ಪತ್ನಿಯ ಸೀಮಂತಕ್ಕೆ ಹೆಲಿಕಾಪ್ಟರ್‌ನಿಂದ ಹೂಮಳೆ ಸುರಿಸಿ ಸರ್ಪ್ರೈಸ್‌ ಕೊಟ್ಟ ಉದ್ಯಮಿ

1 Min Read

ಮಂಗಳೂರು: ಉದ್ಯಮಿಯೊಬ್ಬರು ತನ್ನ ಪತ್ನಿಯ ಸೀಮಂತ ಕಾರ್ಯಕ್ರಮಕ್ಕೆ (Baby Shower) ಸರ್ಪ್ರೈಸ್‌ ನೀಡಲು ಹೊಸ ಐಡಿಯಾ ಮಾಡಿದ್ದು ಎಲ್ಲರ ಗಮನ ಸೆಳೆದಿದೆ.

ಇಂದು ಮಂಗಳೂರಿನ (Mangaluru) ಅಡ್ಯಾರ್ ಗಾರ್ಡನ್‌ನಲ್ಲಿ ಉದ್ಯಮಿ ಪ್ರಕಾಶ್ ಕುಂಪಲ ಎಂಬವರ ಪತ್ನಿ ಅರ್ಪಿತಾ ಅವರ ಸೀಮಂತ ಕಾರ್ಯಕ್ರಮ ನಡೆದಿತ್ತು. ಪತ್ನಿಯ ಸೀಮಂತಕ್ಕೆ ಉದ್ಯಮಿ ಪ್ರಕಾಶ್ ಅವರು ಹೆಲಿಕಾಪ್ಟರ್ ಮೂಲಕ ಹೂವಿನ ಸುರಿಮಳೆಗೈದು ಪತ್ನಿಗೆ ಸರ್ಪ್ರೈಸ್‌ ನೀಡಿದ್ದಾರೆ. ಇದನ್ನೂ ಓದಿ: Exclusive | ಸತ್ತವರ ಖಾತೆಗೆ 79 ಕೋಟಿ ಗೃಹಲಕ್ಷ್ಮಿ ಹಣ ಜಮೆ – 2.30 ಲಕ್ಷ ಫಲಾನುಭವಿಗಳ ಅಕೌಂಟ್ ಬ್ಲಾಕ್‌!

ಇದು ಮಂಗಳೂರಲ್ಲಿ ಮೊಟ್ಟ ಮೊದಲ ಬಾರಿಗೆ ಪತಿಯೋರ್ವ ಪತ್ನಿ ಸೀಮಂತಕ್ಕೆ ಹೆಲಿಕಾಪ್ಟರ್ ಮೂಲಕ ಪತ್ನಿಗೆ ಉಡುಗೊರೆ ನೀಡಿದಂತಾಗಿದ್ದು, ದೊಡ್ಡ ಸುದ್ದಿಯಾಗಿದೆ.

Share This Article