ಚಾಮರಾಜನಗರ: ಜಮೀನುಗಳ ಬೋರ್‌ವೆಲ್‌ಗೆ ಅಳವಡಿಸಿದ್ದ ಕೇಬಲ್ ಕಳವು

By
0 Min Read

ಚಾಮರಾಜನಗರ: ಜಮೀನುಗಳ ಬೋರ್‌ವೆಲ್‌ಗೆ ಅಳವಡಿಸಿದ್ದ ಕೇಬಲ್ ಕಳವಾಗಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

ಒಂದೆಡೆ ಕಾಡು ಪ್ರಾಣಿಗಳು, ಮತ್ತೊಂದೆಡೆ ಕಳ್ಳರ ಕಾಟ. ರೈತರಿಗೆ ಈಗ ಕೇಬಲ್ ಕಳ್ಳತನದ ತಲೆ ನೋವು ಸೃಷ್ಟಿಯಾಗಿದೆ.

ಗುಂಡ್ಲುಪೇಟೆ ತಾಲೂಕಿನ ನೇನೆಕಟ್ಟೆ ಗ್ರಾಮದಲ್ಲಿ ಕೇಬಲ್ ಕಳ್ಳತನದಿಂದ ರೈತರು ಕಂಗೆಟ್ಟಿದ್ದಾರೆ. ಕೆಲ ದಿನಗಳ ಹಿಂದೆ ಕಮರಹಳ್ಳಿ, ಬಾಚಹಳ್ಳಿ, ಹೊಸಪುರದಲ್ಲೂ ಕೂಡ ಕೇಬಲ್ ಕಳವಾಗಿತ್ತು.

ಗುಂಡ್ಲುಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕೇಬಲ್ ಕಳವನ್ನು ತಡೆಯಲು ರೈತರ ಒತ್ತಾಯಿಸಿದ್ದಾರೆ.

Share This Article