ಪೌರತ್ವ ಕಾಯ್ದೆ ವಿಚಾರದಲ್ಲಿ ಮೋದಿ, ಶಾ ಮನ ಪರಿವರ್ತನೆಯಾಗಬಹುದು- ಸಿಎಂ ಇಬ್ರಾಹಿಂ

Public TV
1 Min Read

ದಾವಣಗೆರೆ: ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಮನಪರಿರ್ತನೆ ಆಗಬಹುದು ಎಂದು ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಆಶಾಭಾವ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಚನ್ನಗಿರಿ ತಾಲೂಕಿನ ಪಾಂಡೋಮಟ್ಟಿಯಲ್ಲಿ ಮಾತನಾಡಿದ ಅವರು, ಬಸವ ತತ್ವ ಆಧಾರದಲ್ಲೇ ಅಂಬೇಡ್ಕರ್ ಸಂವಿಧಾನ ಇದೆ. ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ತಮ್ಮ ನಿರ್ಧಾರ ಹಿಂಪಡೆಯುತ್ತಾರೆ ಎಂಬ ವಿಶ್ವಾಸ ಇದೆ. ಈ ಕುರಿತು ಸ್ವಾಮೀಜಿಗಳು, ನಾಗರೀಕರನ್ನು ಒಂದೆಡೆ ಸೇರಿಸಿ ಸರ್ವಧರ್ಮ ಸಮ್ಮೇಳನ ಮಾಡಿ ಚರ್ಚೆ ನಡೆಸಿ, ಮೋದಿ, ಅಮಿತ್ ಶಾ ಅವರಿಗೆ ಪ್ರಾರ್ಥನೆ ಮಾಡಲಿದ್ದೇವೆ. ಅವರು ಪರಿವರ್ತನೆಯಾಗಬಹುದು ಎಂಬ ವಿಶ್ವಾಸ ಇದೆ ಎಂದರು.

ಹೊರಗಿನಿಂದ ಬಂದವರ ಮಾಹಿತಿಯನ್ನು ಗ್ರಾಮ ಪಂಚಾಯಿತಿ, ಪೊಲೀಸ್ ಇಲಾಖೆಯಲ್ಲಿ ಪಡೆಯಬಹುದು. ಆದರೆ ಇಲ್ಲೇ ಇದ್ದವರನ್ನು ಕೇಳುವುದು ಸರಿಯಲ್ಲ. ಅಲ್ಲದೆ ರಾಜ್ಯದಲ್ಲಿ ಈ ಸಮಸ್ಯೆ ಬರುವುದಿಲ್ಲ, ಇಲ್ಲಿ ಯಾರು ನುಸುಳುಕೋರರು ಇಲ್ಲ. ಈ ಬಗ್ಗೆ ಯೋಚನೆ ಬಿಟ್ಟು, ಅಡ್ವಾನಿ, ಯಶವಂತ ಸಿನ್ಹಾ, ಮನಮೋಹನ್ ಸಿಂಗ್ ಅವರಂತಹವರ ಬಳಿ ಸಲಹೆ ಪಡೆದು ಸರಿಯಾದ ರೀತಿಯಲ್ಲಿ ಆರ್ಥಿಕತೆ ನಡೆಸಿಕೊಂಡು ಹೋಗಿ ಎಂದು ತಿರುಗೇಟು ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *