ನಾನು ಓದಿದ್ದು 7ನೇ ಕ್ಲಾಸ್‌ – ಮೋಸಹೋದ ಕಥೆಯನ್ನು ವಿನಯ್‌ ಗುರೂಜಿಗೆ ಪತ್ರದಲ್ಲಿ ವಿವರಿಸಿದ್ದ ಗೋವಿಂದ ಪೂಜಾರಿ

Public TV
2 Min Read

ಉಡುಪಿ: ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ನಕಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ನಾಯಕರನ್ನು ಸೃಷ್ಟಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಸಿಬಿ ಪೊಲೀಸರ (CCB Police) ತನಿಖೆ ನಡೆಸುತ್ತಿದ್ದಾರೆ. ಚೈತ್ರಾ ಕುಂದಾಪುರ (Chaitra Kundapura) ಮತ್ತು ಏಳು ಜನ ಸಹಚರರು ಪೊಲೀಸರ ವಶದಲ್ಲಿದ್ದಾರೆ. ಈ ನಡುವೆ ಮೋಸಕ್ಕೊಳಗಾದ ಉದ್ಯಮಿ ಗೋವಿಂದ ಬಾಬು ಪೂಜಾರಿ (Govind Babu Poojari) ಅವಧೂತ ವಿನಯ ಗುರೂಜಿಯವರಿಗೆ (Vinay Guruji) ಪತ್ರ ಬರೆದು ಆಗಿರುವ ವೃತ್ತಾಂತವನ್ನೆಲ್ಲ ವಿವರಿಸಿದ್ದಾರೆ.

ಐದೂವರೆ ಕೋಟಿ ರೂಪಾಯಿ ಕಳೆದುಕೊಂಡ ನಂತರ ಮನನೊಂದು ಗೋವಿಂದ ಪೂಜಾರಿ ಅವಧೂತ ವಿನಯ್ ಗುರೂಜಿಗೆ ಪತ್ರ ಬರೆದಿದ್ದರು. ಗೋವಿಂದ ಬಾಬು ಪೂಜಾರಿ ಬರೆದ ಪತ್ರದ ಸಾರಾಂಶ ಇಲ್ಲಿದೆ. ಇದನ್ನೂ ಓದಿ: ಮುಂದಿನ ವರ್ಷ ವಂದೇ ಭಾರತ್‌ ಸ್ಲೀಪರ್‌ ಕೋಚ್‌ ರೈಲು ಬಿಡುಗಡೆ

ಕಷ್ಟಕರ ಪರಿಸ್ಥಿತಿಯಲ್ಲಿ ನಾನು ಏಳನೇ ತರಗತಿ ವಿದ್ಯಾಭ್ಯಾಸ ಮಾಡಿ ಮುಂಬೈಗೆ ಹೋದೆ. ಮುಂಬೈ ಹೋಟೆಲುಗಳಲ್ಲಿ ಪ್ಲೇಟ್ ತೊಳೆದು ಜೀವನವನ್ನು ರೂಪಿಸಿದ್ದೇನೆ. ಕೆಲಸ ಮಾಡುತ್ತಾ ಮಾಡುತ್ತಾ ಫೈವ್ ಸ್ಟಾರ್ ಹೋಟೆಲ್ ಗೆ ಸೇರಿಕೊಂಡೆ.

ಐದು ಜನರಿಂದ ಒಂದು ಉದ್ಯಮವನ್ನು ನಾನು ಆರಂಭ ಮಾಡಿದೆ. ತಮಿಳುನಾಡು ಗುಜರಾತ್ ಆಂಧ್ರದಲ್ಲಿ ಮನೆ ಕಂಪನಿಗೆ ಫುಡ್ ಸರ್ವಿಸ್ ಶುರು ಮಾಡಿದೆ. ಲಾಭದಲ್ಲಿ ವೃದ್ಧಾಶ್ರಮ ಅನಾಥಾಶ್ರಮ ಕೋವಿಡ್ ಸಂದರ್ಭ ಶಿಕ್ಷಣಕ್ಕೆ ಸಹಾಯ ಮಾಡಿದೆ. ನನ್ನ ಜೀವನದಲ್ಲಿ ಈವರೆಗೆ 15 ರಿಂದ 20 ಸಾವಿರ ಮನೆ/ ಜನಗಳಿಗೆ ಸಹಾಯ ಮಾಡಿದ್ದೇನೆ. ಹಿರಿಯರ ಮಾರ್ಗದರ್ಶನದಂತೆ ನಾನು ಆರ್‌ಎಸ್‌ಎಸ್‌ನ ಐಟಿಸಿ ಕೋರ್ಸ್ ಅನ್ನು ಮುಗಿಸಿದೆ. ಊರಿನವರ ಆಪ್ತರ ಹಿತೈಷಿಗಳ ಮಾರ್ಗದರ್ಶನದಂತೆ ಬಿಜೆಪಿ ಸೇರ್ಪಡೆಯಾದೆ.

 

ಕಳೆದ ಆರು ವರ್ಷಗಳಿಂದ ನಾನು ಬಿಜೆಪಿಯ ಸದಸ್ಯತ್ವ ಸ್ವೀಕರಿಸಿದ್ದೇನೆ. ನನ್ನ ಜೊತೆ ಕೆಲಸ ಮಾಡುತ್ತಿದ್ದ ಪ್ರಸಾದ್ ಬೈಂದೂರು ಚೈತ್ರಾಳನ್ನು ಮೊದಲು ಪರಿಚಯ ಮಾಡಿದ್ದಾನೆ. ಚೈತ್ರಾ ನಂತರ ಗಗನ್ ಕಡೂರು ಪರಿಚಯ ಮಾಡಿಸಿದಳು. ಬಿಜೆಪಿ ಮತ್ತು ಆರ್‌ ಎಸ್ ಎಸ್ ಎಂದು ವಿಶ್ವನಾಥ್ ಜಿ, ಅಭಿನವ ಸ್ವಾಮೀಜಿ , ನಾಯ್ಕ್ ಒಬ್ಬೊಬ್ಬರಾಗಿ ಪರಿಚಯಿಸಿದರು. ಆಮೇಲೆ ಚಿಕ್ಕಮಗಳೂರು ಬೆಂಗಳೂರು, ಮಂಗಳೂರಿನಲ್ಲಿ ಅಂತ ಹಂತವಾಗಿ 5.50ಕೋಟಿ ಪಡೆದರು. ಮತ್ತಷ್ಟು ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ.

ಹರಿದ 10 ರೂ. ನೋಟು ಮೂಲಕ ಹಣ ವರ್ಗಾವಣೆಯಾಗಿದೆ. ಅರ್ಧ ಅರ್ಧ ನೋಟಿನ ಕೋಡ್ ವಾರ್ಡ್ ಮೂಲಕ ನಾವು ಹಣ ಹಸ್ತಾಂತರ ಮಾಡಿದ್ದೇವೆ. ನನ್ನ ಆಸ್ತಿಯನ್ನು ಅಡ ಇಟ್ಟು ಒಮ್ಮೆ ಮೂರು ಕೋಟಿ ಸಾಲ ಪಡೆದಿದ್ದೇನೆ. ಇನ್ನೆರಡು ಕೋಟಿ ಬೇಕು ಎಂದು ಚೈತ್ರ ಗ್ಯಾಂಗ್ ಬೇಡಿಕೆ ಇಟ್ಟಿದ್ದು, ಮತ್ತೆ ಖಾಸಗಿ ಫೈನಾನ್ಸ್ ನಿಂದ 2 ಕೋಟಿ ಸಾಲ ಪಡೆದುಕೊಂಡೆ ಎಂದು ವಿವರಿಸಿದ್ದಾರೆ.

ಅವಧೂತ ಗುರೂಜಿಗೆ ಗೋವಿಂದ ಬಾಬು ಪೂಜಾರಿ ಪತ್ರದ ಕೊನೆಗೆ ವಿನಂತಿ ಮಾಡಿದ್ದಾರೆ. ರಾಷ್ಟ್ರೀಯ ಪಕ್ಷ, ಆರ್‌ಎಸ್‌ಎಸ್‌ ಸಂಘ ಎಂದು ಹೇಳಿ ನನಗೆ ಮೋಸ ಮಾಡಿದರು. ರಾಜಕೀಯದ ಆಮೀಷ ತೋರಿಸಿ ನನ್ನನ್ನು ಹಳ್ಳಕ್ಕೆ ತಳ್ಳಿದರು. ಹಿರಿಯರಾದ ತಾವು ನನಗೆ ದಾರಿ ತೋರಿಸಬೇಕು. ಕಾನೂನು ಮತ್ತು ಪೊಲೀಸ್ ವ್ಯವಸ್ಥೆ ಮೇಲೆ ನನಗೆ ನಂಬಿಕೆ ಇದೆ. ನನಗೆ ನ್ಯಾಯ ಒದಗಿಸಲು ಸಹಕಾರ ಮಾಡಿ ಎಂದು ಹೇಳುವ ಮೂಲಕ ಪತ್ರ ಕೊನೆಗೊಳಿಸಿದ್ದಾರೆ. ಅದರ ಜೊತೆ ಎರಡು ವಾಯ್ಸ್ ನೋಟ್ ಗಳು ಲಭ್ಯವಾಗಿದೆ.

 

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್