ಬೆಂಗಳೂರಿಗೆ ಗುಡ್‌ನ್ಯೂಸ್ – ಸಿಲಿಕಾನ್ ಸಿಟಿಗೆ ಬರಲಿದೆ 6ನೇ ಹಂತದ ಕಾವೇರಿ ನೀರು

1 Min Read

– ರೋಹಿತ್ ವೇಮುಲ ವಿಧೇಯಕಕ್ಕೆ ಸಂಪುಟ ಒಪ್ಪಿಗೆ

ಬೆಂಗಳೂರು: ಸಚಿವ ಸಂಪುಟ ಸಭೆಯಲ್ಲಿ ಬೆಂಗಳೂರಿಗೆ ಗುಡ್‌ನ್ಯೂಸ್ ಸಿಕ್ಕಿದೆ. ಸಿಲಿಕಾನ್ ಸಿಟಿಗೆ 6ನೇ ಹಂತದಲ್ಲಿ ಕಾವೇರಿ ನೀರು ಬರಲಿದ್ದು, ಯೋಜನೆ ಜಾರಿಗೆ ಸಿದ್ಧಪಡಿಸಿರುವ ಡಿಪಿಆರ್‌ಗೆ ಸಂಪುಟ ಅನುಮೋದನೆ ನೀಡಿದೆ.

5ನೇ ಹಂತದ ಮೂಲಕ ನಗರಕ್ಕೆ ಒಟ್ಟು 2,225 ಎಂಎಲ್‌ಡಿ ನೀರು ಪೂರೈಕೆ ಆಗಲಿದೆ. ಸುಮಾರು 1.50 ಕೋಟಿ ಜನರಿಗೆ ಕಾವೇರಿ ನೀರು ಸರಬರಾಜು ಮಾಡಬಹುದು.

ಸಚಿವ ಸಂಪುಟ ಸಭೆಯಲ್ಲಿ ಮತ್ತೆರಡು ಮಹತ್ವದ ವಿಧೇಯಕಗಳ ಬಗ್ಗೆ ಗಂಭೀರ ಚರ್ಚೆ ನಡೆದಿದೆ. ವಿವಿಗಳಲ್ಲಿ ದಲಿತ ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯ ತಡೆಗೆ ಹೊಸ ವಿಧೇಯಕಕ್ಕೆ ಸಂಪುಟ ಒಪ್ಪಿದೆ. ರೋಹಿತ್ ವೇಮುಲ ವಿಧೇಯಕಕ್ಕೆ ಒಪ್ಪಿಗೆ ನೀಡಿದೆ.

ಮರ್ಯಾದಾ ಹತ್ಯೆ ತಡೆ ಬಿಲ್ ಚರ್ಚೆ ಮುಂದಿನ ಸಂಪುಟ ಸಭೆಗೆ ಮುಂದೂಡಿಕೆಯಾಗಿದೆ. ಗೃಹ ಇಲಾಖೆಯಿಂದ ಮರ್ಯದಾ ಹತ್ಯೆ ತಡೆ ಬಿಲ್ ಬಗ್ಗೆ ಪರಿಶೀಲಿಸಲು ತೀರ್ಮಾನ ಕೈಗೊಳ್ಳಲಾಗಿದೆ.

Share This Article