ಕಾಂಗ್ರೆಸ್ ಭವನಕ್ಕಾಗಿ ಮೂರ್ಕಾಸಿಗೆ ಸಿಎ ಸೈಟ್ – ದೇವನಹಳ್ಳಿಯಲ್ಲಿ ಕೋಟಿ ಭೂಮಿ ಲಕ್ಷಕ್ಕೆ ಹಸ್ತಾಂತರ

3 Min Read

– ಬಿಜೆಪಿಗರೂ ಕೊಟ್ಟಿರಲಿಲ್ವಾ ಅಂತ ಪರಮೇಶ್ವರ್ ಪ್ರಶ್ನೆ

ಬೆಂಗಳೂರು: ರಾಜ್ಯದಲ್ಲಿ ಸರ್ಕಾರದ ಜಾಗ ಕಾಂಗ್ರೆಸ್ ಪಕ್ಷದ ಪಾಲಾಗ್ತಿದೆ. ನಗರಾಭಿವೃದ್ಧಿ ಪ್ರಾಧಿಕಾರಿಗಳು ಬಡಾವಣೆಗಳಲ್ಲಿ ಸಾರ್ವಜನಿಕ ಸೌಕರ್ಯಗಳಿಗೆಂದು ಮೀಸಲಿಡುವ ಕೋಟಿ ಕೋಟಿ ಬೆಲೆ ಬಾಳೋ ಸಿಎ ಸೈಟ್ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಸರ್ಕಾರ ಹಂಚಿಕೆ ಮಾಡ್ತಿದೆ.

ಹೌದು. ಪ್ರತಿ ತಾಲೂಕಿನಲ್ಲಿ ಕಾಂಗ್ರೆಸ್ ಭವನಕ್ಕೆ ಮುಂದಾಗಿರೋ ಕೆಪಿಸಿಸಿಗೆ ಈ ಜಾಗವನ್ನ ಪೌರಾಡಳಿತ ಇಲಾಖೆ ಕೊಟ್ಟಿದೆ. ವಿಧಾನ ಪರಿಷತ್ ನಲ್ಲಿ ಬಿಜೆಪಿ ಸದಸ್ಯ ಚಿದಾನಂದಗೌಡ ಪ್ರಶ್ನೆಗೆ ಈ ಬಗ್ಗೆ ಪೌರಾಡಳಿತ ಇಲಾಖೆ ಸಚಿವ ರಹೀಂ ಖಾನ್ ಲಿಖಿತ ಉತ್ತರ ಕೊಟ್ಟಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ ಇಟಲಿ ರಾಯಭಾರಿ ಕಚೇರಿಗೆ ಬಾಂಬ್ ಬೆದರಿಕೆ

ಇನ್ನೂ 13 ಜಿಲ್ಲೆಗಳಲ್ಲಿ ಪುರಸಭೆ, ನಗರ ಸಭೆಗಳ ಜಾಗವನ್ನ ಕಾಂಗ್ರೆಸ್ ಭವನ ಕಟ್ಟಲು ಕೊಟ್ಟಿರೋ ಪೌರಾಡಳಿತ ಇಲಾಖೆ ಕೊಟ್ಟಿದೆ. ಕಾನೂನು ಇಲಾಖೆ ವಿರೋಧದ ನಡುವೆಯೂ ಕಾಂಗ್ರೆಸ್ ಭವನಕ್ಕೆ ಜಾಗ ಕೊಟ್ಟಿರೋ ಬಗ್ಗೆಯೂ ಆರೋಪ ಇದೆ. ಸರ್ಕಾರದ ಕ್ರಮವನ್ನ ಗೃಹ ಸಚಿವ ಪರಮೇಶ್ವರ್ ಸಮರ್ಥಿಸಿಕೊಂಡಿದ್ದಾರೆ. ಕಾಂಗ್ರೆಸ್ ಭವನಕ್ಕೆ ರಿಯಾಯ್ತಿ ದರದಲ್ಲಿ ನೀಡಿರೋ ನಿವೇಶನಗಳ ಎಕ್ಸ್‌ಕ್ಲೂಸಿವ್‌ ದಾಖಲೆ ʻಪಬ್ಲಿಕ್‌ ಟಿವಿʼಗೆ ಸಿಕ್ಕಿದೆ. ಇದನ್ನೂ ಓದಿ: ಕೆ.ಆರ್. ನಗರ ಮಹಿಳೆಯ ಅಪಹರಣ ಕೇಸ್‌ – ಹೆಚ್‌.ಡಿ.ರೇವಣ್ಣಗೆ ಹೈಕೋರ್ಟ್‌ ಬಿಗ್‌ ಶಾಕ್‌

ಕಾಂಗ್ರೆಸ್ ಭವನಕ್ಕೆ ಸರ್ಕಾರಿ ಜಮೀನು – ಎಲ್ಲೆಲ್ಲಿ, ಎಷ್ಟು ದರಕ್ಕೆ ಸೈಟು ಹಂಚಿಕೆ?

ಬೆಂಗಳೂರು ಗ್ರಾ. ಜಿಲ್ಲೆ: ದೇವನಹಳ್ಳಿ ಪುರಸಭೆ ಜಾಗ
ಮಾರುಕಟ್ಟೆ ಮೌಲ್ಯ : 17,31,01,841 ರೂ.
ರಿಯಾಯಿತಿ ದರ : 86,55,092 ರೂ.

ಬೆಂಗಳೂರು ದಕ್ಷಿಣ ಜಿಲ್ಲೆ: ಮಾಗಡಿ ಪುರಸಭೆ ಜಾಗ
ಮಾರುಕಟ್ಟೆ ಮೌಲ್ಯ : 40,98,513 ರೂ.
ರಿಯಾಯಿತಿ ದರ : 2,04,925 ರೂ.

ಚಿಕ್ಕಬಳ್ಳಾಪುರ ಜಿಲ್ಲೆ : ಗೌರಿಬಿದನೂರು ನಗರಸಭೆ ಜಾಗ
ಮಾರುಕಟ್ಟೆ ಮೌಲ್ಯ : 1,08,98,280 ರೂ.
ರಿಯಾಯಿತಿ ದರ : 5,44,914 ರೂ.

ಕಲಬುರಗಿ ಜಿಲ್ಲೆ : ಅಫಜಲಪುರ ಪುರಸಭೆ ಜಾಗ
ಮಾರುಕಟ್ಟೆ ಮೌಲ್ಯ : 50,42,700 ರೂ.
ರಿಯಾಯಿತಿ ದರ : 2,52,135 ರೂ.

ಕಲಬುರಗಿ ಜಿಲ್ಲೆ : ಚಿಂಚೋಳಿ ಪುರಸಭೆ ಜಾಗ
ಮಾರುಕಟ್ಟೆ ಮೌಲ್ಯ : 28,24,900 ರೂ.
ರಿಯಾಯಿತಿ ದರ : 1,41,245 ರೂ.

ಕಲಬುರಗಿ ಜಿಲ್ಲೆ : ಕಾಳಗಿ ಪಟ್ಟಣ ಪಂಚಾಯತಿ ಜಾಗ
ಮಾರುಕಟ್ಟೆ ಮೌಲ್ಯ : 15,37,300 ರೂ.
ರಿಯಾಯಿತಿ ದರ : 76,865 ರೂ.

ಬಾಗಲಕೋಟೆ ಜಿಲ್ಲೆ : ಲೋಕಾಪುರ ಪಟ್ಟಣ ಪಂಚಾಯ್ತಿ ಜಾಗ
ಮಾರುಕಟ್ಟೆ ಮೌಲ್ಯ : 21,03,255 ರೂ.
ರಿಯಾಯಿತಿ ದರ : 1,05,162 ರೂ.

ಧಾರವಾಡ ಜಿಲ್ಲೆ : ನವಲಗುಂದ ಪುರಸಭೆ ಜಾಗ
ಮಾರುಕಟ್ಟೆ ಮೌಲ್ಯ : 38,60,310 ರೂ.
ರಿಯಾಯಿತಿ ದರ : 1,93,015 ರೂ.

ಧಾರವಾಡ ಜಿಲ್ಲೆ : ಅಣ್ಣೀಗೆರೆ ಪುರಸಭೆ ಜಾಗ
ಮಾರುಕಟ್ಟೆ ಮೌಲ್ಯ : 31,70,750 ರೂ.
ರಿಯಾಯಿತಿ ದರ : 1,58,537 ರೂ.

ಶಿವಮೊಗ್ಗ ಜಿಲ್ಲೆ : ಶಿಕಾರಿಪುರ ಪುರಸಭೆ ಜಾಗ
ಮಾರುಕಟ್ಟೆ ಮೌಲ್ಯ : 11,50,000 ರೂ.
ರಿಯಾಯಿತಿ ದರ : 57,500 ರೂ.

ಶಿವಮೊಗ್ಗ ಜಿಲ್ಲೆ : ಆನವಟ್ಟಿ ಪಟ್ಟಣ ಪಂಚಾಯತಿ ಜಾಗ
ಮಾರುಕಟ್ಟೆ ಮೌಲ್ಯ : 21,45,715 ರೂ.
ರಿಯಾಯಿತಿ ದರ : 1,07,285 ರೂ.

ಚಿತ್ರದುರ್ಗ ಜಿಲ್ಲೆ : ಹೊಳಲ್ಕೆರೆ ಪುರಸಭೆ ಜಾಗ
ಮಾರುಕಟ್ಟೆ ಮೌಲ್ಯ : 32,77,154 ರೂ.
ರಿಯಾಯಿತಿ ದರ : 1,63,857 ರೂ.

ಉತ್ತರ ಕನ್ನಡ ಜಿಲ್ಲೆ : ಹಳಿಯಾಳ ಪುರಸಭೆ ಜಾಗ
ಮಾರುಕಟ್ಟೆ ಮೌಲ್ಯ : 17,32,500 ರೂ.
ರಿಯಾಯಿತಿ ದರ : 86,625 ರೂ.

ರಾಯಚೂರು ಜಿಲ್ಲೆ : ಮಾನ್ವಿ ಪುರಸಭೆ ಜಾಗ
ಮಾರುಕಟ್ಟೆ ಮೌಲ್ಯ : 16,05,900 ರೂ.
ರಿಯಾಯಿತಿ ದರ : 80,295 ರೂ.

ಯಾದಗಿರಿ ಜಿಲ್ಲೆ : ಶಹಾಪುರ ನಗರ ಸಭೆ ಜಾಗ
ಮಾರುಕಟ್ಟೆ ಮೌಲ್ಯ : 95,82,020 ರೂ.
ರಿಯಾಯಿತಿ ದರ : 4,79,101 ರೂ.

Share This Article