ಬಾಬಾ ಸಿದ್ದಿಕಿ ಹತ್ಯೆ ಕೇಸ್‌ – ಲಾರೆನ್ಸ್ ಬಿಷ್ಣೋಯ್‌ ಸಹೋದರ ಅನ್ಮೋಲ್ ಬಿಷ್ಣೋಯ್‌ ಭಾರತಕ್ಕೆ ಗಡೀಪಾರು!

Public TV
2 Min Read

ವಾಷಿಂಗ್ಟನ್/ನವದೆಹಲಿ: ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಡೆದಿದ್ದ ಮಹಾರಾಷ್ಟ್ರದ ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ (Baba siddique) ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಹಾಗೂ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್‌ ಸಹೋದರ, ಅನ್ಮೋಲ್‌ ಬಿಷ್ಣೋಯ್‌ನನ್ನ (Anmol Bishnoi) ಅಮೆರಿಕದಿಂದ ಗಡಿಪಾರು ಮಾಡಲಾಗುತ್ತಿದೆ. ಬುಧವಾರ (ನಾಳೆ) ಬೆಳಗ್ಗೆ 10 ಗಂಟೆಯೊಳಗೆ ಅನ್ಮೂಲ್‌ನನ್ನ ಭಾರತಕ್ಕೆ ಕರೆತರುವ ನಿರೀಕ್ಷೆಯಿದೆ ಎಂದು ವರದಿಗಳು ತಿಳಿಸಿವೆ.

ಅಮೆರಿಕದ (America) ಗೃಹ ಇಲಾಖೆ, ಸಿದ್ದಿಕಿ ಅವರ ಪುತ್ರ ಜೀಶಾನ್ ಸಿದ್ದಿಕಿಗೆ ಇ-ಮೇಲ್ ಮೂಲಕ ಈ ವಿಷಯವನ್ನ ಖಚಿತಪಡಿಸಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಬಾಬಾ ಸಿದ್ದಿಕಿ ಹತ್ಯೆ ಕೇಸ್‌ – 4,590 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ ಮುಂಬೈ ಪೊಲೀಸ್

BABA SIDDIQUE

ಅನ್ಮೋಲ್‌ ಬಿಷ್ಣೋಯ್‌ನನ್ನ ಅಮೆರಿಕದಿಂದ (USA) ಭಾರತಕ್ಕೆ ಗಡಿಪಾರು ಮಾಡಲಾಗುತ್ತಿದ್ದು, ಬುಧವಾರ ಬೆಳಗ್ಗೆ 10 ಗಂಟೆಗೆ ದೆಹಲಿ ವಿಮಾನ ನಿಲ್ದಾಣಕ್ಕೆ (Delhi Airport) ಬಂದಿಳಿಯುವ ಸಾಧ್ಯತೆಗಳಿವೆ.

ಅನ್ಮೋಲ್‌ ಬಿಷ್ಣೋಯ್ ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್‌ನ ಕಿರಿಯ ಸಹೋದರ. ಲಾರೆನ್ಸ್ ಬಿಷ್ಣೋಯ್ ಜೈಲಿನಲ್ಲಿಯೇ ಇದ್ದರೂ ಜಾಗತಿಕ ಕ್ರಿಮಿನಲ್ ಜಾಲವನ್ನ ನಡೆಸುತ್ತಿದ್ದಾನೆ ಎಂಬ ಆರೋಪವಿದೆ. ಇದನ್ನೂ ಓದಿ: ಬಾಬಾ ಸಿದ್ದಿಕಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಅರೆಸ್ಟ್‌ – ಬಿಷ್ಣೋಯ್‌ ಗ್ಯಾಂಗ್‌ ಜೊತೆ ನಂಟು ಸಾಬೀತು!

salman khan 3

ಹಲವು ವಿಧ್ವಂಸಕ ಕೃತ್ಯಗಳಲ್ಲಿ ಪಾಲ್ಗೊಂಡಿರುವ ಆರೋಪ ಹೊತ್ತಿರುವ ಅನ್ಮೋಲ್‌, ಬಾಬಾ ಸಿದ್ದಿಕಿ ಕೊಲೆ ಪ್ರಕರಣದಲ್ಲೂ ಪಾತ್ರ ವಹಿಸಿದ್ದ ಆರೋಪ ಇದೆ. ಸಿದ್ದಿಕಿ ಹತ್ಯೆಗೈದ ಮೂವರು ಶೂಟರ್‌ಗಳು ಅನ್ಮೋಲ್‌ ಸಂಪರ್ಕದಲ್ಲಿದ್ದ, ಪಿಸ್ತೂಲ್‌ಗಳನ್ನ ಪೂರೈಸಿದ್ದ ಎಂಬುದನ್ನ ಮುಂಬೈ ಪೊಲೀಸರು ಬಹಿರಂಗಪಡಿಸಿದ್ದರು. ಸದ್ಯ ಅಮೆರಿಕ ಅನ್ಮೋಲ್‌ನನ್ನ ಗಡೀಪಾರು ಮಾಡುತ್ತಿರೋದು ಭಾರತಕ್ಕೆ ಸಿಕ್ಕ ಮತ್ತೊಂದು ರಾಜತಾಂತ್ರಿಕ ಯಶಸ್ಸಾಗಿದೆ.

ಅಮೆರಿಕದಲ್ಲಿ ಪತ್ತೆಯಾಗಿದ್ದು ಹೇಗೆ?
ಈ ಹಿಂದೆ ಒಂದೆರಡು ದಿನಗಳ ಕಾಲ ಭಾರತದಲ್ಲಿ ನಿಗೂಢ ಸ್ಥಳದಲ್ಲಿ ನೆಲೆಸಿದ್ದ ಅನ್ಮೋಲ್‌ ಸಿಧು ಮೂಸೆವಾಲಾ ಹತ್ಯೆಯ ನಂತರ ಪರಾರಿಯಾಗಿದ್ದ. ಬಳಿಕ ಅಮೆರಿಕದಲ್ಲಿ ಆತನನ್ನ ಪತ್ತೆಹಚ್ಚಲಾಗಿತ್ತು. ಭಾರತದ ಹಲವು ರಾಜ್ಯಗಳಲ್ಲಿ ಅನ್ಮೋಲ್‌ ವಿರುದ್ಧ ಪ್ರಕರಣಗಳು ದಾಖಲಾಗಿವೆ ಎಂದು ತನಿಖಾ ಮೂಲಗಳು ತಿಳಿಸಿವೆ. ಇದನ್ನೂ ಓದಿ: ನಟ ಸಲ್ಮಾನ್ ಖಾನ್‌ಗೆ ಮತ್ತೆ ಜೀವ ಬೆದರಿಕೆ – ಅಪರಿಚಿತ ವ್ಯಕ್ತಿಯಿಂದ 2 ಕೋಟಿಗೆ ಬೇಡಿಕೆ

ಸಲ್ಮಾನ್‌ ಖಾನ್‌ ಮನೆ ಮೇಲೆ ದಾಳಿಗೆ ಸಂಚು
ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಮನೆ ಮೇಲೆ ದಾಳಿ ಮಾಡುವ ಸಂಚಿನಲ್ಲೂ ಅನ್ಮೋಲ್‌ ಬಿಷ್ಣೋಯ್‌ ಭಾಗಿಯಾಗಿದ್ದಾನೆ. ಭಾರತಕ್ಕೆ ಕರೆತಂದ ಬಳಿಕ ತನಿಖಾ ತಂಡಗಳು ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಾಧಾರಗಳನ್ನ ಪರಿಶೀಲಿಸಲಿವೆ.

ಗುಂಡಿಕ್ಕಿ ಬಾಬಾ ಸಿದ್ದಿಕಿ ಹತ್ಯೆ
ಅ.12 ರಂದು, ಬಾಂದ್ರಾದಲ್ಲಿರುವ ಪುತ್ರ ಶಾಸಕ ಜೀಶನ್ ಸಿದ್ದಿಕಿ ಅವರ ಕಚೇರಿಯ ಹೊರಗೆ ಸಿದ್ದಿಕಿ ಅವರನ್ನು ಗುಂಡಿಕ್ಕಿ ಹತ್ಯೆಗೈಯ್ಯಲಾಗಿತ್ತು. ಸಿದ್ದಿಕಿ ಹತ್ಯೆಗೆ 9.9 ಎಂಎಂ ಪಿಸ್ತೂಲ್‌ ಬಳಸಲಾಗಿತ್ತು. ಒಟ್ಟು 6 ಸುತ್ತುಗಳಲ್ಲಿ ಗುಂಡು ಹಾರಿಸಲಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದರು. 4,590 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ್ದರು.

 

Share This Article