ರೆಬೆಲ್ಸ್ ವಿರುದ್ಧ ನಡ್ಡಾಗೆ ವಿಜಯೇಂದ್ರ ದೂರು-ಶೀಘ್ರವೇ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ

Public TV
1 Min Read

ಬೆಂಗಳೂರು: ಬಣ ಬಡಿದಾಟ ತೀವ್ರಗೊಂಡಿರುವ ಹೊತ್ತಲ್ಲೇ ರಾಜ್ಯಕ್ಕೆ ಎಂಟ್ರಿಕೊಟ್ಟ ಜೆಪಿ ನಡ್ಡಾಗೆ (JP Nadda) ನಿರೀಕ್ಷೆಯಂತೆಯೇ ವಿಜಯೇಂದ್ರ (BY Vijayendra) ರೆಬೆಲ್ ಬಣದ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ.

ಪ್ರತ್ಯೇಕ ಹೋರಾಟಕ್ಕೆ ಬ್ರೇಕ್ ಹಾಕಿಸಿ ಸಹಕಾರ ತತ್ವ ಬೋಧಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ನಡ್ಡಾ, ಎಲ್ಲಾ ಸರಿ ಹೋಗಲಿದೆ. ನಾನು ಸಹ ಅವರನ್ನ ಕರೆದು ಮಾತನಾಡುವೆ. ಸದ್ಯದಲ್ಲಿ ಎಲ್ಲದಕ್ಕೂ ಅಂತ್ಯ ಹಾಡಲಾಗುತ್ತೆ ಎಂದು ಭರವಸೆ ಕೊಟ್ಟಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಮಟನ್‌ 100 ರೂಪಾಯಿ ಇದ್ದದ್ದು 500 ರೂಪಾಯಿ ಆದ್ರೆ ತಗೋತೀರ – ಟಿಕೆಟ್‌ ದರ ಏರಿಕೆ ಬಗ್ಗೆ ಚಲುವರಾಯಸ್ವಾಮಿ ಪ್ರತಿಕ್ರಿಯೆ

ಇನ್ನು, ಶೀಘ್ರವೇ ನಡೆಯಲಿರುವ ರಾಜ್ಯಾಧ್ಯಕ್ಷರ ಚುನಾವಣೆ ಬಗ್ಗೆಯೂ ನಡ್ಡಾ-ವಿಜಯೇಂದ್ರ ಚರ್ಚೆ ನಡೆಸಿದ್ದಾರೆ. ಸಿ ಟಿ ರವಿ (CT Ravi), ಮುನಿರತ್ನ (Munirthana) ವಿಚಾರದಲ್ಲಿ ಸರ್ಕಾರದ ನಡೆ ಖಂಡಿಸಿ ಹಮ್ಮಿಕೊಂಡಿರುವ ಹೋರಾಟಗಳ ಬಗ್ಗೆ ವಿಜಯೇಂದ್ರ ವಿವರ ನೀಡಿದ್ದಾರೆ. ಸಂಜೆ ಮುನಿರತ್ನ ಸೇರಿ ಹಲವರು ಜೆಪಿ ನಡ್ಡಾರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.

ಜೆಪಿ ನಡ್ಡಾ ಬೆಂಗಳೂರಿಗೆ ಬಂದರೂ ಭಿನ್ನರ ಪಡೆ ಭೇಟಿ ಮಾಡಲಿಲ್ಲ. ಬದಲಿಗೆ ಶನಿವಾರದಿಂದ ಶುರು ಮಾಡಲಿರುವ 2ನೇ ಹಂತದ ವಕ್ಫ್ ವಿರೋಧಿ ಹೋರಾಟದ ಸಿದ್ಧತೆಯಲ್ಲಿ ಮುಳುಗಿತ್ತು.

 

Share This Article