ಉಜ್ವಲ ಫಲಾನುಭವಿಗಳಿಗೆ ಗುಡ್‌ ನ್ಯೂಸ್‌ – ಸಿಲಿಂಡರ್‌ ಸಬ್ಸಿಡಿಗೆ 12,060 ಕೋಟಿ ನೀಡಲು ಅನುಮೋದನೆ

Public TV
1 Min Read

– ಸಿಲಿಂಡರ್‌ಗೆ ಸಬ್ಸಿಡಿ 300 ರೂ.

ನವದೆಹಲಿ: ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ (Ujjwala Yojana) 12,060 ಕೋಟಿ ರೂ. ಮೌಲ್ಯದ ಸಿಲಿಂಡರ್ ಸಬ್ಸಿಡಿಗೆ ಸಂಪುಟ ಅನುಮೋದನೆ ನೀಡಿದೆ.

ಕೇಂದ್ರ ಸಚಿವ ಸಂಪುಟವು 2026 ರ ಆರ್ಥಿಕ ವರ್ಷದಲ್ಲಿ ಪ್ರಧಾನಮಂತ್ರಿ ಉಜ್ವಲ ಯೋಜನಾ ಫಲಾನುಭವಿಗಳಿಗೆ 12,060 ಕೋಟಿ ರೂ.ಗಳ ಅನುದಾನವನ್ನು ಅನುಮೋದಿಸಿದೆ.

ಶುಕ್ರವಾರ ಬಿಡುಗಡೆಯಾದ ಅಧಿಕೃತ ಪ್ರಕಟಣೆಯ ಪ್ರಕಾರ, ವರ್ಷಕ್ಕೆ ಒಂಬತ್ತು ರೀಫಿಲ್ಸ್‌ (ಮತ್ತು 5 ಕೆಜಿ ಸಿಲಿಂಡರ್‌ಗೆ ಅನುಗುಣವಾಗಿ ಅನುಪಾತದಲ್ಲಿ) 14.2 ಕೆಜಿ ಸಿಲಿಂಡರ್‌ಗೆ 300 ರೂ. ನಷ್ಟು ಸಬ್ಸಿಡಿ ನೀಡುವ ಗುರಿಯನ್ನು ಹೊಂದಿದೆ.

ದೇಶಾದ್ಯಂತ ಬಡ ಕುಟುಂಬಗಳ ವಯಸ್ಕ ಮಹಿಳೆಯರಿಗೆ ಠೇವಣಿ ರಹಿತ ಎಲ್‌ಪಿಜಿ ಸಂಪರ್ಕವನ್ನು ಒದಗಿಸಲು ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು 2016ರ ಮೇ ತಿಂಗಳಲ್ಲಿ ಪ್ರಾರಂಭಿಸಲಾಯಿತು.

Share This Article