ದೆಹಲಿಯಲ್ಲಿ ಸಂಪುಟ ವಿಸ್ತರಣೆ ಸರ್ಕಸ್- 18 ಸಂಭಾವ್ಯ ಸಚಿವರ ಪಟ್ಟಿ ಬಹುತೇಕ ಫೈನಲ್

Public TV
2 Min Read

ನವದೆಹಲಿ: ಸಂಪುಟ ವಿಸ್ತರಣೆ (Cabinet Expansion) ಕಸರತ್ತು ಕೊನೆಗೊಂಡಿಲ್ಲ. ಬುಧವಾರ ರಾತ್ರಿಯಿಂದ ದೆಹಲಿಯಲ್ಲಿ ಸಭೆ ಮೇಲೆ ಸಭೆಗಳು ನಡೆದ್ರೂ ಒಮ್ಮತಾಭಿಪ್ರಾಯ ಮೂಡಿಲ್ಲ.

18 ಶಾಸಕರ ಹೆಸರು ಹೆಚ್ಚುಕಡಿಮೆ ಫೈನಲ್ ಆಗಿದ್ದು, ಇನ್ನುಳಿದವರ ಆಯ್ಕೆಗೆ ಕಸರತ್ತು ನಡೆದಿದೆ. ಇತರೆ ಪ್ರಮುಖ ಸಮುದಾಯಗಳಿಗೂ ಡಿಸಿಎಂ ಹುದ್ದೆ ಕೊಡಬೇಕು ಎನ್ನುವ ಮೂಲಕ ಹಾಲಿ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಗೆ ಸಿಎಂ ಸಿದ್ದರಾಮಯ್ಯ (Siddaramaiah) ಇಕ್ಕಟ್ಟಿಗೆ ಸಿಲುಕಿಸಲು ನೋಡಿದ್ದಾರೆ. ಈ ಬಾರಿ ಪ್ರಮುಖ ಸಮುದಾಯಗಳೆಲ್ಲಾ ಪಕ್ಷವನ್ನು ಬೆಂಬಲಿಸಿವೆ. ಹೀಗಾಗಿ ಎಸ್‍ಸಿ, ಎಸ್‍ಟಿ ಹಾಗೂ ಲಿಂಗಾಯತ ಸಮುದಾಯಗಳು ಕೂಡ ಡಿಸಿಎಂ ಹುದ್ದೆಗೆ ಬೇಡಿಕೆ ಇಟ್ಟಿವೆ ಎಂಬ ದಾಳವನ್ನು ಸಿಎಂ ಉರುಳಿಸಿದ್ದಾರೆ. ಅಲ್ಲದೇ ಡಿಕೆ ಶಿವಕುಮಾರ್ ಬಯಸಿದ್ದ ಬೆಂಗಳೂರು ಅಭಿವೃದ್ಧಿ ಖಾತೆ ಬಿಬಿಎಂಪಿ ಚುನಾವಣೆ ಆಗೋವರೆಗೆ ತನ್ನ ಬಳಿಯೇ ಇರಲಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ ಎನ್ನಲಾಗಿದೆ.

ಬೆಳಗಾವಿಯ ಲಕ್ಷ್ಮಿ ಹೆಬ್ಬಾಳ್ಕರ್ (Laxmi Hebbalkar) , ಲಕ್ಷ್ಮಣ ಸವದಿ (Laxman Savadi) ಯನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕು ಎಂಬ ಡಿಸಿಎಂ ಬೇಡಿಕೆಗೆ ಆಗಲ್ಲ, ಇಬ್ಬರಲ್ಲಿ ಒಬ್ಬರ ಹೆಸರನ್ನು ಹೇಳಿ ಎಂದು ಸಿಎಂ ನೇರವಾಗಿ ಹೇಳಿದ್ದಾರೆ. ಮಂತ್ರಿ ಸ್ಥಾನ ಬಯಸಿ 30ಕ್ಕೂ ಹೆಚ್ಚು ಶಾಸಕರು ದೆಹಲಿಯಲ್ಲಿ ಬೀಡುಬಿಟ್ಟಿದ್ದು, ಲಾಬಿ ನಡೆಸಿದ್ದಾರೆ. ಬಿಕೆ ಹರಿಪ್ರಸಾದ್, ಟಿಬಿ ಜಯಚಂದ್ರ, ಆರ್ ಬಿ ತಿಮ್ಮಾಪುರ, ಪುಟ್ಟರಂಗಶೆಟ್ಟಿ, ನಾಗೇಂದ್ರ ಸೇರಿ ಹಲವರು ಮಂತ್ರಿ ಪಟ್ಟಕ್ಕೆ ಪಟ್ಟು ಹಿಡಿದು ಕುಳಿತಿದ್ದಾರೆ. ಕೊಡಗು ಜಿಲ್ಲೆಗೆ ಸಂಪುಟದಲ್ಲಿ ಪ್ರಾತಿನಿಧ್ಯ ಕೊಡಲೇಬೇಕು ಎಂದು ಶಾಸಕ ಪೊನ್ನಣ್ಣ ಆಗ್ರಹಿಸಿದ್ದಾರೆ. ಇದನ್ನೂ ಓದಿ: ನನ್ನ ಅಸ್ತಿತ್ವವೇ ಹೊರಟೋಗಿದೆ, ನಾನೇನು ಕಡುಬು ತಿನ್ನೋಕೆ ರಾಜಕೀಯ ಮಾಡ್ತಿದ್ದೀನಾ – HDK ಪ್ರಶ್ನೆ

ಇವರು ಸಿದ್ದರಾಮಯ್ಯ ಸಂಪುಟ ಸೇರ್ತಾರಾ?
* ಈಶ್ವರ ಖಂಡ್ರೆ – ಭಾಲ್ಕಿ – ಲಿಂಗಾಯತ
* ಲಕ್ಷ್ಮಿ ಹೆಬ್ಬಾಳ್ಕರ್ – ಬೆಳಗಾವಿ ಗ್ರಾಮೀಣ – ಲಿಂಗಾಯತ
* ಶರಣಬಸಪ್ಪ ದರ್ಶನಾಪುರ – ಶಹಾಪುರ – ಲಿಂಗಾಯತ
* ಎಸ್.ಎಸ್.ಮಲ್ಲಿಕಾರ್ಜುನ – ದಾವಣಗೆರೆ ಉತ್ತರ – ಲಿಂಗಾಯತ
* ಚೆಲುವರಾಯಸ್ವಾಮಿ – ನಾಗಮಂಗಲ – ಒಕ್ಕಲಿಗ
* ಕೃಷ್ಣ ಬೈರೇಗೌಡ – ಬ್ಯಾಟರಾಯನಪುರ – ಒಕ್ಕಲಿಗ


* ವೆಂಕಟೇಶ್ – ಪಿರಿಯಾಪಟ್ಟಣ – ಒಕ್ಕಲಿಗ
* ಎಂ ಸಿ ಸುಧಾಕರ್ – ಚಿಂತಾಮಣಿ – ಒಕ್ಕಲಿಗ
* ಶಿವಲಿಂಗೇಗೌಡ – ಅರಸೀಕೆರೆ – ಒಕ್ಕಲಿಗ
* ಬೈರತಿ ಸುರೇಶ್ – ಹೆಬ್ಬಾಳ – ಕುರುಬ
* ನರೇಂದ್ರ ಸ್ವಾಮಿ – ಮಳವಳ್ಳಿ – ಎಸ್‍ಸಿ
* ರಹೀಂ ಖಾನ್ – ಬೀದರ್ ಉತ್ತರ – ಮುಸ್ಲಿಂ
* ಪುಟ್ಟರಂಗ ಶೆಟ್ಟಿ – ಚಾಮರಾಜನಗರ – ಉಪ್ಪಾರ
* ಮಧು ಬಂಗಾರಪ್ಪ – ಸೊರಬ – ಈಡಿಗ
* ಸುಧಾಕರ್ – ಹಿರಿಯೂರು – ಜೈನ್
* ಮಂಕಾಳ ವೈದ್ಯ – ಭಟ್ಕಳ – ಮೊಗೆರಾ

Share This Article