ಭಾರೀ ಏರಿಕೆ ಕಂಡ Adani Enterprises ಷೇರು – ಮತ್ತಷ್ಟು ಹೂಡಿಕೆ ಮಾಡಿದ GQG

By
1 Min Read

ಮುಂಬೈ: ಹಿಂಡೆನ್‌ಬರ್ಗ್‌ (Hindenburg) ಸಂಶೋಧನಾ ವರದಿಯಿಂದ ಪಾತಾಳ ಕಂಡಿದ್ದ ಅದಾನಿ ಸಮೂಹ ಕಂಪನಿಗಳ (Adani Group Companies) ಷೇರುಗಳು ಈಗ ಮೇಲಕ್ಕೆ ಏರುತ್ತಿದೆ. ಅದರಲ್ಲೂ ಅದಾನಿ ಎಂಟರ್‌ಪ್ರೈಸ್‌ (Adani Enterprises) ಷೇರು ರಾಕೆಟ್‌ ವೇಗದಲ್ಲಿ ಮೇಲೇಳುತ್ತಿದೆ.

ಅದಾನಿ ಸಮೂಹ ಯಾವುದೇ ರೀತಿಯಲ್ಲೂ ಷೇರಿನ ಬೆಲೆಗಳನ್ನು ತಿರುಚಿಲ್ಲ. ಮಾರುಕಟ್ಟೆ ನಿಯಂತ್ರಕ ಸಂಸ್ಥೆ ಸೆಬಿ (SEBI) ಕಡೆಯಿಂದಲೂ ಯಾವುದೇ ನಿಯಂತ್ರಣ ವೈಫಲ್ಯವೂ ಕಂಡುಬಂದಿಲ್ಲ ಎಂದು ಸುಪ್ರೀಂ (Supreme Court) ನೇಮಿಸಿದ ಸಮಿತಿಯ ವರದಿ ಶುಕ್ರವಾರ ಪ್ರಕಟಗೊಂಡ ಬೆನ್ನಲ್ಲೇ ಅದಾನಿ ಕಂಪನಿಗಳ ಷೇರುಗಳ ಬೆಲೆ ಸೋಮವಾರದಿಂದ ಏರಿಕೆಯಾಗುತ್ತಿದೆ.

ಅದಾನಿ ಎಂಟರ್‌ಪ್ರೈಸ್‌ ಷೇರು ಬೆಲೆ ಇಂದು ಒಂದೇ ದಿನ 307 ರೂ. ಏರಿಕೆ ಕಂಡು ಕೊನೆಗೆ 2,333.70 ರೂ.ನಲ್ಲಿ ವ್ಯವಹಾರ ಮುಗಿಸಿದೆ. ಶುಕ್ರವಾರ 1956 ರೂ.ನಲ್ಲಿ ಕೊನೆಯಾಗಿದ್ದರೆ ಎರಡು ದಿನದ ವ್ಯವಹಾರದಲ್ಲಿ 677 ರೂ. ಏರಿಕೆಯಾಗಿದೆ. ಇದನ್ನೂ ಓದಿ: ಅದಾನಿ ಸಮೂಹ ಕಂಪನಿಗಳಲ್ಲಿ ಭಾರೀ ಹೂಡಿಕೆ – ಅದಾನಿ ಕೈ ಹಿಡಿದ ರಾಜೀವ್‌ ಜೈನ್‌ ಯಾರು?

1 ಷೇರಿನ ಬೆಲೆ ಎಷ್ಟು ಏರಿಕೆ?
ಇಂದಿನ ವ್ಯವಹಾರದಲ್ಲಿ ಅದಾನಿ ಟ್ರಾನ್ಸ್‌ಮಿಷನ್‌ ಒಂದು ಷೇರಿನ ಬೆಲೆ 41 ರೂ., ಅದಾನಿ ಗ್ರೀನ್‌ ಎನರ್ಜಿ ಬೆಲೆ 47 ರೂ. ಏರಿಕೆಯಾಗಿದೆ. ಅದಾನಿ ಪವರ್‌ 12 ರೂ., ಅದಾನಿ ಪೋರ್ಟ್‌ 8 ರೂ. ಏರಿಕೆಯಾಗಿದೆ.

 

GQG ಕಂಪನಿಯಿಂದ ಮತ್ತಷ್ಟು ಹೂಡಿಕೆ:
ಅಮೆರಿಕದ GQG ಕಂಪನಿ ಅದಾನಿ ಕಂಪನಿಯಲ್ಲಿ ಮತ್ತಷ್ಟು ಹೂಡಿಕೆ ಮಾಡಿದೆ. 3.5 ಶತಕೋಟಿ ಡಾಲರ್‌ (ಅಂದಾಜು 28 ಸಾವಿರ ಕೋಟಿ ರೂ.) ಹೂಡಿಕೆ ಮಾಡಿ 10% ರಷ್ಟು ಷೇರುಗಳನ್ನು ಖರೀದಿಸಿದೆ. ಯಾವ ಕಂಪನಿಯ ಷೇರುಗಳನ್ನು ಎಷ್ಟು ಪ್ರಮಾಣದಲ್ಲಿ ಖರೀದಿ ಮಾಡಲಾಗಿದೆ ಎಂಬುದು ತಿಳಿದು ಬಂದಿಲ್ಲ. ಭಾರತದಲ್ಲಿ ಲಭ್ಯವಿರುವ ಅತ್ಯುತ್ತಮ ಮೂಲಸೌಕರ್ಯ ಹೂಡಿಕೆ ಎಂದು GQG ಕಂಪನಿಯ ಅಧ್ಯಕ್ಷ ಮತ್ತು ಸಿಐಒ ರಾಜೀವ್‌ ಜೈನ್‌ ಅದಾನಿ ಸಮೂಹದ ಕಂಪನಿಯನ್ನು ಬಣ್ಣಿಸಿದ್ದಾರೆ.

Share This Article