ಪಾಕಿಸ್ತಾನಕ್ಕೆ ಸಿಂಧೂ ನದಿ ನೀರು ತಡೆಯಲು ಸಾಧ್ಯನಾ? – ಜಲತಜ್ಞ ರಾಜಾರಾವ್ ಹೇಳಿದ್ದೇನು?

Public TV
2 Min Read

ಬೆಂಗಳೂರು: ಶತ್ರುರಾಷ್ಟ್ರ ಪಾಕಿಸ್ತಾನಕ್ಕೆ (Pakistan) ಬುದ್ಧಿ ಕಲಿಸಲು ಸಿಂಧೂ ನದಿ ನೀರು (Sindhu River) ಒಪ್ಪಂದವನ್ನ ಭಾರತ ತಾತ್ಕಾಲಿಕವಾಗಿ ರದ್ದುಗೊಳಿಸುವ ನಿರ್ಧಾರ ತೆಗೆದುಕೊಂಡಿದೆ. ಒಂದು ಹನಿ ನೀರನ್ನು ಪಾಕಿಸ್ತಾನಕ್ಕೆ ಹರಿಸದಂತೆ ನೋಡಿಕೊಳ್ಳಲು 3 ಅಂಶಗಳ ಕಾರ್ಯತಂತ್ರ ರೂಪಿಸಲು ತಜ್ಞರಿಗೆ ಸೂಚನೆ ಕೊಟ್ಟಿದೆ. ಆದ್ರೆ ಪಾಕಿಸ್ತಾನಕ್ಕೆ ನೀರು ನಿಲ್ಲಿಸೋದು ನಿಜಕ್ಕೂ ಸುಲಭನಾ? ಸಾವಿರಾರು ಕಿ.ಮೀ ಹರಿಯೋ ಸಿಂಧೂ ತಡೆಯೋ ಸಾಮಾರ್ಥ್ಯ ಭಾರತಕ್ಕಿದೀಯಾ? ಪಾಕಿಸ್ತಾನ ವಿರುದ್ಧ ನೀರಿನ ಯುದ್ಧ ಹೇಗೆ? ಇದೆಲ್ಲದರ ವಾಸ್ತವತೆಯನ್ನು ನೀರಾವರಿ ತಜ್ಞ ಕ್ಯಾಪ್ಟನ್ ರಾಜಾರಾವ್ ಬಿಚ್ಚಿಟ್ಟಿದ್ದಾರೆ.

ಈ ಕುರಿತು `ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಅಷ್ಟು ದೊಡ್ಡ ನದಿ ನೀರು ನಿಲ್ಲಿಸಲು ಇರುವ ಆಯ್ಕೆಗಳೇನು? ಸವಾಲುಗಳೇನು ಎಂಬ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಸದ್ಯ 1960ರ ಸಿಂಧೂ ನದಿ ಒಪ್ಪಂದದ ಪ್ರಕಾರ, 35 ಮಿಲಿಯನ್ ಎಕರ್ ಫೀಟ್ ನೀರು ಭಾರತಕ್ಕೆ, 135 ಎಕರ್ ಫೀಟ್ ನೀರು ಪಾಕಿಸ್ತಾನಕ್ಕೆ ಹಂಚಿಕೆಯಾಗಿದೆ. ಸದ್ಯದ ಸಮಸ್ಯೆಗಳ ನಡುವೆ ಜನಸಂಖ್ಯೆ ಹೆಚ್ಚಳ ಇರುವ ಕಾರಣ ಪಾಕಿಸ್ತಾನದ 135 ಎಕರ್ ಫೀಟ್ ನೀರಲ್ಲಿ ಭಾರತ 20 ಮಿಲಿಯನ್ ಎಕರ್ ಫೀಟ್ ನೀರನ್ನ ಬಳಸಿಕೊಳ್ಳಬಹುದು. ಇದನ್ನೂ ಓದಿ: Bengaluru | ಫುಡ್ ಕಿಟ್‌ನಲ್ಲಿ ಸಾಗಿಸುತ್ತಿದ್ದ 8.5 ಕೋಟಿ ಮೌಲ್ಯದ ಮಾದಕ ವಸ್ತು ಸೀಜ್

ಪಾಕಿಸ್ತಾನ್ ಡೆಲ್ಟಾ ಪ್ರದೇಶದ ಹಿಂದೆಯೇ ಇರುವ ಸುಕುರ್ ವ್ಯಾಲಿಯಲ್ಲಿ ಇಷ್ಟು ನೀರು ವ್ಯರ್ಥವಾಗುತ್ತಿದೆ. ಹೀಗಾಗಿ ಜನಸಂಖ್ಯೆ ಹೆಚ್ಚಳ, ಅಭಿವೃದ್ಧಿ ಹೆಸರಲ್ಲಿ ಹೆಚ್ಚಿನ ನೀರು ಬಳಸಿಕೊಳ್ಳುವ ಕಾರಣಕ್ಕೆ ಒಪ್ಪಂದ ಮುರಿಯಬಹುದು. ಇದನ್ನು ಅಂತಾರಾಷ್ಟ್ರೀಯ ನ್ಯಾಯಾಲಯ ಕೂಡ ಒಪ್ಪಲಿದೆ. ಈ ವಾದವನ್ನ ಮುಂದಿಟ್ಟು, ಅಲ್ಪ ಪ್ರಮಾಣದ ನೀರು ತಡೆಯಲು ಸಾಧ್ಯವಿದೆ. ಆದರೆ ಪೂರ್ಣ ಪ್ರಮಾಣದಲ್ಲಿ ಸಂಪೂರ್ಣ ನೀರು ತಡೆಯೋದು ಅಸಾಧ್ಯ. ದೇಶದ ಆ ಭಾಗದಲ್ಲಿ ಅಷ್ಟು ನೀರನ್ನ ತಡೆಯುವ ದೊಡ್ಡ ಡ್ಯಾಂಗಳಿಲ್ಲ. ಈ ನದಿಯಲ್ಲಿ ಮಳೆ ನೀರು ಮಾತ್ರ ಅಲ್ಲದೇ ಭಾರೀ ಪ್ರಮಾಣದಲ್ಲಿ ಹಿಮ ಕೂಡ ನೀರಾಗಿ ಪರಿವರ್ತನೆಯಾಗಿ ಹರಿಯಲಿದೆ. ಹಾಗಾಗಿ ನೀರು ಸಂಪೂರ್ಣ ತಡೆಯಲು ಸಾಧ್ಯವಿಲ್ಲ. ಇದನ್ನೂ ಓದಿ: ಭಾರತ-ಪಾಕ್‌ ನಡುವಿನ ಉದ್ವಿಗ್ನತೆಯಿಂದ ಯುದ್ಧದ ಭೀತಿ – ಗಡಿಯಲ್ಲಿ ಬಂಕರ್‌ ಶುಚಿಗೊಳಿಸುವ ಕಾರ್ಯ ಚುರುಕು

ಡ್ಯಾಂಗಳ ನಿರ್ಮಾಣ ಆಗಬೇಕು. ಡೈವರ್ಷನ್ ಮಾಡಬೇಕು. ಅಷ್ಟು ವೇಗವಾಗಿ ಡ್ಯಾಂ ನಿರ್ಮಾಣ, ಡೈವರ್ಷನ್ ಮಾಡಲು ಸಾಧ್ಯ ಇಲ್ಲ. ಅಷ್ಟು ಪ್ರಮಾಣದ ನೀರು ತಡೆಯುವುದರಿಂದ ದೇಶದ ಒಳಭಾಗದ ಪ್ರದೇಶದ ಜನರಿಗೆ ತೊಂದರೆಯಾಗುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಡ್ಯಾಂ ನಿರ್ಮಾಣ ಮಾಡಿ ಹಂತ ಹಂತವಾಗಿ ನೀರು ತಡೆಯಬಹುದು ಎಂದು ರಾಜಾ ರಾವ್ ತಿಳಿಸಿದ್ದಾರೆ. ಇದನ್ನೂ ಓದಿ: Pahalgam Terror Attack | ಮರದಿಂದ ಕೆಳಗಿಳಿದು ಉಗ್ರರ ದಾಳಿ

Share This Article