ಕೇಂದ್ರ ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌ – ಶೇ.3 ರಷ್ಟು ತುಟ್ಟಿಭತ್ಯೆ ಹೆಚ್ಚಳಕ್ಕೆ ಕ್ಯಾಬಿನೆಟ್‌ ಅನುಮೋದನೆ

Public TV
1 Min Read

ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌ ಸಿಕ್ಕಿದೆ. ಶೇ.3 ರಷ್ಟು ತುಟ್ಟಿಭತ್ಯೆ (ಡಿಎ) ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.

ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು, ಪ್ರಧಾನಿ ಮೋದಿ ನೇತೃತ್ವದ ಸಮಿತಿಯ ಪ್ರಮುಖ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ.

ಮಾರ್ಚ್‌ನಲ್ಲಿ ತುಟ್ಟಿಭತ್ಯೆಯನ್ನು 4% ಹೆಚ್ಚಳ ಮಾಡಲಾಗಿತ್ತು. ಅದರಿಂದ ಕೇಂದ್ರ ಸರ್ಕಾರಿ ನೌಕರರು ತಮ್ಮ ಮೂಲ ವೇತನದ 50% ರಷ್ಟು DAಗೆ ಅರ್ಹರಾಗಿದ್ದರು. ಆದರೆ ಪಿಂಚಣಿದಾರರು ತಮ್ಮ ಮೂಲ ಪಿಂಚಣಿಯ 50% ನ DR ಅನ್ನು ಪಡೆಯುತ್ತಾರೆ.

ಕೇಂದ್ರ ಸರ್ಕಾರವು ವರ್ಷಕ್ಕೆ ಎರಡು ಬಾರಿ ಡಿಎಯನ್ನು ಪರಿಷ್ಕರಿಸುತ್ತದೆ. ಜನವರಿ ಮತ್ತು ಜುಲೈ ತಿಂಗಳ ನಂತರದಲ್ಲಿ ಅಧಿಕೃತ ಪ್ರಕಟಣೆಗಳನ್ನು ಮಾಡಲಾಗುತ್ತದೆ. ಕೇಂದ್ರ ಸರ್ಕಾರದಲ್ಲಿ ಸೇವೆ ಸಲ್ಲಿಸುತ್ತಿರುವ ಉದ್ಯೋಗಿಗಳಿಗೆ ಡಿಎ ಅನ್ವಯಿಸುತ್ತದೆ. ಪಿಂಚಣಿದಾರರು ಡಿಆರ್ ಸ್ವೀಕರಿಸುತ್ತಾರೆ.

Share This Article