ಮೂರು ಗ್ಯಾರಂಟಿಗಳ ಪರಿಷ್ಕರಣೆ, ಆ.22ಕ್ಕೆ ಕ್ಯಾಬಿನೆಟ್‌ನಲ್ಲಿ ಚರ್ಚೆ: ಸಚಿವರ ಅಭಿಪ್ರಾಯ ಪಡೆಯಲು ಮುಂದಾದ ಸಿಎಂ

Public TV
1 Min Read

ಬೆಂಗಳೂರು: ಸ್ಟೇಜ್ ಬೈ ಸ್ಟೇಜ್ ಗ್ಯಾರಂಟಿಗೆ ಕತ್ತರಿ ಹಾಕಲು ಮಹಾ ಪ್ಲ್ಯಾನ್ ಸಿದ್ಧವಾಗ್ತಿದೆ ಎನ್ನಲಾಗಿದೆ. ಮೂರು ಗ್ಯಾರಂಟಿಗಳ ಮಾನದಂಡಗಳ ಪರಿಷ್ಕರಣೆಗೆ ಕೈ ಹಾಕುವುದು ಗ್ಯಾರಂಟಿ ಎಂಬುದು ಸರ್ಕಾರ ಮೂಲಗಳ ಮಾಹಿತಿ.

ಮೂರು ಗ್ಯಾರಂಟಿಗಳ ಪರಿಷ್ಕರಣೆ ಬಗ್ಗೆ ಹಣಕಾಸು ಇಲಾಖೆ ಡಿಟೇಲ್ಸ್ ರಿಪೋರ್ಟ್ ಕೊಟ್ಟಿದೆ. ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹಜ್ಯೋತಿ ಗ್ಯಾರಂಟಿ ಪರಿಷ್ಕರಣೆ ಬಿಸಿ ತಟ್ಟಲಿದೆ. ಸರ್ಕಾರಿ ನೌಕಕರು, ಐಟಿ ರಿಟರ್ನ್ಸ್ ಮಾಡುವವರು, ಎಪಿಎಲ್ ಕಾರ್ಡ್‌ದಾರರಿಗೆ ಗ್ಯಾರಂಟಿ ಕತ್ತರಿ ಹಾಕುವ ಬಗ್ಗೆ ಗಂಭೀರ ಚರ್ಚೆ ನಡೆದಿದೆ.

ಈ ನಡುವೆ ಆಗಸ್ಟ್ 22 ಗುರುವಾರ ಗ್ಯಾರಂಟಿ ಪರಿಷ್ಕರಣೆ ತೀರ್ಮಾನ ಮಾಡುವ ಸಾಧ್ಯತೆ ಇದೆ. ಆ.22 ರಂದು ಗುರುವಾರ ಕ್ಯಾಬಿನೆಟ್ ಸಭೆ ಕರೆದಿರುವ ಸಿಎಂ ಸಿದ್ದರಾಮಯ್ಯ ಸಚಿವರ ಅಭಿಪ್ರಾಯ ಕೇಳಲಿದ್ದಾರೆ ಎನ್ನಲಾಗಿದೆ.

ಸಭೆಯಲ್ಲಿ ಸಚಿವರ ಜೊತೆ ಗ್ಯಾರಂಟಿ ಪರಿಷ್ಕರಣೆ ಸಂಬಂಧ ಮಹತ್ವದ ಚರ್ಚೆ ನಡೆಸಲಿದ್ದು, ಶಕ್ತಿ ಯೋಜನೆ, ಯುವನಿಧಿ ಹೊರತುಪಡಿಸಿ ಉಳಿದ ಮೂರು ಗ್ಯಾರಂಟಿಗಳಿಗೆ ಮಾರ್ಗಸೂಚಿ ಪರಿಷ್ಕರಣೆ ತೀರ್ಮಾನ ಮಾಡ್ತಾರೆ ಎನ್ನುತ್ತಿದೆ ಸರ್ಕಾರದ ಮೂಲಗಳು.

Share This Article