ಒಳಮೀಸಲಾತಿ ಮಧ್ಯಂತರ ವರದಿ ಸಲ್ಲಿಕೆ – ನ್ಯಾ.ನಾಗಮೋಹನ್ ದಾಸ್ ಆಯೋಗ ಮುಂದುವರಿಸಲು ಕ್ಯಾಬಿನೆಟ್ ತೀರ್ಮಾನ

Public TV
1 Min Read

ಬೆಂಗಳೂರು: ಒಳಮೀಸಲಾತಿ ವರ್ಗೀಕರಣಕ್ಕೆ ಸಂಬಂಧಿಸಿದಂತೆ ನಾಗಮೋಹನ್ ದಾಸ್ (Nagamohan Das) ಅವರ ಏಕಸದಸ್ಯ ಆಯೋಗ ನೇಮಕ ಮಾಡಲಾಗಿತ್ತು. ಒಳಮೀಸಲಾತಿ ವರ್ಗೀಕರಣ ವಿಚಾರದಲ್ಲಿ ಮಧ್ಯಂತರ ವರದಿ ನೀಡಿದ್ದಾರೆ ಎಂದು ಸಚಿವ ಹೆಚ್.ಕೆ.ಪಾಟೀಲ್ (H K Patil) ಹೇಳಿದರು.

ಸಂಪುಟ ಸಭೆ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಧ್ಯಂತರ ವರದಿಯಲ್ಲಿ 4 ಶಿಫಾರಸು ಮಾಡಿದ್ದಾರೆ. ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿಯಲ್ಲಿರುವ ಉಪಜಾತಿಗಳ ವೈಜ್ಞಾನಿಕ ವರ್ಗೀಕರಣವನ್ನು ಹೊಸದಾದ ಸಮೀಕ್ಷೆ ನಡೆಸಿ ದತ್ತಾಂಶವನ್ನು ಸಂಗ್ರಹಿಸಬೇಕು. ನೂತನ ವಿಜ್ಞಾನ ತಂತ್ರಜ್ಞಾನದ ಸಾಧನೆಗಳನ್ನು ಬಳಸಿ 30 ರಿಂದ 40 ದಿವಸಗಳ ಒಳಗೆ ಹೊಸದಾದ ಸಮೀಕ್ಷೆಯನ್ನು ನಡೆಸಬಹುದು. ಹೊಸ ಸಮೀಕ್ಷೆ ನಡೆಸಲು ಅಗತ್ಯವಿರುವ ಪ್ರಶ್ನಾವಳಿ ಸಿದ್ಧಪಡಿಸಬೇಕು. ಇದಕ್ಕೆ ಉನ್ನತ ಮಟ್ಟದ ಸಮಿತಿ ರಚನೆ ಸೂಕ್ತ ಎಂದರು. ಇದನ್ನೂ ಓದಿ: ನಂದಿನಿ ಹಾಲಿನ ದರ 4 ರೂ. ಹೆಚ್ಚಳ – ರೈತರಿಗೆ ಪೂರ್ಣ ಹಣ ವರ್ಗಾವಣೆಗೆ ಕ್ಯಾಬಿನೆಟ್ ತೀರ್ಮಾನ

ಹೊಸ ಸಮೀಕ್ಷೆಯ ದತ್ತಾಂಶದ ಆಧಾರದ ಮೇಲೆ ಆದ್ಯತೆಯ ಮೇರೆಗೆ ಹಂಚಿಕೆ ಮಾಡಬೇಕು ಅಂತಾ ಶಿಫಾರಸು ಮಾಡಿದ್ದಾರೆ. ಅಲ್ಲದೇ ನಾಗಮೋಹನ್ ದಾಸ್ ಸಮಿತಿಯನ್ನೇ ಮುಂದುವರಿಸಲು ಕ್ಯಾಬಿನೆಟ್ ತೀರ್ಮಾನ ಮಾಡಿದ್ದು, 60 ದಿವಸಗಳ ಒಳಗೆ ಈ ಕಾರ್ಯವನ್ನು ಪೂರ್ಣಗೊಳಿಸಲು ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ನನ್ನ ಹತ್ಯೆಗೆ ಸುಪಾರಿ – ಹೊಸ ಬಾಂಬ್‌ ಸಿಡಿಸಿದ ಸಚಿವ ರಾಜಣ್ಣ ಪುತ್ರ

ಆಯೋಗ 60 ದಿನದೊಳಗೆ ಸಮೀಕ್ಷೆ ಮಾಡುತ್ತೇವೆ ಅಂದಿದ್ದಾರೆ. ನಾವು ಅದಕ್ಕೆ ಅನುಮತಿ ಕೊಟ್ಟಿದ್ದೇವೆ. ಜನಗಣತಿಯಲ್ಲಿ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಎಂದು ಇದೆ. ಆದರೆ ಇದರಲ್ಲಿ ಇರುವ ಗೊಂದಲ ಬಗೆಹರಿಸುವ ಉದ್ದೇಶ ಇದೆ ಎಂದು ಹೇಳಿದರು. ಇದನ್ನೂ ಓದಿ: ಯತ್ನಾಳ್ ಉಚ್ಚಾಟನೆ ಮಾಡಿ ಭ್ರಷ್ಟಾಚಾರ, ಕುಟುಂಬ ರಾಜಕೀಯಕ್ಕೆ ನಮ್ಮ ಬೆಂಬಲ ಅಂತ ಬಿಜೆಪಿ ಒಪ್ಪಿಕೊಂಡಿದೆ: ಪ್ರಿಯಾಂಕ್ ಖರ್ಗೆ

Share This Article