ಬಡ್ತಿ ಮೀಸಲಾತಿಗೆ ಸಂಪುಟ ಸಮ್ಮತಿ – ಮಹತ್ವದ ನಿರ್ಣಯಗಳಿಗೆ ಸಂಪುಟ ಒಪ್ಪಿಗೆ

Public TV
1 Min Read

ಬೆಂಗಳೂರು: ಬಡ್ತಿ ಮೀಸಲಾತಿ ತಿದ್ದುಪಡಿ ವಿಧೇಯಕ ಜಾರಿಗೆ ಸಿಎಂ ಹೆಚ್‍ಡಿ ಕುಮಾರಸ್ವಾಮಿ ಸಹಮತ ವ್ಯಕ್ತಪಡಿಸಿದ್ದಾರೆ. ಸೋಮವಾರ ಸಂಜೆ ವಿಧಾನಸೌಧದಲ್ಲಿ ಆರಂಭವಾದ ಕ್ಯಾಬಿನೆಟ್ ಸಭೆ 3 ಗಂಟೆಗೂ ಹೆಚ್ಚು ಕಾಲ ನಡೆಯಿತು. 60 ವಿಷಯಗಳಿಗೆ ಮತ್ತೆ 40 ಹೊಸ ವಿಷಯ ಅಜೆಂಡಕ್ಕೆ ಸೇರ್ಪಡೆಯಾಯ್ತು.

ಸದನದಲ್ಲಿ ಅಂಗೀಕಾರಗೊಂಡ ಬಡ್ತಿ ಮೀಸಲಾತಿ ತಿದ್ದುಪಡಿ ವಿಧೇಯಕಕ್ಕೆ ತಕ್ಕಂತೆ ಮಾರ್ಗಸೂಚಿ ಮಾಡಲು ಸಂಪುಟ ಒಪ್ಪಿಗೆ ನೀಡಿದೆ. ಕೆಲ ತಿದ್ದುಪಡಿಗಳೊಂದಿಗೆ ಬಡ್ತಿ ಮೀಸಲಾತಿ ವಿಧೇಯಕ ಅಂಗೀಕಾರವಾಗಿತ್ತು. ವಿಧೇಯಕ ಅಂಗೀಕಾರವಾಗಿದ್ದರೂ, ಜಾರಿಗೆ ಸಿಎಂ ಮುಂದಾಗಿರಲಿಲ್ಲ. ಸಂಪುಟ ಸಭೆಯಲ್ಲಿ ವಿಧೇಯಕ ಕುರಿತು ಸುದೀರ್ಘ ಚರ್ಚೆ ನಡೆಯಿತು.

ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ವಿಧೇಯಕ ಜಾರಿಗೆ ದಲಿತ ಸಚಿವರ ಒತ್ತಾಯ ಮಾಡಿದರು. ಸಚಿವರ ಆಗ್ರಹಕ್ಕೆ ಮಣಿದ ಸಿಎಂ ಕುಮಾರಸ್ವಾಮಿ, ವಿಧಾನಸಭೆ ಅಂಗೀಕಾರ ಮಾಡಿದ ವಿಧೇಯಕಕ್ಕೆ ತಕ್ಕಂತೆ ಪರಿಶಿಷ್ಟ ಜಾತಿಯ ನೌಕರರಿಗೆ ಆದ ಹಿನ್ನಡೆ ಸರಿಪಡಿಸಲು ತೀರ್ಮಾನ ಮಾಡಲಾಯ್ತು. ಇದಲ್ಲದೆ ಕೆಲವು ಮಹತ್ವದ ನಿರ್ಣಯಗಳಿಗೆ ಸಂಪುಟ ಒಪ್ಪಿಗೆ ನೀಡಿದೆ.

ಕ್ಯಾಬಿನೆಟ್ ಹೈಲೈಟ್ಸ್:
* 1 ರಿಂದ 10 ನೇ ತರಗತಿ ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ವಿತರಣೆ
* 126 ಕೋಟಿ ವೆಚ್ಚದಲ್ಲಿ 44.57 ಲಕ್ಷ ವಿದ್ಯಾರ್ಥಿಗಳಿಗೆ ವಿತರಣೆ
* ನೆಲಮಂಗಲ ಪುರಸಭೆ ನಗರಸಭೆಯಾಗಿ ಮೇಲ್ದರ್ಜೆಗೆ ಏರಿಸಲು ಒಪ್ಪಿಗೆ
* ಭದ್ರಾವತಿಯಲ್ಲಿ ಹೊಸ ಸಿಆರ್ ಪಿಎಫ್ ಬೆಟಾಲಿಯನ್ ಸ್ಥಾಪನೆಗೆ 50 ಎಕರೆ ಜಮೀನು
* ಅರಸೀಕೆರೆ ಕೋರ್ಟ್ ಕಟ್ಟಡಕ್ಕೆ 13 ಕೋಟಿ ಅನುದಾನ
* ಬಳ್ಳಾರಿಯಲ್ಲಿ 15 ಕೋಟಿ ವೆಚ್ಚದಲ್ಲಿ ಸರ್ಕಾರಿ ನೌಕರರಿಗೆ ವಸತಿ ಕಟ್ಟಡ
* ಕರ್ನಾಟಕ ಆಯುಷ್ ನೇಮಕಾತಿ ತಿದ್ದುಪಡಿಗೆ ಒಪ್ಪಿಗೆ
* ನೂತನ ಪ್ರವಾಸೋದ್ಯಮ ನೀತಿಗೆ ಸಂಪುಟ ನಿರ್ಧಾರ

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *