ಪತ್ನಿ ಕೊಲೆಗೆ PROPOFOL ಅನಸ್ತೇಷಿಯಾ ಇಂಜೆಕ್ಷನ್ ಖರೀದಿ – ಸತ್ಯ ಬಾಯ್ಬಿಟ್ಟ ಕಿಲ್ಲರ್‌ ಡಾಕ್ಟರ್‌

Public TV
2 Min Read

– ನಾನು ಸರ್ಜನ್ ಅಂತ ಪ್ರಿಸ್ಕ್ರಿಪ್ಷನ್ ತೋರಿಸಿ ಮೆಡಿಕಲ್ ಸ್ಟೋರ್‌ನಲ್ಲಿ ಖರೀದಿ

ಬೆಂಗಳೂರು: ಡಾಕ್ಟರ್ ಪತಿಯಿಂದ ಪತ್ನಿ ಡಾ. ಕೃತಿಕಾ ರೆಡ್ಡಿ (Kruthika Reddy) ಕೊಲೆ ಪ್ರಕರಣ ಸಂಬಂಧ ಪೊಲೀಸರ ತನಿಖೆಯಲ್ಲಿ ಆರೋಪಿ ನಾನು ಸರ್ಜನ್ ಅಂತಾ ಮೆಡಿಕಲ್ ಶಾಪ್‌ನವರಿಗೆ ಹೆದರಿಸಿ ಅನಸ್ತೇಷಿಯಾ ಇಂಜೆಕ್ಷನ್ (Injection) ಖರೀದಿ ಮಾಡಿದ್ದನ್ನ ಪತ್ತೆ ಮಾಡಿದ್ದಾರೆ.

Krutkia Reddy Mahendra Reddy

ವೈದ್ಯ ಪತಿ ಮಹೇಂದ್ರ ರೆಡ್ಡಿಯಿಂದ (Mahendra Reddy) ಡಾಕ್ಟರ್ ಪತ್ನಿ ಕೃತಿಕಾ ರೆಡ್ಡಿಗೆ ಅನಸ್ತೇಷಿಯಾ ಕೊಟ್ಟು ಕೊಲೆ ಮಾಡಿ ಅರೆಸ್ಟ್ ಆಗಿದ್ದು ಗೊತ್ತೇ ಇದೆ. ಇದೀಗ ಆರೋಪಿ ಡಾಕ್ಟರ್ ಮಹೇಂದ್ರ ರೆಡ್ಡಿಯಿಂದ ಪೊಲೀಸ್ರು ಪ್ರಮುಖ ವಿಚಾರ ಬಾಯ್ಬಿಡಿಸಿದ್ದಾರೆ. ಮಾರತ್ತಹಳ್ಳಿ ಪೊಲೀಸರ ತನಿಖೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗವಾಗಿದ್ದು, ಆರೋಪಿ ಸತ್ಯ ಕಕ್ಕಿದ್ದಾನೆ. ಮಾರತಹಳ್ಳಿ ಇನ್ಸ್ಪೆಕ್ಟರ್ ಅನಿಲ್ ಕುಮಾರ್ ಮತ್ತು ತಂಡದಿಂದ ನಿರಂತರ ವಿಚಾರಣೆ ವೇಳೆ ಅನಸ್ತೇಷಿಯಾ ಖರೀದಿ ಮಾಡಿದ್ದು ಎಲ್ಲಿ ಅಂತಾ ಆರೋಪಿ ಬಾಯ್ಬಿಟ್ಟಿದ್ದಾನೆ. Propofol ಎಂಬ ಅನಷ್ತೇಷಿಯಾವನ್ನ ಕೊಟ್ಟು ಹೆಂಡ್ತಿಯನ್ನ ಕೊಲೆ ಮಾಡಿದ್ದಾಗಿ ಹೇಳಿದ್ದಾನೆ. ಅಂದು ಸ್ವತಃ ತಾನೇ ಡ್ರಗ್ಸ್ ಖರೀದಿ ಮಾಡಲು ಮೆಡಿಕಲ್ ಶಾಪ್ ಒಂದಕ್ಕೆ ಹೋಗಿದ್ದಾಗಿ ಹೇಳಿಕೆ ನೀಡಿದ್ದಾನೆ.

bengaluru doctor kills wife using anesthesia 1

ನಾನು ಡಾಕ್ಟರ್ Propfol ಬೇಕು ಅಂತಾ ಆರೋಪಿ ಮಹೇಂದ್ರ ರೆಡ್ಡಿ ಮೆಡಿಕಲ್ ಸ್ಟೋರ್ ನವರ ಬಳಿ ಕೇಳಿದ್ದಾನೆ. ಪ್ರೊಪೊಫೋಲ್ ಎಲ್ಲರಿಗೂ ಕೊಡಲು ಸಾಧ್ಯವಿಲ್ಲ ಅಂತಾ ಮೆಡಿಕಲ್‌ನವರು ಹೇಳಿದ್ದಾರೆ. ಆಗ ತಾನೊಬ್ಬ ಸರ್ಜನ್ ಅಂತಾ ತಾನೆ ಬರೆದಿದ್ದ ಪ್ರಿಸ್ಕ್ರಿಪ್ಸನ್ ನೀಡಿ ನನಗೆ ಟ್ರೀಟ್ಮೆಂಟ್‌ಗಾಗಿ ಬೇಕಿದೆ ಎಂದು ಹೇಳಿ ಮೆಡಿಸಿನ್ ಅನ್ನು ಖರೀದಿ ಮಾಡಿದ್ದ. ಇತ್ತ ನೋವಿನಿಂದ ಬಳಲಿ ಮನೆಯಲ್ಲಿ ಮಲಗಿದ್ದ ಪತ್ನಿ ಕೃತಿಕಾಳಿಗೆ ರಾತ್ರಿ ವೇಳೆ ತೆರಳಿ ಐವಿ ಮೂಲಕ Propofol ನೀಡಿದ್ದ. ಇದು ಓವರ್ ಡೋಸ್ ಆಗಿ ಬೆಳಗ್ಗೆ ಏಳುವ ಸಮಯದಲ್ಲಿ ಆಕೆ ಜೀವಂತವಾಗಿ ಇರಲಿಲ್ಲ.

ಇಂಜೆಕ್ಷನ್ ಪವರ್‌ಗೆ ಕೃತಿಕಾ ಮೊದಲು ನಿದ್ರೆಗೆ ಜಾರಿ ನಂತ್ರ ಕೋಮಾಗೆ ಜಾರಿದ್ಲು. ಕೋಮಾದಿಂದ ಹೊರ ತರಲು ಮೆಡಿಸನ್ ನೀಡದ ಕಾರಣ ಕೋಮಾದಲ್ಲೇ ಉಸಿರು ಚೆಲ್ಲಿದ್ದಾಳೆ. ಈ ವೇಳೆ ರಾತ್ರಿಯೆಲ್ಲಾ ಕೃತಿಕ ಜೊತೆಗೆ ಅದೇ ರೂಮ್ ನಲ್ಲಿಯೇ ಆರೋಪಿ ಮಹೇಂದ್ರ ರೆಡ್ಡಿ ಮಲಗಿದ್ದ. ಸದ್ಯ ಆರೋಪಿ ಅನಸ್ತೇಷಿಯಾ ಮೆಡಿಸನ್ ಕೊಂಡಿದ್ದ ರಹಸ್ಯ ಬೇಧಿಸಿರೊ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.

Share This Article