ಮಂಗಳೂರು: ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟ್ಸ್ ಆಫ್ ಇಂಡಿಯಾದ ಅಖಿಲ ಭಾರತ ಮಟ್ಟದ ಚಾರ್ಟರ್ಡ್ ಅಕೌಂಟ್ಸ್ (ಸಿಎ) ಪರೀಕ್ಷೆ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಮಂಗಳೂರಿನ ಯುವತಿ ರುಥ್ ಕ್ಲೆರ್ ಡಿಸಿಲ್ವ ಅವರು ದೇಶಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
ರೋಸಿ ಮರಿಯ ಡಿಸಿಲ್ವ ಮತ್ತು ರಫೆರ್ಟ್ ಡಿಸಿಲ್ವ ಅವರ ಪುತ್ರಿಯಾಗಿರುವ ರುಥ್ ಕ್ಲೆರ್, ಸಿಎ ಪರೀಕ್ಷೆಯಲ್ಲಿ ದೇಶದಲ್ಲಿ ಅಗ್ರಸ್ಥಾನ ಪಡೆದ ಕರಾವಳಿಯ ಮೊದಲ ವಿದ್ಯಾರ್ಥಿ ಎನ್ನುವ ಹೆಗ್ಗಳಿಕೆಗೂ ಸಹ ಪಾತ್ರರಾಗಿದ್ದಾರೆ. ಇದನ್ನೂ ಓದಿ: ಬೈಕ್‍ಗಳಲ್ಲಿ ಐಫೋನ್ ಬಳಸಬೇಡಿ – ಗ್ರಾಹಕರಿಗೆ ಆಪಲ್ ಎಚ್ಚರಿಕೆ
ಕ್ಲೆರ ನಗರದ ಸಂತ ತೆರೆಸಾ ಸ್ಕೂಲ್‍ನಲ್ಲಿ ಶಿಕ್ಷಣ ಪಡೆದ ಬಳಿಕ ಮಂಗಳೂರು ವಿಶ್ವವಿದ್ಯಾಲಯದಲ್ಲಿ ದೂರ ಶಿಕ್ಷಣ ಮೂಲಕ ಪದವಿ ಪೂರ್ಣಗೊಳಿಸಿದ್ದರು. ನಗರದ ಬಲ್ಮಠದ ಸಿಎ ವಿವಿಯನ್ ಪಿಂಟೋ ಕಂಪೆನಿಯಲ್ಲಿ ಆರ್ಟಿಕಲ್‍ಶಿಪ್ ಪೂರೈಸಿದ್ದರು. ಇದನ್ನೂ ಓದಿ: ಬೆಂಗಳೂರಿನ ಹೋಟೆಲ್‍ನಲ್ಲಿ ಅಗ್ನಿ ಅವಘಡ – 7 ಜನ ಪಾರು, ತಪ್ಪಿತು ಭಾರೀ ಅನಾಹುತ
ತನ್ನ ಸಾಧನೆ ಬಗ್ಗೆ ಆಭಿಪ್ರಾಯ ವ್ಯಕ್ತಪಡಿಸುರುವ ರುಥ್ ಕ್ಲೆರ್, ಪರೀಕ್ಷೆ ತುಂಬಾ ಕಠಿಣವಾಗಿತ್ತು. ಅತ್ಯುತ್ತಮ ರೀತಿಯಲ್ಲಿ ಬರೆದಿದ್ದೆ. ಆದರೆ ಪ್ರಥಮ ಸ್ಥಾನದ ನಿರೀಕ್ಷೆ ಮಾಡಿರಲಿಲ್ಲ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ರುಥ್ ಬಗ್ಗೆ ಪ್ರತಿಕ್ರಿಸಿರುವ ಸಿಎ ವಿವಿಯನ್, ಕ್ಲೆರ್ ತುಂಬಾ ಬುದ್ಧಿವಂತೆ. ತರಬೇತಿ ಅವಧಿಯಲ್ಲಿ ಆಕೆ ಸವಾಲಿನ ಕೆಲಸಗಳನ್ನು ಕೌಶಲ್ಯದಿಂದ ನಿಭಾಯಿಸುತ್ತಿದ್ದರು. ಇದನ್ನು ನಾನು ಗಮನಿಸಿದ್ದೇನೆ. ಆಕೆಯ ಸಾಧನೆಯ ಬಗ್ಗೆ ನಾವು ಕೂಡ ಪ್ರಭಾವಿತವಾಗಿದ್ದೆವೆ ಎಂದು ಹೇಳಿದ್ದಾರೆ. ರುಥ್ ಕ್ಲೆರ್ ಐಸಿಎಐ ಫಲಿತಾಂಶದಲ್ಲಿ ಒಟ್ಟು 800ಕ್ಕೆ 472 ಅಂಕಗಳಿಸಿದ್ದಾರೆ.