ಲವರ್ಸ್ ಡೇ ದಿನವೇ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ: ಸಿಎಂ ಇಬ್ರಾಹಿಂ

Public TV
2 Min Read

– ದೇವೇಗೌಡರನ್ನು ಹಾಡಿ ಹೋಗಳಿದ ಇಬ್ರಾಹಿಂ
-ಫೆ. 14 ರಿಂದ ನನ್ನ ಯಾತ್ರೆ ಶುರುವಾಗಲಿದೆ

ಮೈಸೂರು: ಫೆಬ್ರವರಿ 14 ಲವರ್ಸ್ ಡೇ, ಅಂದೇ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಅದೇ ದಿನ ಯಾವ ಪಕ್ಷದ ಮೇಲೆ ಲವ್ ಆಗಿದೆ ಅಂತಾ ಹೇಳುತ್ತೇನೆ ಎಂದು ಎಂಎಲ್‌ಸಿ ಸಿಎಂ ಇಬ್ರಾಹಿಂ ಹೇಳಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ, 14 ಲವರ್ಸ್‌ ದಿನದಂದು ನಾನು ಎಂಎಲ್‍ಸಿ ಸ್ಥಾನಕ್ಕೆ ಹೂವಿನ ಹಾರವನ್ನು ಕೊಟ್ಟು ರಾಜೀನಾಮೆ ಕೋಡುತ್ತೇನೆ. ಅದೇ ದಿನ ಮುಂದಿನ ರಾಜಕೀಯ ನಿರ್ಧಾರವನ್ನು ನಾನು ಪ್ರಕಟಿಸುತ್ತೇನೆ. ಆದರೆ ಯಾವುದೇ ಕಾರಣಕ್ಕೂ ಹೊಸ ಪಕ್ಷ ಕಟ್ಟುವುದಿಲ್ಲ. ಮೊದಲು ಜನರ ಅಭಿಪ್ರಾಯವನ್ನು ಕೇಳಿಕೊಂಡು ನಂತರ ಯಾವ ಪಕ್ಷಕ್ಕೆ ಹೋಗಬೇಕು ಎಂದು ನಿರ್ಧರಿಸುತ್ತೇನೆ ಎಂದು ಹೇಳಿದ್ದಾರೆ.

ನನ್ನ ಬಳಿ ಹಣ ಇಲ್ಲ ಅದಕ್ಕೆ ಪರಿಷತ್ ನಾಯಕನಾಗಿ ನನ್ನನ್ನು ನೇಮಿಸಲಿಲ್ಲ. ಅಲ್ಪಸಂಖ್ಯಾತರು ಕಾಂಗ್ರೆಸ್‍ ಬಿಟ್ಟು ಬಿಜೆಪಿಗೆ ಹೋಗುತ್ತಾರೆ ಎಂಬ ಭಾವನೆ ಕಾಂಗ್ರೆಸ್‍ಗೆ ಇದೆ. ನಾವು ಸಿದ್ದರಾಮಯ್ಯಗೆ ಹಿನ್ನೆಲೆ ಗಾಯಕರಾಗಿದ್ದೆವು. ಸಿದ್ದರಾಮಯ್ಯಗೆ ಒಳ್ಳೆಯದಾಗಬೇಕು ಎಂದು ದುಡಿದಿದ್ದೇವೆ. ಸಿದ್ದರಾಮಯ್ಯ ನಮ್ಮ ಕುತ್ತಿಗೆ ಕೊಯ್ದುರು ಎಂದು ಕಿಡಿಕಾರಿದ್ದಾರೆ.

ಬಾದಾಮಿಗೆ ಕರೆದುಕೊಂಡು ನಾಮಪತ್ರ ಹಾಕಿಸಿ ಗೆಲ್ಲಿಸಿದ್ದು ನಾನು. ಇದನ್ನು ಮರೆತು ಬಿಟ್ರಾ ಸಿದ್ದರಾಮಯ್ಯ ಅವರೇ? ನಿಮಗಾಗಿ ನಾನು ದೇವೇಗೌಡರ ಬಿಟ್ಟು ಬರಲಿಲ್ವಾ? ನನ್ನ ಮುಗಿಸಲು ಯು.ಟಿ.ಖಾದರ್‌ಗೆ ಸ್ಥಾನ ಕೊಟ್ರಾ? ಪ್ಯಾಂಟ್ ಬದಲು ಚಡ್ಡಿ ಕೊಟ್ಟಿದ್ದೀರಾ? ಯು.ಟಿ.ಖಾದರ್‌ಗೆ ಕೊಟ್ಟ ಸ್ಥಾನವನ್ನು ಸಿ.ಎಂ.ಇಬ್ರಾಹಿಂ ಚಡ್ಡಿಗೆ ಹೋಲಿಸಿದ್ದಾರೆ. ಸಿದ್ದರಾಮಯ್ಯ ಅವರಿಗೆ ಪ್ರಶ್ನೆ ಮಾಡಿದ್ದಾರೆ.

ಅಲ್ಪಸಂಖ್ಯಾತರು, ಲಿಂಗಾಯತರು, ಒಕ್ಕಲಿಗರು ಮೂರನ್ನು ಸೇರಿಸಿ ಸಮಾವೇಶ ಮಾಡುತ್ತೇನೆ. ಫೆ.14 ರಿಂದ ನನ್ನ ಯಾತ್ರೆ ಶುರುವಾಗಲಿದೆ. ನನಗೆ ಎಲ್ಲಾ ಪಕ್ಷದ ನಾಯಕರು ಸಂಪರ್ಕದಲ್ಲಿದ್ದಾರೆ. ಸಿದ್ದರಾಮಯ್ಯ ಅವರು ಇದುವರೆಗೂ ಸೌಜನ್ಯಕ್ಕೂ ನನಗೆ ಒಂದು ಫೋನ್ ಕಾಲ್ ಕೂಡ ಮಾಡಿಲ್ಲ. ಫೆ.14 ರಂದು ನನ್ನ ರಾಜಕೀಯ ನಿರ್ಧಾರ ಹೇಳುತ್ತೇನೆ ಎಂದು ಸಿದ್ದರಾಮಯ್ಯ ಅವರ ವಿರುದ್ಧ ವಾಗ್ಧಾಳಿ ಮಾಡಿದ್ದಾರೆ.

ಸಿಎಂ ಇಬ್ರಾಹಿಂ, ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಧಿಕ್ಕಾರ ಕೂಗಿ ಕಾಂಗ್ರೆಸ್‍ನಿಂದ ಉಚ್ಛಾಟಿತನಾಗಿದ್ದ ಶಾಯಿದ್ ಮನೆಗೆ ಬಂದಿದ್ದಾರೆ. ಮೈಸೂರಿನ ಎನ್.ಆರ್.ಮೊಹಲ್ಲಾದಲ್ಲಿ ಮೆರವಣಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಈ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧವಾಗಿ ವಾಗ್ದಾಳಿ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *