ಭೀಕರ ರಸ್ತೆ ಅಪಘಾತ – `Call Of Duty’ ಗೇಮ್ ತಯಾರಕ ವಿನ್ಸ್ ಜಾಂಪೆಲ್ಲಾ ನಿಧನ

1 Min Read

ವಾಷಿಂಗ್ಟನ್: ಅಮೆರಿಕದ ಲಾಸ್ ಎಂಜಲೀಸ್‌ನಲ್ಲಿ (Los Angeles) ನಡೆದ ಭೀಕರ ರಸ್ತೆ ಅಪಘಾತದಲ್ಲಿ `ಕಾಲ್ ಆಫ್ ಡ್ಯೂಟಿ’ (Call Of Duty) ವಿಡಿಯೋ ಗೇಮ್ ತಯಾರಿಸಿದ್ದ ಖ್ಯಾತ ಗೇಮ್ ತಯಾರಕ ವಿನ್ಸ್ ಜಾಂಪೆಲ್ಲಾ (Vince Zampella) ನಿಧನರಾಗಿದ್ದಾರೆ.

`ಕಾಲ್ ಆಫ್ ಡ್ಯೂಟಿ’ ಎಂಬ ಮಿಲಿಟರಿ ಗೇಮ್ ತಯಾರಿಸುವ ಮೂಲಕ ಭಾರೀ ಖ್ಯಾತಿ ಗಳಿಸಿದ್ದ ಜಾಂಪೆಲ್ಲಾ ಅವರು ಕಾರು ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾರೆ. ಲಾಸ್ ಏಂಜಲೀಸ್‌ನ ಉತ್ತರದ ಸ್ಯಾನ್ ಗೇಬ್ರಿಯಲ್ ಪರ್ವತಗಳಲ್ಲಿನ ಅತೀ ಹೆಚ್ಚು ತಿರುವು ರಸ್ತೆಯಾದ ಏಂಜಲೀಸ್ ಕ್ರೆಸ್ಟ್ ಹೆದ್ದಾರಿಯಲ್ಲಿ ಈ ಅವಘಡ ಸಂಭವಿಸಿದೆ.ಇದನ್ನೂ ಓದಿ: ದ್ವೇಷ ಭಾಷಣ ಮಸೂದೆ ವಾಪಸ್‌ಗೆ ಒತ್ತಾಯ – ಬಿಜೆಪಿಯಿಂದ ಮೌನ ಪ್ರತಿಭಟನೆ, ಡಿಸಿಗೆ ಮನವಿ

ತಮ್ಮ ದುಬಾರಿ ಫೆರಾರಿ ಕಾರಿನಲ್ಲಿ ಚಲಿಸುತ್ತಿರುವಾಗ ನಿಯಂತ್ರಣ ತಪ್ಪಿದ್ದು, ಅಪಘಾತಕ್ಕೀಡಾಗಿದೆ. ಅಪಘಾತದ ತೀವ್ರತೆಗೆ ಕ್ಷಣಾರ್ಧದಲ್ಲಿ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ವಿನ್ಸ್ ಜಾಂಪೆಲ್ಲಾ ಸೇರಿದಂತೆ 6 ಮಂದಿ ಸಜೀವ ದಹನವಾಗಿದ್ದಾರೆ.

Share This Article