ಕೊಲೆ ಕೇಸಲ್ಲಿ ಮೂರೂವರೆ ಗಂಟೆ ಪೊಲೀಸರಿಂದ ಗ್ರಿಲ್ – ಹೊರ ಬರ್ತಿದ್ದಂತೆ ಬೆಂಬಲಿಗರಿಂದ ಜೈಕಾರ

Public TV
2 Min Read

– ಬುಧವಾರ ಮತ್ತೆ ವಿಚಾರಣೆಗೆ ಹಾಜರಾಗಲು ಸೂಚನೆ
– ಕೊಲೆಗೂ ನನಗೂ ಸಂಬಂಧವಿಲ್ಲ ಎಂದ ಮಾಜಿ ಸಚಿವ

ಬೆಂಗಳೂರು: ರೌಡಿಶೀಟರ್ ಬಿಕ್ಲಶಿವ ಕೊಲೆ ಪ್ರಕರಣದಲ್ಲಿ (Murder Case) ಎ5 ಆರೋಪಿ ಆಗಿರುವ ಕೆ.ಆರ್‌ ಪುರ ಬಿಜೆಪಿ ಶಾಸಕ ಬೈರತಿ ಬಸವರಾಜ್ (Byrathi Basavaraj) ಭಾರತಿನಗರ ಪೊಲೀಸ್ ಠಾಣೆಗೆ ಹಾಜರಾಗಿದ್ದರು. ಸತತ ಮೂರುವರೆಗಂಟೆಗಳ ಕಾಲ ವಿಚಾರಣೆ ಎದುರಿಸಿದರು.

ಬಂಧನ ಭೀತಿಯಿಂದ ಮಧ್ಯಾಹ್ನದವರೆಗೂ ವಿಚಾರಣೆಗೆ ಬಂದಿರಲಿಲ್ಲ. ಹೆಚ್ಚಿನ ಪೊಲೀಸ್ ಭದ್ರತೆಯೊಂದಿಗೆ ತನಿಖಾಧಿಕಾರಿ (Investigation Officer) ಕಾದು ಕುಳಿತಿದ್ದರು. ಮಧ್ಯಾಹ್ನ 2:30ರ ಸುಮಾರಿಗೆ ಬಂದ ಮಾಜಿ ಸಚಿವರಿಗೆ ಸುಮಾರು ಮೂರುವರೆ ಗಂಟೆಗಳ ಕಾಲ ತನಿಖಾಧಿಕಾರಿ ಗ್ರಿಲ್ ಮಾಡಿದರು. 100ಕ್ಕೂ ಹೆಚ್ಚು ಪ್ರಶ್ನೆಗಳನ್ನು ಕೇಳಿದ್ದಾರೆ ಅಂತ ತಿಳಿದು ಬಂದಿದೆ.

ಅಲ್ಲದೇ ಬುಧವಾರ ಮತ್ತೆ ವಿಚಾರಣೆಗೆ ಬರುವಂತೆ ಸೂಚಿಸಿದ್ದಾರೆ. ವಿಚಾರಣೆ ಬಳಿಕ ಮಾತಾಡಿದ ಬಸವರಾಜ್, ನನ್ನ ಪಾತ್ರ ಇಲ್ಲ ಅಂತ ಹೇಳಿದ್ದೇನೆ. ಬುಧವಾರ ಬರೋಕೆ ಹೇಳಿದ್ದಾರೆ, ಬರ್ತೇನೆ ಅಂದರು. ಇನ್ನೂ ಬೈರತಿ ಬಸರವಾಜ್‌ರನ್ನ ರಾಜಕೀಯವಾಗಿ ಮುಗಿಸೋ ಷಡ್ಯಂತ್ರ ಅಂತ ಬಿಜೆಪಿಗರು ಆರೋಪಿಸಿದ್ರೆ, ದೂರಿನಲ್ಲಿ ಇವರ ಹೆಸರಿದೆ ಅಂತ ಗೃಹ ಸಚಿವ ಪರಮೇಶ್ವರ್ ತಿರುಗೇಟು ಕೊಟ್ಟಿದ್ದಾರೆ. ಇದನ್ನೂ ಓದಿ: ಕಲಬುರಗಿ ಜ್ಯುವೆಲರಿ ಶಾಪ್ ದರೋಡೆ ಕೇಸ್ – 30 ರೂ. ಫೋನ್ ಪೇ ಮಾಡಿ ಸಿಕ್ಕಿಬಿದ್ದ ಖದೀಮರು

ಬೈರತಿ ಬಸವರಾಜ್‌ ಹೇಳಿದ್ದೇನು?
ಇನ್ನೂ ಸತತ ಮೂರುವರೆಗಂಟೆಗಳ ಕಾಲ ವಿಚಾರಣೆ ಎದುರಿಸಿದ ಬೈರತಿ ಬಸವರಾಜ್‌, ಭಾರತಿ ನಗರ ಠಾಣೆಯಿಂದ ಹೊರ ಬರುತ್ತಿದ್ದಂತೆ ಮಾಧ್ಯಮಗಳೊಂದಿಗೆ ಮಾತನಾಡಿದರು. ಇದನ್ನೂ ಓದಿ: ಪ್ರಾಧ್ಯಾಪಕರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ

ಕೊಲೆ ಪ್ರಕರಣದಲ್ಲಿ ವಿಚಾರಣೆಗೆ ಕರೆದಿದ್ರು, ಪೊಲೀಸರು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದ್ದೀನಿ. ಇದರಲ್ಲಿ ನನ್ನ ಪಾತ್ರ ಇಲ್ಲ ಅಂತಾ ಹೇಳಿದ್ದೇನೆ. ನನಗೂ ಕೊಲೆಗೂ ಸಂಬಂಧವಿಲ್ಲ, ಯಾವ ಜಗ್ಗನೂ ನನಗೆ ಗೊತ್ತಿಲ್ಲ. ಬುಧವಾರ ಮತ್ತೆ ವಿಚಾರಣೆಗೆ ಬರಬೇಕೆಂದು ಹೇಳಿದ್ದಾರೆ. ಬರುತ್ತೇನೆ. ತನಿಖೆಗೆ ಎಲ್ಲ ರೀತಿಯಿಂದಲೂ ಸಹಕಾರ ಕೊಡುತ್ತೇನೆ ಎಂದು ಹೇಳಿದರು.

ವಿಚಾರಣೆ ಮುಗಿಸಿ ಹೊರಬರ್ತಿದ್ದಂತೆ ಬೆಂಬಲಿಗರು ಜೈಕಾರ ಕೂಗಿ ಸಂಭ್ರಮಿಸಿದರು. ಇದನ್ನೂ ಓದಿ: ಅಪ್ರಾಪ್ತನ ಜೊತೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ – ಇಬ್ಬರು ಬಾಲಕರು ಅರೆಸ್ಟ್‌

Share This Article