ಸಾಲ ವಾಪಸ್ ಕೇಳಿದ್ದಕ್ಕೆ ಉದ್ಯಮಿ ಕಿಡ್ನ್ಯಾಪ್ – ನಿರ್ದೇಶಕ ನಂದಕಿಶೋರ್‌ಗೆ ಹಣ ಕೊಡಿಸಿದ್ದ ರೌಡಿಶೀಟರ್‌

Public TV
1 Min Read

ಬೆಂಗಳೂರು: ನಿದೇರ್ಶಕ ನಂದಕಿಶೋರ್‌ಗೆ (Nanda Kishore) ಕೊಟ್ಟಿದ್ದ ಸಾಲ ವಾಪಸ್ ಕೇಳಿದ್ದಕ್ಕೆ ಉದ್ಯಮಿಯೊಬ್ಬನನ್ನು ಕಿಡ್ನ್ಯಾಪ್ ಮಾಡಿರುವ ಘಟನೆ ನಡೆದಿದೆ.

ಮನೋಜ್ (28) ಕಿಡ್ನ್ಯಾಪ್ ಆದ ಉದ್ಯಮಿ. ಈತನನ್ನು ಕಿಡ್ನ್ಯಾಪ್ ಮಾಡಿ ರೌಡಿಶೀಟರ್‌ಗಳು ಲಕ್ಷಗಟ್ಟಲೆ ಹಣ ಕಿತ್ತಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಭೋವಿ ನಿಗಮದ ಅಕ್ರಮ; ಕಾಂಗ್ರೆಸ್ ಸರ್ಕಾರದ 60% ಕಮಿಷನ್‌ಗೆ ಸಾಕ್ಷಿ – ಜೆಡಿಎಸ್ ಕಿಡಿ

ಉದ್ಯಮಿಗೆ ರೌಡಿಶೀಟರ್ ರಾಜೇಶ್ @ ಅಪ್ಪಿ ಪರಿಚಯವಿದ್ದ. ಒಂದು ವರ್ಷದ ಹಿಂದೆ ನಿರ್ದೇಶಕ ನಂದಕಿಶೋರ್‌ಗೆ ರೌಡಿ ರಾಜೇಶ್ ಸಾಲ ಕೊಡಿಸಿದ್ದ. ಮನೋಜ್‌ನಿಂದ ನಂದಕಿಶೋರ್‌ಗೆ 1.20 ಲಕ್ಷ ಸಾಲ ಕೊಡಿಸಿದ್ದ. ನಿರ್ದೇಶಕನಿಂದ ಅಸಲು ಮತ್ತು ಬಡ್ಡಿ ಬರದೇ ಮನೋಜ್ ನೊಂದಿದ್ದ.

ಹಣ ಕೊಡಿಸಿದ್ದು ನೀನೆ, ಸಾಲ ವಾಪಸ್ ಕೊಡಿಸು ಅಂತಾ ರೌಡಿ ರಾಜೇಶನ ಬೆನ್ನು ಬಿದ್ದಿದ್ದ. ಗೌರಿ ಹಬ್ಬದ ದಿನ ನಂದಕಿಶೋರ್ ಮನೆ ಬಳಿ ಬಾ ಹಣ ಕೊಡಿಸ್ತೀನಿ ಅಂತಾ ಮನೋಜ್‌ನ ರೌಡಿಶೀಟರ್ ಕರೆಸಿದ್ದ. ಹಣ ಕೊಡಿಸೋದಾಗಿ ಕರೆಸಿ ಬಸವೇಶ್ವರನಗರದ ನಂದಕಿಶೋರ್ ಹಳೆಯ ಅಪಾರ್ಟ್ಮೆಂಟ್ ಬಳಿಯಿಂದ ಕಿಡ್ನ್ಯಾಪ್ ಮಾಡಿಸಿದ್ದಾನೆ. ಇದನ್ನೂ ಓದಿ: ಅಮೆರಿಕದಲ್ಲಿ ಭೀಕರ ಅಪಘಾತ – ಕೋಲಾರ ಮೂಲದ ಬಾಡಿ ಬಿಲ್ಡರ್ ದುರ್ಮರಣ

ರೌಡಿಗಳಾದ ರಾಜೇಶ್, ಬೇಕರಿ ರಘು, ಅಣ್ಣ ಸೀನ @ ಶ್ರೀನಿವಾಸ್, ಲೋಕಿ, ಸೋಮ, ರಾಜೇಶ್ ಮತ್ತು ನವೀನ್ ಸೇರಿಕೊಂಡು ಕಿಡ್ನ್ಯಾಪ್ ಮಾಡಿದ್ದರು. ಅಪಹರಣ ಮಾಡಿ 3 ಲಕ್ಷ ಹಣ ವರ್ಗಾವಣೆ ಮಾಡಿಸಿಕೊಂಡಿದ್ದರು. ಅಲ್ಲದೇ, 10 ಲಕ್ಷ ನೀಡದಿದ್ರೆ ಮನೋಜ್ ಕುಟುಂಬಸ್ಥರ ಕೊಲೆ ಮಾಡೋದಾಗಿ ಬೆದರಿಕೆ ಹಾಕಿದ್ದಾರೆ.

ಹಣ ಹೊಂದಿಸುವುದಾಗಿ ಹೇಳಿ ಬಿಡಿಸಿಕೊಂಡು ಬಂದು ಮನೋಜ್ ದೂರು ನೀಡಿದ್ದಾರೆ. ಮನೋಜ್ ದೂರಿನ ಆಧಾರದ ಸಿಸಿಬಿಯಿಂದ 6 ರೌಡಿಗಳ ಬಂಧನವಾಗಿದೆ.

Share This Article