ಬಿಜೆಪಿ ಪರ ಪ್ರಚಾರ – ನಾಲ್ವರು ಪೊಲೀಸ್ ಎತ್ತಂಗಡಿ

Public TV
1 Min Read

ಚಿತ್ರದುರ್ಗ: ಬಿಜೆಪಿ (BJP) ಪರ ಪ್ರಚಾರ ಮಾಡಿದ್ದಕ್ಕಾಗಿ ನಾಲ್ವರು ಪೊಲೀಸರನ್ನು (Police) ವರ್ಗಾವಣೆ (Transfer) ಮಾಡಿರುವ ಘಟನೆ ಚಿತ್ರದುರ್ಗ (Chitradurga) ಜಿಲ್ಲೆಯ ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ.

ರಾಜಕೀಯ ಪಕ್ಷದ ಪರ ಪ್ರಚಾರ ಮಾಡಿದ ಪೊಲೀಸ್ ಕಾನ್‌ಸ್ಟೇಬಲ್ ಶಿವಮೂರ್ತಿ, ಫಿರ್ದೋಸ್, ತಿಮ್ಮೇಶ್ ತಿಮ್ಮರಾಯಪ್ಪ ಹಾಗೂ ಮೌನೇಶ್ವರ್ ವಿರುದ್ಧ ಕಾಂಗ್ರೆಸ್ ಚುನಾವಣಾಧಿಕಾರಿಗೆ ದೂರು ನೀಡಲಾಗಿದೆ. ಈ ಹಿನ್ನೆಲೆ ನಾಲ್ವರು ಪೊಲೀಸರನ್ನು ವರ್ಗಾವಣೆ ಮಾಡಿ ಎಸ್‌ಪಿ ಆದೇಶ ನೀಡಿದ್ದಾರೆ.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಲಿಂಗೇಗೌಡ ಈ ಬಗ್ಗೆ ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದರು. ಇದಕ್ಕೆ ಸಂಬಂಧಪಟ್ಟಂತೆ ನಾಲ್ವರು ಪೊಲೀಸರನ್ನು ವರ್ಗಾವಣೆಗೊಳಿಸಿ ಎಸ್‌ಪಿ ಕೆ.ಪರಶುರಾಮ್ ಆದೇಶ ನೀಡಿದ್ದಾರೆ. ಇದನ್ನೂ ಓದಿ: ಜಗದೀಶ್ ಶೆಟ್ಟರ್‌ಗೆ ಟಿಕೆಟ್ ಸಿಗುವ ವಿಶ್ವಾಸವಿದೆ- ಪ್ರಹ್ಲಾದ್ ಜೋಶಿ

ಘಟನೆಗೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆಯ ವೀರೇಶ್, ಶಿವಾನಂದ್, ತಾ.ಪಂ. ಕಚೇರಿಯ ಹರ್ಷವರ್ಧನ ವಿರುದ್ಧವೂ ದೂರು ನೀಡಲಾಗಿದೆ. ಇವರೆಲ್ಲರೂ ಬಿಜೆಪಿ ಅಭ್ಯರ್ಥಿ ಪೂರ್ಣಿಮಾ ಶ್ರೀನಿವಾಸ್ ಪರ ಕೆಲಸ ಮಾಡಿರುವ ಆರೋಪ ಹೊತ್ತಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ ನಾಯಕರ ಮುಂದೆ 3 ಡಿಮ್ಯಾಂಡ್‌ ಇಟ್ಟ ಲಕ್ಷ್ಮಣ ಸವದಿ – ಏನದು ಬೇಡಿಕೆ?

Share This Article