ಕೆನಡಾದ ಮೂರು ಕಡೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‍ನಿಂದ ಗುಂಡಿನ ದಾಳಿ – ವೀಡಿಯೋ ವೈರಲ್

Public TV
1 Min Read

ಒಟ್ಟಾವಾ: ಕೆನಡಾದಲ್ಲಿ (Canada) ಮೂರು ಕಡೆ ನಡೆದ ಗುಂಡಿನ ದಾಳಿಯ ಹೊಣೆಯನ್ನು ಲಾರೆನ್ಸ್ ಬಿಷ್ಣೋಯ್ (Lawrence Bishnoi) ಗ್ಯಾಂಗ್‍ ಹೊತ್ತುಕೊಂಡಿದೆ. ದಾಳಿಯ ವೀಡಿಯೋ ವೈರಲ್ ಆಗಿದೆ. ಇನ್ನೂ ದಾಳಿಗೆ ಕಾರಣ ಏನು ಎಂಬುದರ ಬಗ್ಗೆ ಗ್ಯಾಂಗ್‌ನ ಸದಸ್ಯ ಫತೇ ಪೋರ್ಚುಗಲ್‌ (Fateh Portugal) ವೀಡಿಯೋವೊಂದನ್ನು ಹರಿ ಬಿಟ್ಟಿದ್ದಾನೆ.

ವೈರಲ್‌ ಆಗಿರುವ ವೀಡಿಯೋದಲ್ಲಿ ಶೂಟರ್‌ಗಳು ಸುಧಾರಿತ ಶಸ್ತ್ರಾಸ್ತ್ರಗಳನ್ನು ಹಿಡಿದುಕೊಂಡು ಗುಂಡು ಹಾರಿಸುತ್ತಿರುವುದು ಸೆರೆಯಾಗಿದೆ. ಇನ್ನೂ ದಾಳಿಗೆ ಕಾರಣವನ್ನು ಫತೇ ಪೋರ್ಚುಗಲ್‌ ವಿವರಿಸಿದ್ದು, ನವಿ ಟೆಶಿ ಎಂಬ ವ್ಯಕ್ತಿ ಲಾರೆನ್ಸ್ ಬಿಷ್ಣೋಯ್ ಹೆಸರು ಬಳಸಿಕೊಂಡು ಜನರಿಂದ ಹಣ ವಸೂಲಿ ಮಾಡಿದ್ದೇ ದಾಳಿಗೆ ಕಾರಣ ಎಂದು ಹೇಳಿದ್ದಾನೆ. ಇದನ್ನೂ ಓದಿ: ಬಿಷ್ಣೋಯ್ ಹೆಸರಲ್ಲಿ ಬೆದರಿಕೆ ಹಾಕಿ ಒಂದು ಕೋಟಿಗೆ ಡಿಮ್ಯಾಂಡ್ – ತಿಹಾರ್‌ ಜೈಲಲ್ಲಿ ಫ್ರೆಂಡ್ಸ್‌ ಆಗಿದ್ದ ಗ್ಯಾಂಗ್‌ ಅಂದರ್‌!

ನವಿ ಟೆಶಿ ಎಂಬಾತ ಗಾಯಕರಿಂದ 50 ಲಕ್ಷ ರೂ. ಸುಲಿಗೆ ಮಾಡಿದ್ದಾನೆ. ಇದೇ ಕಾರಣಕ್ಕೆ ನಾವು ಆತನ ಬೆನ್ನುಬಿದ್ದಿದ್ದೇವೆ. ನಮಗೆ ಕಷ್ಟಪಟ್ಟು ದುಡಿಯುವ ಜನರೊಂದಿಗೆ ದ್ವೇಷವಿಲ್ಲ. ಪ್ರಾಮಾಣಿಕ ಕೆಲಸದ ಮೂಲಕ ಜೀವನ ಸಾಗಿಸುವವರು ಮತ್ತು ನಮ್ಮ ಯುವಕರನ್ನು ಗೌರವಿಸುವವರೊಂದಿಗೆ ನಮಗೆ ಯಾವುದೇ ತಕರಾರಿಲ್ಲ.

ನಮ್ಮ ವಿರುದ್ಧ ಯಾರಾದರೂ ಸುಳ್ಳು ಸುದ್ದಿಗಳನ್ನು ಹರಡಿದರೆ ಅವರ ಜೀವ ಅಥವಾ ವ್ಯವಹಾರಗಳಿಗೆ ಉಂಟಾಗುವ ಹಾನಿಯ ಜವಾಬ್ದಾರಿ ಅವರದ್ದೇ ಆಗಿರುತ್ತದೆ. ನಮ್ಮ ನೀತಿ ತಪ್ಪಾಗಿ ಕಾಣಿಸಬಹುದು, ನಮ್ಮ ಉದ್ದೇಶ ತಪ್ಪಲ್ಲ ಎಂದು ಫತೇ ಪೋರ್ಚುಗಲ್‌ ವೀಡಿಯೋದಲ್ಲಿ ಹೇಳಿಕೊಂಡಿದ್ದಾನೆ.

ಇತ್ತೀಚೆಗೆ ಕೆನಡಾ ಸರ್ಕಾರ ಬಿಷ್ಣೋಯ್ ಗ್ಯಾಂಗ್‌ನ್ನು ಭಯೋತ್ಪಾದಕ ಸಂಘಟನೆ ಪಟ್ಟಿಗೆ ಸೇರಿಸಿತ್ತು. ಇದನ್ನೂ ಓದಿ: ಭದ್ರತೆಗೆ ಹೊಸ ಬುಲೆಟ್‌ ಪ್ರೂಫ್‌ ಕಾರು ಖರೀದಿಸಿದ ಸಲ್ಮಾನ್ ಖಾನ್

Share This Article