್ ಬರುತ್ತಿತ್ತು. ಆದರೆ ರಿಸ್ಕ್ ಬೇಡ ಅಂತಾ ಬೇರೆಡೆ ಕಳುಹಿಸಿದ್ದೇವೆ. ಅದಾದ ಬಳಿಕ ಆ ಆಸ್ಪತ್ರೆಗೆ ದಾಖಲಿಸಿದ ಮೇಲೆ ಆ ಮಹಿಳೆ ಸಾವನ್ನಪ್ಪಿದ್ದಾರೆ ಅಂತಾ ವೈದ್ಯ ಎಡವಟ್ಟಿನ ಹೇಳಿಕೆ ನೀಡಿದ್ದಾರೆ.

ಅದೃಷ್ಟ ಅಂದ್ರೆ ಜಿಮ್ಸ್ ಆಸ್ಪತ್ರೆಯಲ್ಲಿ ಕನ್ಯಾಕುಮಾರಿ ಅನ್ನೋ ಮಹಿಳೆ ಚಿಕಿತ್ಸೆ ಪಡೆಯೋದಕ್ಕೆ ಮುಂದಾಗಿದ್ದಾರೆ. ಆದರೆ ಕಿದ್ವಾಯಿ ಆಸ್ಪತ್ರೆಯ ವೈದ್ಯ ನವೀನ್ ಕನ್ಯಾಕುಮಾರಿ ಕೂಡ ಸಾವನ್ನಪ್ಪಿದ್ದಾರೆ ಅಂತಾ ಎಡವಟ್ಟಿನ ಹೇಳಿಕೆ ನೀಡಿದ್ದಾರೆ.

Share This Article