ಕಾರ್ಯಕಾರಿಣಿ ಸಭೆ ಬಳಿಕ ಸಂಪುಟ ಸರ್ಜರಿ ಫೈನಲ್: ಸಿಎಂ

Public TV
1 Min Read

ನವದೆಹಲಿ: ಈ ಬಾರಿ ದೆಹಲಿ ಭೇಟಿ ಬಹಳ ಫಲಪ್ರದವಾಗಿದೆ. ಜಲಶಕ್ತಿ, ಇಂಧನ, ಪರಿಸರ, ಹಣಕಾಸು, ರಕ್ಷಣಾ ಸಚಿವರನ್ನು ಭೇಟಿ ಮಾಡಿದ್ದೇವೆ. ಈ ವೇಳೆ ಸಕಾರಾತ್ಮಕ ಸ್ಪಂದನೆ ದೊರೆತಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಗುರುವಾರ ನವದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, BJP ಸಂಸ್ಥಾಪನಾ ದಿನಾಚರಣೆಯಲ್ಲಿ ಭಾಗವಹಿಸಲು ನನಗೆ ಅವಕಾಶ ದೊರಕಿರುವುದು ಸಂತೋಷ ತಂದಿದೆ ಎಂದರು.  ಇದನ್ನೂ ಓದಿ: ನಾನು ಇದೇ ಏರಿಯಾದವನು ಏನ್ ಮಾಡ್ತಿಯಾ? – ಚಂದ್ರು ಕೊಲೆ ದಿನ ನಡೆದಿದ್ದು ಏನು?

ಏಪ್ರಿಲ್ 16 ಮತ್ತು 17 ರಂದು BJP ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಲಿದೆ. ಚುನಾವಣೆಗೆ ಯಾವ ರೀತಿಯಲ್ಲಿ ಪೂರ್ವಭಾವಿ ತಯಾರಿಗಳನ್ನು ಮಾಡಿಕೊಳ್ಳಬೇಕೆಂದು ಪಕ್ಷಕ್ಕೆ ಹಾಗೂ ನನಗೆ BJP ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೂಚನೆಯನ್ನು ನೀಡಿದ್ದಾರೆ ಎಂದು ತಿಳಿಸಿದರು.

ಸಚಿವ ಸಂಪುಟದ ವಿಸ್ತರಣೆ ಬಗ್ಗೆ ಸ್ಥೂಲ ಚರ್ಚೆ
ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸ್ಥೂಲವಾಗಿ ಚರ್ಚೆಯಾಗಿದೆ. ವರಿಷ್ಠರು ಎಲ್ಲ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಕಾರ್ಯಕಾರಿಣಿ ಸಭೆಗೆ ಬಂದ ಸಂದರ್ಭದಲ್ಲಿ ಮಿಕ್ಕ ವಿಚಾರಗಳನ್ನು ಮಾತನಾಡುವುದಾಗಿ ತಿಳಿಸಿದ್ದಾರೆ. ಇಲ್ಲಿಯ ವರಿಷ್ಠರು, ನಾಯಕರು, ಸಂಘಟನಾ ಕಾರ್ಯದರ್ಶಿಗಳೊಂದಿಗೆ ಚರ್ಚೆ ಮಾಡಿ ತೀರ್ಮಾನ ಮಾಡೋಣ ಎಂದು ತಿಳಿಸಿದ್ದಾರೆ ಎಂದರು. ಇದನ್ನೂ ಓದಿ: ವಿಎಲ್‍ಸಿ ಮೀಡಿಯಾ ಪ್ಲೇಯರ್ ಬಳಸಿ ಚೀನಾ ಸೈಬರ್ ದಾಳಿ 

ಬಜೆಟ್ ಯೋಜನೆಗಳ ಅನುಷ್ಠಾನಕ್ಕೆ ಮಹತ್ವ
ಬೆಂಗಳೂರಿಗೆ ಹಿಂತಿರುಗಿದ ನಂತರ ಬಜೆಟ್‍ನಲ್ಲಿ ಘೋಷಿಸಿರುವ ಯೋಜನೆಗಳ ಆದೇಶಗಳನ್ನು ನೀಡಿ ಅವುಗಳ ಅನುಷ್ಠಾನಕ್ಕೆ ಹೆಚ್ಚಿನ ಮಹತ್ವ ನೀಡಲಾಗುವುದು ಎಂದರು.

Share This Article
Leave a Comment

Leave a Reply

Your email address will not be published. Required fields are marked *