ಸತ್ತವರು, ಶಾಶ್ವತವಾಗಿ ವಲಸೆ ಹೋದವರನ್ನು ಪಟ್ಟಿಯಲ್ಲಿ ಸೇರಿಸಲು ಸಾಧ್ಯನಾ? – ಚುನಾವಣಾ ಆಯೋಗ ಸಮರ್ಥನೆ

Public TV
1 Min Read

– 4ನೇ ದಿನವೂ ಸಂಸತ್‌ನಲ್ಲಿ ಹಂಗಾಮಾ, ನಾಳೆಗೆ ಮುಂದೂಡಿಕೆ

ನವದೆಹಲಿ: ಬಿಹಾರದಲ್ಲಿ (Bihar) ನಡೆಯುತ್ತಿರುವ ಮತದಾರರ ವಿಶೇಷ ಪಟ್ಟಿ ಪರಿಷ್ಕರಣೆಯನ್ನು (Bihar Electoral Roll Revision) ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ಕುಮಾರ್ ಸಮರ್ಥಿಸಿಕೊಂಡಿದ್ದಾರೆ.

ಸತ್ತವರು, ಶಾಶ್ವತವಾಗಿ ವಲಸೆ ಹೋದವರು, ಒಂದಕ್ಕಿಂತ ಹೆಚ್ಚು ಕಡೆ ಮತದಾರರ ಪಟ್ಟಿಯಲ್ಲಿ ಇರೋರನ್ನು ಚುನಾವಣಾ ಆಯೋಗ ಪಟ್ಟಿಯಲ್ಲಿ ಸೇರಿಸಲು ಸಾಧ್ಯನಾ ಅಂತ ಜ್ಞಾನೇಶ್‌ಕುಮಾರ್ ಪ್ರಶ್ನೆ ಮಾಡಿದ್ದಾರೆ. ಬಿಹಾರದಿಂದ ಹಿಡಿದು ದೇಶಾದ್ಯಂತ ಅನರ್ಹ ಮತದಾರರನ್ನು ಕೈಬಿಡಲಾಗುತ್ತಿದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ. ಏಜೆಂಟರಿಂದ ಯಾವುದೇ ಹೆಸರು ಬಿಟ್ಟು ಹೋಗಿದ್ದರೆ ಅಥವಾ ಮರು ಸೇರ್ಪಡೆಗೆ ಆ.1ರಿಂದ ಸೆ.1ವರೆಗೆ ಕಾಲಾವಕಾಶವಿದೆ ಅಂತಲೂ ಮುಖ್ಯ ಚುನಾವಣಾ ಆಯುಕ್ತರು ಹೇಳಿದ್ದಾರೆ. ಇದನ್ನೂ ಓದಿ: 15 ವರ್ಷದಿಂದ ನಡೆಯುತ್ತಿದೆ ಬಳ್ಳಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ- ತಲೆ ಕೆಡಿಸಿಕೊಳ್ಳದ ಜನಪ್ರತಿನಿಧಿಗಳು

ಇನ್ನೂ, ಕರ್ನಾಟಕದ ಒಂದು ಮತ ಕ್ಷೇತ್ರದಲ್ಲಿ ಮತ ವಂಚನೆ ಆಗಿರೋ ಬಗ್ಗೆ ತಮ್ಮಲ್ಲಿ 100%ರಷ್ಟು ಸಾಕ್ಷ್ಯವಿದೆ ಎಂದು ರಾಹುಲ್ ಗಾಂಧಿ ಪುನರುಚ್ಚರಿಸಿದ್ದಾರೆ. ಇದರಿಂದ ನೀವು ತಪ್ಪಿಸಿಕೊಳ್ಳಬಹುದು ಅಂತ ಭಾವಿಸಿದ್ರೆ ಅದು ಸಾಧ್ಯವಿಲ್ಲ ಅಂತಲೂ ರಾಹುಲ್ ಗಾಂಧಿ ಎಚ್ಚರಿಕೆ ಕೊಟ್ಟಿದ್ದಾರೆ. ಇನ್ನು, ಸಂಸತ್‌ನಲ್ಲಿ ಇವತ್ತೂ ಗದ್ದಲವಾಗಿ ಕಲಾಪವನ್ನು ನಾಳೆಗೆ ಮುಂದೂಡಲಾಗಿದೆ. ಮುಂದಿನ ವಾರದಿಂದ ಬಂಗಾಳದ ಮತದಾರರ ಪಟ್ಟಿ ಪರಿಷ್ಕರಣೆ ಆಗಲಿದೆ.  ಇದನ್ನೂ ಓದಿ: DCC Bank Election| ಲಿಂಗಾಯತ ನಾಯಕರ ಸಭೆಗೆ ಜಾರಕಿಹೊಳಿ ಬ್ರದರ್ಸ್‌ ಚೆಕ್‌ಮೇಟ್!

Share This Article