ಬಿಹಾರದಲ್ಲಿ ಬಿಜೆಪಿ ನಾಯಕನನ್ನು ಗುಂಡಿಕ್ಕಿ ಹತ್ಯೆಗೈದ ದುಷ್ಕರ್ಮಿಗಳು

Public TV
1 Min Read

ಪಾಟ್ನಾ: ಬಿಹಾರದ (Bihar) ರಾಜಧಾನಿ ಪಾಟ್ನದಲ್ಲಿ (Patna) ಬಿಜೆಪಿ (BJP) ನಾಯಕ ಹಾಗೂ ಉದ್ಯಮಿ ಒಬ್ಬರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿದ್ದಾರೆ. ಹತ್ಯೆಯಾದವರನ್ನು ಗೋಪಾಲ್ ಖೇಮ್ಕಾ ಎಂದು ಗುರುತಿಸಲಾಗಿದೆ.

ಪಾಟ್ನಾದ ಮನೆಯ ಮುಂದೆಯೇ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿದ್ದಾರೆ. ಮಾಡಲಾಗಿದೆ. ಬಿಜೆಪಿ ನಾಯಕ ಗೋಪಾಲ್ ಖೇಮಾ ಮನೆಗೆ ತೆರಳುತ್ತಿದ್ದಾಗ ಗಾಂಧಿ ಮೈದಾನ ಪೊಲೀಸ್ ಠಾಣೆ ಪ್ರದೇಶದ ‘ಪನಾಚೆ’ ಹೋಟೆಲ್ ಬಳಿ ಈ ಘಟನೆ ನಡೆದಿದೆ.

ಗಾಂಧಿ ಮೈದಾನ ಪೊಲೀಸ್ ಠಾಣೆ ವ್ಯಾಪ್ತಿಯ ಪನಾಚೆ ಹೋಟೆಲ್ ಪಕ್ಕದಲ್ಲಿರುವ ‘ಟ್ವಿನ್ ಟವರ್’ ಸೊಸೈಟಿಯಲ್ಲಿ ಖೆಮ್ಕಾ ಅವರು ವಾಸಿಸುತ್ತಿದ್ದರು. ಅವರು ಮನೆ ಕಡೆಗೆ ತೆರಳುತ್ತಿದ್ದಾಗ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಪರಿಣಾಮ ಅವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಪೊಲೀಸರು ಒಂದು ಗುಂಡನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಶಿಶು ಮರಣ ತಗ್ಗಿಸಿದ ಅಮೃತ – ಜೀವ ಸಂಜೀವಿನಿಯಾಗಿ ಲೇಡಿಗೋಷನ್ ಹ್ಯೂಮನ್ ಮಿಲ್ಕ್ ಬ್ಯಾಂಕ್

ಘಟನೆ ಸಂಬಂಧ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಕೃತ್ಯದ ಹಿಂದಿನ ಕಾರಣ ಇನ್ನೂ ತಿಳಿದುಬಂದಿಲ್ಲ. ಖೆಮ್ಕಾ ಅವರ ಮಗ ಗುಂಜನ್ ಖೇಮ್ಕಾ ಅವರನ್ನು ಮೂರು ವರ್ಷಗಳ ಹಿಂದೆ ಕೊಲೆ ಮಾಡಲಾಗಿತ್ತು.

ಘಟನಾ ಸ್ಥಳಕ್ಕೆ ಸಂಸದ ರಾಜೇಶ್ ರಂಜನ್ ಭೇಟಿ ನೀಡಿ, ನಿತೀಶ್ ಕುಮಾರ್ ನೇತೃತ್ವದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಬಿಹಾರದಲ್ಲಿ ಯಾರೂ ಸುರಕ್ಷಿತವಾಗಿಲ್ಲ. ಬಿಹಾರ ಅಪರಾಧಿಗಳಿಗೆ ಆಶ್ರಯ ತಾಣವಾಗಿದೆ. ನಿತೀಶ್ ಜಿ, ದಯವಿಟ್ಟು ಬಿಹಾರವನ್ನು ಉಳಿಸಿ. ಖೆಮ್ಕಾ ಅವರ ಮಗ ಹತ್ಯೆಯಾದಾಗ ಸರ್ಕಾರ ಸರ್ಕಾರ ಕಠಿಣ ಕ್ರಮ ಕೈಗೊಂಡಿದ್ದರೆ, ಗೋಪಾಲ್ ಖೇಮ್ಕಾ ಇಂದು ಕೊಲೆಯಾಗುತ್ತಿರಲಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: F-35 ಫೈಟರ್‌ ಜೆಟ್‌ ರಿಪೇರಿಗೆ ಬ್ರಿಟನ್‌ನಿಂದ ಇಂದು 40 ತಂತ್ರಜ್ಞರ ತಂಡ

Share This Article