ಸೆ.27ರಿಂದ ಕೆನಾಡಕ್ಕೆ ವಿಮಾನ ಹಾರಾಟ ಪುನಾರಂಭಿಸಲಿರುವ ಭಾರತ

Public TV
1 Min Read

ಒಟ್ಟಾವಾ: ಕೋವಿಡ್-19 ಕಾರಣದಿಂದ ಕೆಲವು ತಿಂಗಳಿನಿಂದ ಕೆನಾಡ ಭಾರತದ ವಿಮಾನಗಳನ್ನು ನಿಷೇಧಿಸಿತ್ತು. ಇದೀಗ ಸೆಪ್ಟೆಂಬರ್ 27ರಿಂದ ಭಾರತದ ಎಲ್ಲಾ ವಿಮಾನಗಳು ಪುನಾರಂಭಗೊಳ್ಳಲಿದೆ. ಇದನ್ನೂ ಓದಿ: ದ್ವೇಷದ ವಿಷವನ್ನು ಬಿತ್ತಿರುವಾಗ ಅಮೃತ ಮಹೋತ್ಸವಕ್ಕೆ ಅರ್ಥವಿದೆಯೇ?: ರಾಹುಲ್

ಕಳೆದ ವಾರ ಜಸ್ಟಿನ್ ಟ್ರೂಡೊ ನೇತೃತ್ವದ ಫೆಡರಲ್ ಸರ್ಕಾರವು ಭಾರತದ ಎಲ್ಲಾ ವಾಣಿಜ್ಯ ಮತ್ತು ಖಾಸಗಿ ಪ್ರಯಾಣಿಕರ ವಿಮಾನಗಳ ಮೇಲಿನ ನಿರ್ಬಧವನ್ನು ಸೆಪ್ಟೆಂಬರ್ 26ರವರೆಗೆ ವಿಸ್ತರಿಸಿತ್ತು. ಆದರೆ ಇದೀಗ ನಿಷೇಧದ ಅವಧಿ ಮುಕ್ತಾಯಗೊಂಡಿದ್ದು, ಕೆಲವು ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಭಾರತದಿಂದ ಪ್ರಯಾಣಿಕರು ಕೆನಾಡಕ್ಕೆ ಪ್ರಯಾಣಿಸಬಹುದಾಗಿದೆ. ಅಲ್ಲದೇ ಪ್ರಯಾಣಿಸುವ ಮುನ್ನ ದೆಹಲಿ ವಿಮಾನ ನಿಲ್ದಾಣದಲ್ಲಿ ಕೋವಿಡ್-19 ನೆಗೆಟಿವ್ ರಿಪೋರ್ಟ್ ಸಲ್ಲಿಸಬೇಕಾಗುತ್ತದೆ.

ಈ ಕುರಿತಂತೆ ಕೆನಾಡ ಸರ್ಕಾರ ಸೆಪ್ಟೆಂಬರ್ 27ರಿಂದ ಕೆನಾಡಕ್ಕೆ ಭಾರತದಿಂದ ವಿಮಾನಗಳು ಪುನಾರಂಭಗೊಳ್ಳಲಿದೆ ಎಂದು ತಿಳಿಸಿತ್ತು. ಕೋವಿಡ್-19 ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈ ವಾರದ ಆರಂಭದಲ್ಲಿ ಕೆನಡಾ ಭಾರತದಿಂದ ಕೆನಾಡಕ್ಕೆ ಪ್ರಯಾಣಿಸುವ ಪ್ರಯಾಣಿಕರಿಗೆ ಕೆಲವು ನಿಯಮಗಳನ್ನು ಪಾಲಿಸುವಂತೆ ಸೂಚಿಸಿದೆ. ಇದನ್ನೂ ಓದಿ: ಚಾರ್ಮಾಡಿ ಘಾಟಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ- ತಪ್ಪಿದ ಭಾರೀ ಆನಾಹುತ

ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ನಿಲ್ದಾಣದ ಸಂಪರ್ಕ ಕಟ್ಟಡ (ಎಸಿಬಿ) ಮೆಟ್ರೊ ನಿಲ್ದಾಣದ ಮೇಲಿರುವ ಜೆನ್‍ಸ್ಟರಿಂಗ್ಸ್ ಪ್ರಯೋಗಾಲಯದಿಂದ ಕೋವಿಡ್ -19 ಪರೀಕ್ಷೆಗೆ ಒಳಗಾಗಿ ನೆಗೆಟಿವ್ ವರದಿಯನ್ನು ಪಡೆಯಬೇಕು. ಅದರಲ್ಲಿಯೂ 18 ಗಂಟೆಗಳ ಒಳಗೆ ಕೋವಿಡ್ ಪರೀಕ್ಷೆಗೆ ಒಳಗಾಗಬೇಕು ಎಂದು ತಿಳಿಸಿದೆ. ನಂತರ ಏರ್ ಆಪರೇಟರ್‍ಗಳಿಗೆ ಕ್ಯೂಆರ್ ಕೋಡ್‍ನೊಂದಿಗೆ ಪರೀಕ್ಷಾ ವರದಿಯನ್ನು ಪ್ರಸ್ತುತಪಡಿಸಬೇಕು ಸೂಚಿಸಿದೆ.

Share This Article
Leave a Comment

Leave a Reply

Your email address will not be published. Required fields are marked *